ಕುಡುಕರ ಹಾವಳಿ: ಗೆದ್ದಲಹಳ್ಳಿ ಸಿಟಿ ಬಸ್ಗಳಲ್ಲಿ ಆತಂಕ
ಕ.ಪ್ರ.ವಾರ್ತೆ ತುಮಕೂರು ಜು. 19
ತುಮಕೂರಿನ ಗೆದ್ದಲಹಳ್ಳಿ ಸಿದ್ದಗಂಗಾ ನಗರ ಸಾರಿಗೆ ಬಸ್ಗಳಲ್ಲಿ ಕುಡುಕರ ಹಾವಳಿ ವಿಪರೀತವಾಗಿದ್ದು,
ಜನತೆ, ವಿಶೇಷವಾಗಿ ಮಹಿಳೆಯರು ಹಾಗೂ ನಗರ ಸಾರಿಗೆ ಸಿಬ್ಬಂದಿ ಆತಂಕದಲ್ಲಿದ್ದಾರೆ.
ಕೆಎಸ್ಆರ್ಟಿಸಿ ಬಸ್ಟ್ಯಾಂಡ್ ಮೂಲಕ ಟೌನ್ಹಾಲ್, ಭದ್ರಮ್ಮ ಛತ್ರ, ಉಪ್ಪಾರಹಳ್ಳಿ ಮಾರ್ಗವಾಗಿ ಗೂಳರಿವೆ, ಗೆದ್ದಲಹಳ್ಳಿ ತಲುಪುವ ಈ ಸಿದ್ದಗಂಗಾ ನಗರ ಸಾರಿಗೆ ಬಸ್ಗಳಲ್ಲಿ ಹಗಲು ವೇಳೆಯಲ್ಲೇ ಕುಡುಕರ ಹಾವಳಿ ಇತ್ತು. ಇದು ಈಗ ಇನ್ನಷ್ಟು ಹೆಚ್ಚಿದೆ. ಇನ್ನು ರಾತ್ರಿ ವೇಳೆಯಂತೂ ಹೇಳ ತೀರದಾಗಿದೆ ಎಂದು ಜನತೆ ಹಾಗೂ ಸಿದ್ದಗಂಗಾ ನಗರ ಸಾರಿಗೆ ಕಂಡಕ್ಟರ್ಗಳು ಹಾಗೂ ಡ್ರೈವರ್ಗಳು ಅಳಲು ತೋಡಿಕೊಂಡಿದ್ದಾರೆ.
ಮಹಿಳಾ ಕಂಡಕ್ಟರ್ಗಳಂತೂ ಈ ಕುಡುಕರ ಹಾವಳಿ, ಅಶ್ಲೀಲ ಪದಗಳ ಹಾವಳಿಗೆ ಬೇಸತ್ತು ಹೋಗಿದ್ದು, ವಿಧಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಕುಡುಕ ಪ್ರಯಾಣಿಕರ ಬಳಿ ಕಂಡಕ್ಟರ್ಗಳು ಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇವರು ಟಿಕೆಟ್ ತೆಗೆದುಕೊಳ್ಳುವುದೂ ಇಲ್ಲ. ಟಿಕೆಟ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದರೆ ಕಂಡಕ್ಟರ್ಗಳ ಮೇಲೆ ಜಗಳಕ್ಕೆ ಬೀಳುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ.
ಚಕಿಂಗ್ ಬಂದ ವೇಳೆ ಟಿಕೆಟ್ ತೆಗೆದುಕೊಳ್ಳದ ಪ್ರಯಾಣಿಕರಷ್ಟೇ ಅಲ್ಲ, ಕಂಡಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಹೀಗಾಗಿ ಕಂಡಕ್ಟರ್ಗಳು ಕುಡುಕ ಪ್ರಯಾಣಿಕರ ಟಿಕೆಟ್ ಹಣವನ್ನು ತಾವೇ ಪಾವತಿಸಿ, ಟಿಕೆಟ್ ಹರಿದು, ಒತ್ತಾಯ ಮಾಡಿ ಕುಡುಕರ ಕೈಗಿತ್ತು ಹೋಗುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಪ್ರಯಾಣಿಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಈ ಕುಡುಕರ ಹಾವಳಿಯಿಂದಾಗಿ ಸಂಜೆ ವೇಳೆ ಸಂಚರಿಸುವ ಗೆದ್ದಲಹಳ್ಳಿ ಮಾರ್ಗದ ಬಸ್ಗಳನ್ನು ಕಳೆದ 3 ದಿನಗಳಿಂದ ತಡೆಹಿಡಿಯಲಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಶಾಶ್ವತವಾಗಿ ಗೆದ್ದಲಹಳ್ಳಿ ಮಾರ್ಗದ ಸಂಜೆ ಬಸ್ಗಳು ನಿಂತು ಹೋದರೆ ಏನು ಮಾಡುವುದು ಎಂಬ ಆತಂಕ ಕೂಡ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

