ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚುತ್ತಿರುವ ಜನಸಂಖ್ಯೆ ಮಾರಕ
ಕ.ಪ್ರ. ವಾರ್ತೆ ಕೊರಟಗೆರೆ ಜು.15
ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚುತ್ತಿರುವ ಜನಸಂಖ್ಯೆ ಮಾರಕವಾಗಿದೆ. ಸಣ್ಣ ಕುಟುಂಬವೇ ಅಭಿವೃದ್ಧಿ ಸಂಕೇತ ಎಂದು ಎಲೆರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಕೇಶವಮೂರ್ತಿ ತಿಳಿಸಿದರು.
ಅವರು ತಾಲೂಕಿನ ಎಲೆರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಗ್ರಾಮೀಣ ಜನತೆಗೆ ಜನಸಂಖ್ಯೆ ಬಗ್ಗೆ ಅರಿವು ಮೂಡಿಸಲು ಏರ್ಪಡಿಸಿದ್ದ ಜಾಥಾ ಉದ್ಘಾಟಿಸಿ ಮಾತನಾಡಿದರು. ವಿಶ್ವದ ಜನಸಂಖ್ಯೆಯಲ್ಲಿ ಭಾರತ ದೇಶ ಎರಡನೇ ಸ್ಥಾನ ಹೊಂದಿದ್ದು ಇದರಿಂದಾಗಿ ದೇಶದಲ್ಲಿ ಅತೀಯಾದ ಜನಸಂಖ್ಯೆಯಿಂದ ಆಹಾರದ ಪದಾರ್ಥಗಳ ಕೊರತೆ, ವಸತಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಇದರಿಂದ ಅಪೌಷ್ಟಿಕತೆಯೂ ಸಹ ಹೆಚ್ಚಾಗಿದ್ದು, ಆರೋಗ್ಯ ಸವಲತ್ತು ಮತ್ತು ವಿಜ್ಞಾನ ಬೆಳೆದಂತೆ ಮರಣ ಪ್ರಮಾಣ ಹೆಚ್ಚಾಗಿದೆ. ಪ್ರತಿಯೊಬ್ಬರು ಸಣ್ಣ ಕುಟುಂಬ ಅಭಿವೃದ್ಧಿ ಸಂಕೇತ ಎಂಬ ಫೋಷಣೆಯಂತೆ ಜನಸಂಖ್ಯೆ ಹೆಚ್ಚುವಿಕೆಗೆ ಕಡಿವಾಣ ಹಾಕಬೇಕೆಂದರು.ಗ್ರಾ.ಪಂ.ಅಧ್ಯಕ್ಷೆ ಸೌಭ್ಯಾಗ್ಯಮ್ಮ, ಸದಸ್ಯೆ ಮೆಹರ್ತಾಜ್, ಆರೋಗ್ಯ ಇಲಾಖೆಯ ಎಸ್.ವಿ. ವೀರೇಶ್, ಅಶ್ವತ್ಥಪ್ಪ, ಮುರಳಿಧರ್, ಶೈಲಕನ್ನಾಳ, ಮಧು, ಆಶಾ ಸುಬ್ಬಮ್ಮ ಸೇರಿದಂತೆ ಇನ್ನಿತರರು ಭಾಗವಹಿಸಿದ್ದು ಶಾಲಾ ಮಕ್ಕಳು ಗ್ರಾಮದ ಎಲ್ಲಾ ಬೀದಿಗಳಲ್ಲಿ ಜಾಥಾ ನಡೆಸಿ ಜನತೆಯಲ್ಲಿ ಚಿಕ್ಕ ಕುಟುಂಬ ಸುಖಿ ಕುಟುಂಬ ಎಂಬುದರ ಬಗ್ಗೆ ಅರಿವು ಮೂಡಿಸದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

