ಸವಲತ್ತುಗಳ ಸದ್ಬಳಕೆಗೆ ಸ್ವಾಮೀಜಿ ಸಲಹೆ
ಚಿಕ್ಕನಾಯಕನಹಳ್ಳಿ: ಕಂಬಳಿ ನೇಕಾರರು ಸರ್ಕಾರದ ಸವಲತ್ತುಗಳ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ ಮತ್ತು ಸಮಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀಈಶ್ವರಾನಂದಪುರಿ ಸ್ವಾಮೀಜಿ ನುಡಿದರು.
ಅವರು ಪಟಟಣದ ಶ್ರೀರೇವಣ ಸಿದ್ದೇಶ್ವರ ಕಂಬಳಿ ಉತ್ಪಾದನಾ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಐಸಿಐಸಿಐ ಆರೋಗ್ಯ ವಿಮೆ, ಕಂಬಳಿ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ ಚೆಕ್ಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾವ ವ್ಯಕ್ತಿಯಾಗಲಿ ತನ್ನ ವೃತ್ತಿಯನ್ನು ನಿಷ್ಠೆಯಿಂದ ಮಾಡಿದಾಗ ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯ.
ಈ ನಿಟ್ಟಿನಲ್ಲಿ ಕುರುಬ ಸಮಾಜದ ಕುಲಕಸುಬಾದ ಕಂಬಳಿ ನೇಯ್ಗೆ ಪವಿತ್ರವಾದ ವೃತ್ತಿ. ಅದನ್ನು ನಶಿಸಿ ಹೋಗಲು ಬಿಡಬಾರದು. ಅದರ ಜೊತೆಗೆ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದುವತ್ತ ಹೆಚ್ಚು ಹೆಚ್ಚು ಗಮನಹರಿಸಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ನೇಕಾರರ ಸಂಘದವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್ಬಾಬು ಈ ಜನಾಂಗ ಎಲ್ಲಾ ರಂಗಗಳಲ್ಲಿ ಇನ್ನು ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನ್ಲಲಿ ಶಾಸಕನಾಗಿ ನಾನು ನನ್ನ ಸಹಕಾರವನ್ನು ಮನಸಾ ಧಾರೆಯೆರೆಯುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಿಲ್ಲಾ ಪಂಚಾಯ್ತಿಗಳ ಮೂಲಕ ಕಂಬಳಿ ನೇಕಾರರಿಗೆ ಅನೇಕ ಸೌಲಭ್ಯಗಳು ದೊರೆಯುತ್ತವೆ. ಅವುಗಳನ್ನು ಪಡೆದು ಜೀವನದಲ್ಲಿ ಮುಂದೆ ಬನ್ನಿ. ಸರ್ಕಾರದ ಕಡೆಯಿಂದ ಆಗಬಹುದಾದ ಯಾವುದೇ ಕೆಲಸವಿರಲಿ ನಾನು ಶ್ರಮಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆಗೆ ಎರಡನೇ ಬಾರಿ ಆಯ್ಕೆಯಾಗಿರುವ ಮತ್ತು ಸಂಘದ ನಿರ್ದೇಶಕರಾದ ಸಿ.ಡಿ.ಚಂದ್ರಶೇಖರ್ ಅವರನ್ನು ಸಹ ಅಭಿನಂದಿಸಲಾಯಿತು. ಸಂಘದ ವತಿಯಿಂದ ಅಭಿನಂದನೆಯನ್ನು ಶ್ರೀಗಳ ಮುಖಾಂತರ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ಜಿ.ಆರ್. ಗಂಗಾಧರಯ್ಯ, ಉಪಾಧ್ಯಕ್ಷರಾದ ಭಾರತಿ, ಪುರಸಭಾ ಸದಸ್ಯರಾದ ಸಿ.ಎಂ. ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ರವಿಚಂದ್ರ, ಸಂಘದ ನಿರ್ದೇಶಕರಾದ ಸಿ.ಎಂ.ಬೀರಲಿಂಗಯ್ಯ, ಸಿ.ಎನ್. ವಿಜಯಕುಮಾರ್, ಸಿ.ಎಚ್. ಹಳವೀರಯ್ಯ, ಸಿ.ಎಚ್. ಲೋಕೇಶ್, ಗೋವಿಂದಯ್ಯ, ಮುಂತಾದವರಿದ್ದರು. ಸಂಘದ ಕಾರ್ಯದರ್ಶಿ ಕೋದಂಡರಾಮಯ್ಯ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

