ತುಮಕೂರು

ನುರಿತ ವೈದ್ಯರಿಂದ ತಪಾಸಣೆ ಶಿಬಿರ

Published On :

ಕುಣಿಗಲ್: ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿಯಲ್ಲಿ ಇದೇ 11ರ ಮಂಗಳವಾರ ಬೆಳಗ್ಗೆ 9ಗಂಟೆಯಿಂದ ಸಂಜೆ 5ಗಂಟೆವರೆಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅವರಣದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನುರಿತ ತಜ್ಞ ವೈದ್ಯರಿಂದ (ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರು) ಹಾಗೂ ಅತ್ಯಾಧುನಿಕ ಉಪಕರಣಗಳಿಂದ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ತಪಾಸಣೆ ಶಿಬಿರ ಏರ್ಪಡಿಸಲಾಗಿದ್ದು, ಅರ್ಹ ಬಿಪಿಎಲ್ ಕಾರ್ಡ್ದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.
ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ
ತಿಪಟೂರು: ಬಹುದಿನಗಳಿಂದ ತಡೆಹಿಡಿದಿದ್ದ ಅತಿಥಿ ಉಪನ್ಯಾಸಕರ ಗೌರವ ವೇತನವನ್ನು ಬಿಡುಗಡೆಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಇದರ ಬಗ್ಗೆ ಧ್ವನಿ ಎತ್ತಿದ ಪದವೀಧರ ಕ್ಷೇತ್ರದ ಶಾಸಕರಿಗೆ ತಿಪಟೂರು ತಾಲೂಕು ಅತಿಥಿ ಉಪನ್ಯಾಸಕರ ಸಂಘ ಸ್ವಾಗತಿಸಿ ಅಭಿನಂದಿಸಿದೆ.
ರಾಜಶೇಖರಯ್ಯ ಉಪಾಧ್ಯಕ್ಷ
ಶಿರಾ: ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಜಿಲ್ಲಾ ಸಂಘಕ್ಕೆ ಕೆ.ರಂಗನಹಳ್ಳಿ ಶಾಲೆಯ ಶಿಕ್ಷಕರಾದ ಕೆ.ಎನ್.ರಾಜಶೇಖರಯ್ಯ ಇವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ  ಆಯ್ಕೆ ಮಾಡಿ ರಾಜ್ಯಾಧ್ಯಕ್ಷರು ಆದೇಶಿಸಿದ್ದಾರೆ.
ನಾಳೆ ಎಟಿಎಸ್
ತರಬೇತಿಗೆ ಸಂದರ್ಶನ
ತುಮಕೂರು: ಶ್ರೀದೇವಿ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ವತಿಯಿಂದ ಜೂ. 11 ರಂದು ಬೆಳಗ್ಗೆ 10 ಗಂಟೆಗೆ ಒಂದು ವರ್ಷದ ಎಟಿಎಸ್ (ಶಿಶುಕ್ಷು) ತರಬೇತಿಗೆ ಕ್ಯಾಂಪಸ್ ಸಂದರ್ಶನ ಹಾಗೂ ಆಯ್ಕೆ ಏರ್ಪಾಟಾಗಿದೆ. ಈ ಸಂದರ್ಶನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ದಾಬಸ್ಪೇಟೆಯ ಟಿಡಿ ಪವರ್ ಸಿಸ್ಟಂ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಾಟಾಗಿದೆ. ಐಟಿಐ ಪಾಸಾದ ಹಾಗೂ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಭಾಗವಹಿಸಬಹುದಾಗಿದೆ ಎಂದು ಪ್ರಿನ್ಸಿಪಾಲ್ ತಿಳಿಸಿದ್ದಾರೆ. ಫಿಟ್ಟರ್, ಎಲೆಕ್ಟ್ರೀಷಿಯನ್, ಟರ್ನರ್, ಮೆಷಿನಿಷ್ಟ್, ವೆಲ್ಡರ್ ವೃತ್ತಿಗಾಗಿ ಈ ಕ್ಯಾಂಪಸ್ ಸಂದರ್ಶನ ಏರ್ಪಾಟಾಗಿದೆ. 18 ರಿಂದ 23 ವರ್ಷದೊಳಗಿರಬೇಕು. ಎಸ್ಎಸ್ಎಲ್ಸಿ ಮೊದಲ ಪ್ರಯತ್ನದಲ್ಲೇ ಪಾಸಾಗಿರಬೇಕು. ಕನಿಷ್ಠ 45 ಅಂಕ ಪಡೆದಿರಬೇಕು. ಐಟಿಐ ಮೊದಲ ಪ್ರಯತ್ನದಲ್ಲಿ ಪಾಸಾಗಿರಬೇಕು. ಕನಿಷ್ಠ 60 ಅಂಕ ಪಡೆದಿರಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.