ತುಮಕೂರು

ಸೌಲಭ್ಯ ಬಳಸಿಕೊಂಡು ಶಿಕ್ಷಣದಲ್ಲಿ ಮುಂದೆ ಬನ್ನಿ: ಕರಿಯಪ್ಪ

Published On :

ಕ.ಪ್ರ. ವಾರ್ತೆ   ತುಮಕೂರು   ಜು.15
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರದಿಂದ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಸಿಗುವಂತ ಸೌಲಭ್ಯ ಬಳಸಿಕೊಂಡು ಶಿಕ್ಷಣದಲ್ಲಿ ಮುಂದೆ ಬರಬೇಕೆಂದು ಶಿರಾದ ಸಹಾಯಕ ಶಿಶು ಕಲ್ಯಾಣಾಧಿಕಾರಿ ಕರಿಯಪ್ಪ ಅಭಿಪ್ರಾಯಪಟ್ಟರು.
ಅವರು ಶಿರಾ ತಾಲೂಕು ಅಮಲಗೊಂದಿಯ ಅಕಾಯ್ ಸಂಸ್ಥೆ ಆವರಣದಲ್ಲಿ ಚೈಲ್ಡ್  ಫಂಡ್ ಇಂಡಿಯಾ ಮತ್ತು ಅಮಲ ಕುಟುಂಬ ಅಭಿವೃದ್ಧಿ ಯೋಜನೆ ಏರ್ಪಡಿಸಿದ್ದ ವಿಕಲ ಚೇತನ ಮಕ್ಕಳಿಗೆ ಉಚಿತ ಟ್ರೈಸಿಕಲ್ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಗೌ.ಮು. ನಾಗರಾಜು ಮಾತನಾಡಿ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ನೀಡುತ್ತಿರುವ ನೆರವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಿ ಅವರು ಮಾತನಾಡಿ ಸಾಧನೆ ಮಾಡಬೇಕೆಂಬ  ಮನಸ್ಸಿದ್ದಲ್ಲಿ ಅಂಗವಿಕಲತೆ ಅಡ್ಡಿ ಬರುವುದಿಲ್ಲ. ನಮ್ಮ ಜೀವನವನ್ನು ಹಸನುಗೊಳಿಸಲು ನಮ್ಮ ಪ್ರಯತ್ನ ಮುಖ್ಯ ಎಂದರು. ಪೋಷಕ ಸಮಿತಿ ಸದಸ್ಯ ಎಲ್.ಟಿ. ರಂಗನಾಥ್ ಅವರು ವಿಕಲ ಚೇತನ ಮಕ್ಕಳಿಗೆ ಉಚಿತ ಟ್ರೈಸಿಕಲ್ ಮತ್ತು 1150 ಮಂದಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪೆನ್ನು ಮತ್ತು ನೋಟ್ ಪುಸ್ತಕ ಹಾಗೂ ಮೂರು ಮಂದಿ ಮಕ್ಕಳಿಗೆ ಟ್ರೈಸಿಕಲ್ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.