ಟ್ರ್ಯಾಕ್ಟರ್ ಚಾಲಕನ ಸೆರೆ: ರು. 2.5ಲಕ್ಷ ಕಳವು ಮಾಲು ವಶ
ಕ.ಪ್ರ.ವಾರ್ತೆ ಕುಣಿಗಲ್ ಜೂ. 9
ಅಪರಾಧ ವಿಭಾಗದ ಪೊಲೀಸರು ಗಸ್ತು ತಿರುಗುವ ವೇಳೆ, ಅನುಮಾನಾಸ್ಪದವಾಗಿ ಟ್ರ್ಯಾಕ್ಟರ್ ಚಾಲಕನೊಬ್ಬ ವರ್ತಿಸಿದ ಹಿನ್ನೆಲೆಯಲ್ಲಿ, ವಿಚಾರಣೆಗೊಳಪಡಿಸಿ ಎರಡೂವರೆ ಲಕ್ಷ ರು. ಕಳವು ಮಾಲನ್ನು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಕುಣಿಗಲ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸೈ ಶೇಷಾದ್ರಿ, ಸಿಬ್ಬಂದಿಗಳಾದ ಯಶೋಧರ, ಅರುಣಕುಮಾರ್, ಕಳೆದ ಶನಿವಾರದಂದು ಗಸ್ತಿನಲ್ಲಿದ್ದಾಗ, ಮದ್ದೂರು ರಸ್ತೆಯ ಗವಿಮಠ ಅಂಡರ್ಪಾಸ್ ಬಳಿ ಟ್ರ್ಯಾಕ್ಟರ್ ಎಂಜಿನ್ ಚಾಲನೆ ಮಾಡಿಕೊಂಡ ಬರುತ್ತಿದ್ದ ಚಾಲಕ ನರಸಿಂಹಮೂರ್ತಿಯನ್ನು ವಿಚಾರಣೆಗೆ ನಿಲ್ಲಿಸಿದಾಗ, ಆತ ಅನುಮಾನಾಸ್ಪದವಾಗಿ ವರ್ತಿಸಿ, ಪರಾರಿಯಾಗಲು ಯತ್ನಿಸಿದ. ಆತನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ, ಸಾಲದ ಶೂಲಕ್ಕೆ ಸಿಕ್ಕು ತನ್ನ ಸ್ನೇಹಿತರೊಂದಿಗೆ ಸೇರಿ ಟ್ರ್ಯಾಕ್ಟರ್ ಕಳವು ಮಾಡಿಕೊಂಡು ಬರುತ್ತಿದ್ದು ಪತ್ತೆಯಾಯಿತು. ಡಿವೈಎಸ್ಪಿ ಉಮಾರಾಣಿ, ಸಿಪಿಐ ಧಮೇಂದ್ರ ಮಾರ್ಗದರ್ಶನದಲ್ಲಿ ಹೆಚ್ಚಿನ ವಿಚಾರಣೆ ನಡೆಸಿ, ಕಳವು ಮಾಡಲೆತ್ನಿಸಿದ ಹುಳ್ಳೇಗೌಡನಪಾಳ್ಯ, ದಾಸನಪುರ ಹೋಬಳಿಯವರಾದ ನಾರಾಯಣ, ನರಸಿಂಹಮೂರ್ತಿ ಹಾಗೂ ಶ್ರೀನಿವಾಸರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

