ಡೆಂಘೀಗೆ ಮುಂಜಾಗ್ರತಾ ಕ್ರಮ
ಕ.ಪ್ರ.ವಾರ್ತೆ ಕೊರಟಗೆರೆ ಜೂ. 8
ಪಟ್ಟಣದಲ್ಲಿ ಡೆಂಘೀ ಜ್ವರ ಮತ್ತು ಚಿಕುನ್ಗುನ್ಯಾ ಉಲ್ಭಣಗೊಂಡಿರುವ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲೂ ವೈದ್ಯರ ತಂಡ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ದಾಸ್ ತಿಳಿಸಿದ್ದಾರೆ.
ಕೊರಟಗೆರೆ ಪಟ್ಟಣದಲ್ಲಿ ಡೆಂಘೀ ಜ್ವರ ಮತ್ತು ಚಿಕುನ್ಗುನ್ಯಾ ಉಲ್ಭಣಗೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಹಾಯಕರ 10 ತಂಡಗಳನ್ನು ರಚಿಸಿ ಪಟ್ಟಣದ ವಿವಿಧ ಬಡಾವಣೆಗಳಾದ ಕೋಟೆಬೀದಿ, ಉಪ್ಪಾರಬೀದಿ, ಗಣೇಶಗುಡಿ ಬೀದಿ, ಬೋವಿ ಕಾಲೋನಿ, ವಿನಾಯಕ ನಗರ, ಸಾದರಬೀದಿ, ಹೊಸ ಬಡಾವಣೆ, ಕುಂಬಾರ ಬೀದಿ, ಎ.ಕೆ ಕಾಲೋನಿಗಳಿಗೆ ಭೇಟಿ ನೀಡಿ 1120 ಮನೆಗಳ ಸಮೀಕ್ಷೆ ನಡೆಸಿ, 3620 ತಾಣಗಳನ್ನು ಪತ್ತೆ ಹಚ್ಚಿ ಅದರಲ್ಲಿ ಲಾರ್ವ್ ಕಂಡು ಬಂದ 203 ಮನೆಗಳಲ್ಲಿ 135 ತಾಣಗಳಿಗೆ ಲಾರ್ವ ನಾಶಕ ಔಷಧಿಗಳನ್ನು ಹಾಕಿ, 68 ತಾಣಗಳನ್ನು ಖಾಲಿ ಮಾಡಿಸಲಾಯಿತು.
ಪಟ್ಟಣದ ಬಡಾವಣೆಗಳಲ್ಲಿ ಸರಬರಾಜು ಮಾಡುತ್ತಿರುವ ನೀರನ್ನು ಶುದ್ಧೀಕರಿಸಿ ಕುಡಿಯಲು ಉಪಯೋಗಿಸುವಂತೆ ಮನೆಗಳ ಸುತ್ತಮುತ್ತ ನಿಂತಿರುವ ಕೊಳಚೆ ನೀರನ್ನು, ಚರಂಡಿಗಳನ್ನು ಸ್ವಚ್ಛಗೊಳಿಸಿ ಫಾಗಿಂಗ್ ಮಾಡುವಂತೆ ಸೂಚಿಸಲಾಗಿದೆ. ಕುಡಿಯುವ ನೀರಿನ ಟ್ಯಾಂಕರ್ಗಳನ್ನು ಸ್ವಚ್ಛಗೊಳಿಸುವ ಮತ್ತು ಶುದ್ಧ ಕುಡಿಯುವ ನೀರನ್ನು ಉಪಯೋಗಿಸುವಂತೆ ಹಾಗೂ ಡೆಂಘೀ ಜ್ವರ ಮತ್ತು ಚಿಕುನ್ಗುನ್ಯಾ ರೋಗಗಳ ಲಕ್ಷಣಗಳು ಹಾಗೂ ಇದರ ಬಗ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಅರಿವು ಮೂಡಿಸಿವುದರೊಂದಿಗೆ ಭಿತ್ತಿಪತ್ರ ಮತ್ತು ಕರಪತ್ರಗಳನ್ನು ಹಂಚಲಾಗಿದೆ ಎಂದರು.
ಮನೆಯ ಸುತ್ತಮುತ್ತ ಎಸೆಯಲಾಗಿರುವ ಘನ ತ್ಯಾಜ್ಯ ವಸ್ತುಗಳಾದ ತೆಂಗಿನ ಚಿಪ್ಪು, ಪ್ಲಾಸ್ಟಿಕ್, ಮಡಕೆ, ಟೈರ್ ಮುಂತಾದವುಗಳನ್ನು ನಾಶಪಡಿಸಿ ಆರೋಗ್ಯ ಇಲಾಖೆಯ ಜೊತೆಯಲ್ಲಿ ಸಹಕರಿಸುವಂತೆ ಮನವಿ ಮಾಡಲಾಯಿತು. ಲಾರ್ವ ಸಮೀಕ್ಷಾ ಕಾರ್ಯಕ್ರಮನ್ನು ತಾಲೂಕು ಚಾಲನಾ ಸಮಿತಿಯ ಮಾರ್ಗದರ್ಶನದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎಚ್.ಎನ್. ಮದ್ಲೇರಪ್ಪ, ಕೆ. ನಾಗರಾಜಯ್ಯ ಅವರ ಮೇಲ್ವಿಚಾರಣೆಯಲ್ಲಿ 10 ತಂಡಗಳು ಸಮೀಕ್ಷೆ ಕಾರ್ಯ ನಡೆಸಲಾಯಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

