ಮಕ್ಕಳಿಂದ ಭ್ರಷ್ಟಾಚಾರ ತಡೆ ಸಾಧ್ಯ'
ಕ.ಪ್ರ. ವಾರ್ತೆ ತುಮಕೂರು ಜೂ. 1
ಈ ದೇಶದ ಮಕ್ಕಳು ಮನಸ್ಸು ಮಾಡಿದರೆ ಭ್ರಷ್ಟಾಚಾರವನ್ನು ಖಂಡಿತವಾಗಿ ನಿಲ್ಲಿಸಬಹುದು ಎಂದು ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಹಿರೇಮಠದಲ್ಲಿ ಇಪ್ಪತ್ತೊಂದು ದಿನಗಳ ಕಾಲ ನಡೆದ ಚಿಗುರು ಚಿತ್ತಾರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದಿನೇ ಹೆಚ್ಚುತ್ತಿರುವ ಲಂಚಗುಳಿತನವನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಮಕ್ಕಳು ಮನಸ್ಸು ಮಾಡಬೇಕು, ಅಷ್ಟೇ. ನಮಗೆ ನಿಮ್ಮ ಅನ್ಯಾಯದ ಗಳಿಕೆ ಬೇಡ. ಬೇಡವೇ ಬೇಡ. ನಮ್ಮ ಪಾಲನೆ-ಪೋಷಣೆಗಾಗಿ ನೀವು ಅನ್ಯಾಯದ ದುಡ್ಡು ಮತ್ತು ಲಂಚದ ಹಣ ತರುವುದು ಬೇಡ. ನಮಗಾಗಿ ನೀವು ಭ್ರಷ್ಟರಾಗುವುದು ಲಂಚಕೋರರಾಗುವುದು ಬೇಡ ಎಂದು ಮಕ್ಕಳು ತಮ್ಮ ತಂದೆ-ತಾಯಿಗಳಿಗೆ ಕಡ್ಡಾಯವಾಗಿ ಹೇಳಬೇಕು ಎಂದರು.
ತಡೆಯಬೇಕು: ಇವತ್ತಿನ ನಮ್ಮ ಮಕ್ಕಳು ಕೂಡ ಅವರ ತಂದೆ-ತಾಯಿಗಳು ತಪ್ಪುದಾರಿ ತುಳಿಯುತ್ತಿದ್ದರೆ ಮತ್ತು ಅಡ್ಡದಾರಿಯಲ್ಲಿ ನಡೆದುಕೊಂಡಿದ್ದರೆ ಬುದ್ಧಿ ಹೇಳಿದರೆ ತಪ್ಪೇನಿಲ್ಲ. ನಚಿಕೇತನ ಹಾಗೆ ತಂದೆ-ತಾಯಿ ಅಕ್ರಮಗಳಿಗೆ ಮುಂದಾಗದಂತೆ ತಡೆಯಬೇಕು ಎಂದರು.
ಮಕ್ಕಳು ತಪ್ಪು ಮಾಡಿದರೆ ಬಡಿದು ಬುದ್ಧಿ ಹೇಳಬೇಕಾದುದು ತಂದೆ-ತಾಯಿಗಳ ಕರ್ತವ್ಯ. ಅದೇ ರೀತಿ ತಂದೆ-ತಾಯಿಗಳು ತಪ್ಪು ಮಾಡಿದರೆ, ಮತ್ತವರು ಅಡ್ಡದಾರಿ ಹಿಡಿದರೆ ತಡೆದು ಬುದ್ಧಿ ಹೇಳಬೇಕಾದುದು ಮಕ್ಕಳ ಕರ್ತವ್ಯ ಎಂದು ಹೇಳಿದರು.
ಸಿದ್ದರಾಜ್ ಐವಾರ್, ಮಿಮಿಕ್ರಿ ಈಶ್ವರಯ್ಯ, ಶಿವಕುಮಾರ್, ತೀತ ಮಲ್ಲಿಕಾರ್ಜುನ್ ಹಾಗೂ ಶಿವಮ್ಮ ಚಂದ್ರಶೇಖರ್, ಜಯರತ್ನಾ ಉದಯ್ ಹಾಗೂ ಶಾಂತಮ್ಮ ಜಗದೀಶ್ ಮೊದಲಾದವರೆಲ್ಲ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ವೀರಗಾಸೆ ನೃತ್ಯವನ್ನು ಕಲಿತ ಮಕ್ಕಳು ಶ್ರೀಗಳ ಸನ್ನಿಧಿಯಲ್ಲಿ ವೀರಗಾಸೆ ನಾಟ್ಯ ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

