ಚುನಾವಣಾ ವೆಚ್ಚಸಲ್ಲಿಸದವರಿಗೆ ಅನರ್ಹತೆ ಶಿಕ್ಷೆ
ಚಿಕ್ಕನಾಯಕನಹಳ್ಳಿ: ಕಳೆದ ಪುರಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳು ಚುನಾವಣಾ ವೆಚ್ಚವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯವಾಗಿದ್ದು,ಇದುವರೆಗು ಸಲ್ಲಿಸದಿರುವ ಅಭ್ಯರ್ಥಿಗಳು ಕೂಡಲೇ ಚುನಾವಣಾ ವೆಚ್ಚವನ್ನು ಸಲ್ಲಿಸಲು ಶಿರಸ್ತೇದಾರ್ ಶಿವಶಂಕರ್ ತಿಳಿಸಿದ್ದಾರೆ. ಲೆಕ್ಕಪತ್ರ ಸಲ್ಲಿಸದವರ ಪೈಕಿ ವಿಧಾನಸಭೆ ಚುನಾವಣೆ ಜೆಡಿಯು ಅಭ್ಯರ್ಥಿ ಜಿ.ಪ್ರಕಾಶ್ ಮತ್ತು ಪುರಸಭೆಯಲ್ಲಿ 4ನೇ ವಾರ್ಡಿನ ಶೈಲಜ, 16ನೇ ವಾರ್ಡಿನ ಬಾಬುಸಾಹೇಬ್, 20ನೇ ವಾರ್ಡಿನ ಶಕುಂತಲಮ್ಮ ಇವರು ಚುನಾವಣೆ ವೆಚ್ಚ ಸಲ್ಲಿಸಿರುವುದಿಲ್ಲ. ಇವರಿಗೆ ಈಗಾಗಲೇ 2 ಬಾರಿ ಎಚ್ಚರಿಕೆ ನೊಟೀಸ್ ನೀಡಲಾಗಿದ್ದು, ಆದರೂ ಸಹ ವೆಚ್ಚದ ವಿವರವನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ತಾಲೂಕು ಚುನಾವಣಾ ಶಾಖೆ ಸದರಿ ಅಭ್ಯರ್ಥಿಯ ವಿವರಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಲೆಕ್ಕಪತ್ರ ಸಲ್ಲಿಸದ ಅಭ್ಯರ್ಥಿಗಳು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಚುನಾವಣಾ ಶಾಖೆ ಶಿರಸ್ತೇದಾರ್ ಶಿವಶಂಕರ್ ತಿಳಿಸಿದರು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಪುಟ್ಟರಾಮಯ್ಯ ಇದ್ದರು.
ಛಾಯಾಗ್ರಾಹಕರ ಸಂಘದ ಉದ್ಘಾಟನೆ ಇಂದು
ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿಯ ಛಾಯಾಗ್ರಾಹಕರ ಸಂಘದ ಉದ್ಘಾಟನೆ ಸಮಾವೇಶ ಹಾಗೂ ಕಾರ್ಯಾಗಾರವನ್ನು ಶನಿವಾರ ಬೆಳಿಗ್ಗೆ 11ಗಂಟೆಗೆ ಶ್ರೀ ಉಡಿಸಲ ಕೆಂಪಮ್ಮ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಕಮಲಮ್ಮ ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಕೆ.ಷಡಕ್ಷರಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಬಿ.ಸಿ.ನಾಗೇಶ್, ತಹಸೀಲ್ದಾರ್ ಮಂಜುನಾಥ್, ರಾಜ್ಯ ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಬಿ.ಎಸ್.ಶಶಿಧರ್, ಉಪಾಧ್ಯಕ್ಷ ಪರಮೇಶ್, ಛಾಯಾಗ್ರಾಹಕರ ಸಂಘದ ತಾ.ಅಧ್ಯಕ್ಷ ಲೋಕೇಶ್ ಮತ್ತಿತರರು ಭಾಗವಹಿಸಲಿದ್ದಾರೆ.
ರೋಗಿಗಳಿಗೆ ಹಾಲು, ಬ್ರೇಡ್ ವಿತರಣೆ
ತಿಪಟೂರು: ತಾಲೂಕಿನ ಕೆಜೆಪಿ ಮುಖಂಡರಾದ ಲೋಕೇಶ್ವರರವರು 56ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು. ನಂತರ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ಮನೆಯ ಮುಂಭಾಗದಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್ವರ, ಉತ್ತರಾಖಂಡದ ಪ್ರವಾಹಕ್ಕೆ ಸಿಲುಕಿದ ಭಕ್ತಾದಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ವೀರ ಮರಣ ಹೊಂದಿದ ಕರ್ನಾಟಕದ ಇಬ್ಬರು ಯೋಧರ ಕುಟುಂಬಗಳಿಗೆ ತಲಾ 25 ಸಾವಿರ ಪರಿಹಾರವನ್ನು ವೈಯಕ್ತಿಕವಾಗಿ ನೀಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

