ವಿಶ್ವ ತಂದೆಯರ ದಿನ ಬರಹ ಸ್ಪರ್ಧೆ
ತುಮಕೂರು: ಇದೇ ತಿಂಗಳ 3 ನೇ ಭಾನುವಾರ ವಿಶ್ವಾದ್ಯಂತ ವಿಶ್ವ ತಂದೆಯರ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೌಟುಂಬಿಕ ಸಲಹಾ ಕೇಂದ್ರವು ರಾಕ್ಲೈನ್ ಪತ್ರಿಕೆ ಸಹಯೋಗದೊಂದಿಗೆ ನಿಮ್ಮ ಜೀವನದ ಮೇಲೆ ತಂದೆಯ ಪ್ರಭಾವ ಎನ್ನುವ ವಿಷಯವಾಗಿ ಒಂದು ಪುಟದ ಸ್ವಾರಸ್ಯಪೂರ್ಣ ಬರಹ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ವೆಂಕಟನಂಜಪ್ಪ ತಿಳಿಸಿದ್ದಾರೆ. 3 ಅತ್ಯುತ್ತಮ ಬರಹಗಳಿಗೆ ಬಹುಮಾನವಿದ್ದು, ಜೂ. 14 ರೊಳಗೆ ಅಧ್ಯಕ್ಷರು, ವರದಕ್ಷಿಣೆ ವಿರೋಧಿ ವೇದಿಕೆ, 3 ನೇ ಅಡ್ಡರಸ್ತೆ, ಕೆ.ಆರ್. ಬಡಾವಣೆ ಇಲ್ಲಿಗೆ ಲೇಖನವನ್ನು ಕಳುಹಿಸುವಂತೆ ಕೋರಲಾಗಿದೆ. ಜೂ. 16 ರಂದು ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ವಿವರಗಳಿಗೆ 9945349048, 9481600614 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

