ತುಮಕೂರು

ರೈತ ಅನುವುಗಾರರಿಗೆ ಬಾಳೆ ಉಪಯೋಗಿಸುವ ಕುರಿತು ಪ್ರಾತ್ಯಕ್ಷಿಕೆ

Published On :

ತಿಪಟೂರು: ತಾಲೂಕಿನ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭೂಚೇತನ ಯೋಜನೆಯಡಿ ತುರುವೇಕೆರೆ ತಾಲೂಕಿನ ರೈತ ಅನುವುಗಾರರಿಗೆ ಒಂದು ವಾರದ ತರಬೇತಿ ಕಾರ್ಯಕ್ರಮದ ಮೂರನೇ ದಿನದಂದು ಬಾಳೆ ಸ್ಪೆಷಲ್ ಉಪಯೋಗಿಸುವ ಕುರಿತು ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.  ಕೇಂದ್ರದ ತೋಟಗಾರಿಕೆ ವಿಷಯ ತಜ್ಞರಾದ ಡಾ.ನಾಗಪ್ಪದೇಸಾಯಿ ಮಾತನಾಡಿ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಇವರ ಸಂಶೋಧನೆಯಿಂದ ಧೃಡೀಕರಿಸಿದ ಬಾಳೆ ಸ್ಪೆಷಲ್ ಇದು ಒಂದು ಬೆಳೆ. ನಿರ್ದಿಷ್ಟ ಸೂಕ್ಷ್ಮ ಪೋಷಕಾಂಶದ ಮಿಶ್ರಣವಾಗಿದೆ. ಒಂದು ಎಕರೆಗೆ 12ಕಿ.ಗ್ರಾಂ. ಬಾಳೆ ಸ್ಪೆಷ ಅನ್ನು ಒಟ್ಟು 5 ಬಾರಿ ವಿವಿಧ ಹಂತಗಳಲ್ಲಿ ಸಿಂಪರಣೆ ಮಾಡಬೇಕು. ಪ್ರತಿ 75ಗ್ರಾಂ ಬಾಳೆ ಸ್ಪೆಷಲ್ ಒಂದು ಶಾಂಪೂ ಸ್ಯಾಚೆಟ್ (1ರು.) ಮತ್ತು ಒಂದು ನಿಂಬೆಹಣ್ಣಿನ ರಸವನ್ನು 15ಲೀಟರ್ ನೀರಿನಲ್ಲಿ ಮಿಶ್ರಣ ಮಾಡಬೇಕು. ಬಾಳೆಗಿಡ ನಾಟಿ ಮಾಡಿದ 5 ತಿಂಗಳ ನಂತರ ಪ್ರತಿ 30 ದಿನಕ್ಕೆ ಒಮ್ಮೆ ಈ ಮಿಶ್ರಣವನ್ನು ಸಿಂಪಡಿಸಬೇಕು. ಇದೆ ಕ್ರಮವನ್ನು 8ನೇ ತಿಂಗಳವರೆಗೆ (5ನೇ, 6ನೇ,7ನೇ ಮತ್ತು 8ನೇ ತಿಂಗಳಿಗೆ) ನಾಲ್ಕು ಸಿಂಪರಣೆಯನ್ನು ಮಾಡಬೇಕು. 5ನೇ ಸಿಂಪರಣೆಯನ್ನು ಬಾಳೆಗೊನೆ ಮತ್ತು ಎಲೆಗಳ ಮೇಲೆ ಮಾಡಬೇಕು. ಸಿಂಪರಣೆಯನ್ನು ಬೆಳಗ್ಗೆ ಮತ್ತು ಸಾಯಂಕಾಲ ಮಾಡಬೇಕಾಗುತ್ತದೆ. ಇದರಿಂದ ಶೇ.12-15ರಷ್ಟು ಅಧಿಕ ಇಳುವರಿ ಪಡೆಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.