ಸರ್ಕಾರಿ ನೌಕರರ ಸಂಘದ ಚುನಾವಣೆ
ಗುಬ್ಬಿ: ರಾಜ್ಯ ಸರ್ಕಾರಿ ನೌಕರರ ಸಂಘ, ಗುಬ್ಬಿ ತಾಲೂಕು ಶಾಖೆ ಕಾರ್ಯಕಾರಿ ಸಮಿತಿಗೆ ಜು. 22 ರಂದು ಚುನಾವಣೆ ನಡೆಯಲಿದೆ. ಉಮೇದುವಾರಿಕೆ ಸಲ್ಲಿಸಲು ಜು. 16 ಅಂತಿಮ ದಿನವಾಗಿದ್ದು, 6 ಇಲಾಖೆಗಳಿಂದ 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವಿರೋಧವಾಗಿ 17 ಇಲಾಖೆಗಳ 17 ನೌಕರರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಲಕ್ಷ್ಮಣಪ್ಪ ತಿಳಿಸಿದ್ದಾರೆ. ಪಶು ಸಂಗೋಪನೆ ಇಲಾಖೆಯಿಂದ ಶೇಕ್ ಶೌಕತ್ ಉಲ್ಲಾಕೆ, ಮೀನುಗಾರಿಕೆ ಇಲಾಖೆಯಿಂದ ರಾಮಕೃಷ್ಣಯ್ಯ, ಸಾಂಖ್ಯಿಕ ಆಹಾರ ಇಲಾಖೆಯಿಂದ ನರಸಿಂಹಮೂರ್ತಿ, ಕಂದಾಯ ಇಲಾಖೆಯಿಂದ ಕೆ.ವಿ.ನಾರಾಯಣ್, ಲೋಕೊಪಯೋಗಿ, ನೀರಾವರಿ ಇಲಾಖೆಯಿಂದ ಕರುಣಾಕರಶೆಟ್ಟಿ,ನಾಗರಾಜು, ಸಮಾಜ ಕಲ್ಯಾಣ ಇಲಾಖೆಯಿಂದ ಶ್ರೀನಿವಾಸ್, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಇಲಾಖೆಯಿಂದ ಕೆ.ಹರೀಶ್, ಅಬಕಾರಿ ಕಾರ್ಮಿಕ ಇಲಾಖೆಯಿಂದ ರಂಗಸ್ವಾಮಯ್ಯ, ಕೈಗಾರಿಕಾ ವಾಣಿಜ್ಯ ಇಲಾಖೆಯಿಂದ ಎಚ್.ಜಿ. ಸುಮನ, ತೋಟಗಾರಿಕೆ ಇಲಾಖೆಯಿಂದ ಶಿವಕುಮಾರ್, ಖಜಾನೆ ಇಲಾಖೆಯಿಂದ ನಾರಾಯಣಪ್ಪ, ಭೂಮಾಪನ ಕಂದಾಯ ಇಲಾಖೆಯಿಂದ ಕೆ.ಎಸ್. ಶಿವಪ್ರಸಾದ್, ನ್ಯಾಯಾಂಗ ಇಲಾಖೆಯಿಂದ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಚಂದ್ರಯ್ಯ, ಜಲಾನಯನ ಅಭಿವೃದ್ಧಿ ಇಲಾಖೆಯಿಂದ ನಂಜೇಗೌಡ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
22ರಂದು ನೌಕರರ ಸಂಘದ ಚುನಾವಣೆ
ಕುಣಿಗಲ್: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ 29 ಸ್ಥಾನಗಳ ಪೈಕಿ 22 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಏಳು ಸ್ಥಾನಗಳಾದ ಪಶುಪಾಲನಾ, ಸಮಾಜ ಕಲ್ಯಾಣ, ರೇಷ್ಮೆ, ತಾಲೂಕು ಪಂಚಾಯಿತಿಯ ತಲಾ ಒಂದು ಸ್ಥಾನಕ್ಕೆ ಹಾಗೂ ಶಿಕ್ಷಣ ಇಲಾಖೆಯ ಮೂರು ಸ್ಥಾನಗಳಿಗೆ ಜು. 22ರಂದು ಜಿಕೆಬಿಎಂಎಸ್ ಶಾಲಾ ಕೊಠಡಿಯಲ್ಲಿ ಬೆಳಗ್ಗೆ 11ರಿಂದ ಸಂಜೆ ನಾಲ್ಕರವರೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಚ್.ಎಸ್. ಕೆಂಚಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ವಿಮಾ ಯೋಜನೆ ವಿಸ್ತರಣೆ
ಪಾವಗಡ: ರೈತರ ಅನುಕೂಲಕ್ಕಾಗಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅವಧಿಯನ್ನು ಜು. 20ರ ವರೆಗೆ ವಿಸ್ತರಿಸಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಶ್ರೀಧರ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅವಧಿಯನ್ನು ಜೂನ್ 30ಕ್ಕೆ ಅಂತಿಮಗೊಳಿಸಿದ್ದು, ರೈತರ ಅನುಕೂಲಕ್ಕಾಗಿ ಜು. 20ರವರೆಗೆ ಅವಧಿ ವಿಸ್ತರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

