ತುಮಕೂರು

ಕಾರ್ಲೆ ಕಂಪನಿ ನೌಕರರಿಂದ ಹಲವಾರು ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

Published On :

ನೆಲಮಂಗಲ:  ಇಲ್ಲಿನ ಕಾರ್ಲೆ ಕಂಪನಿ ನೌಕರರು ತಮ್ಮ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.
ಕಂಪನಿಯಲ್ಲಿ ಕಳೆದ ಹತ್ತು ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಡಿಮೆ ವೇತನ ನೀಡುತ್ತಿದ್ದಾರೆ ಮತ್ತು ವಾರ್ಷಿಕವಾಗಿ ಕೇವಲ ನೂರು ಅಥವಾ ನೂರೈವತ್ತು ರು.ಗಳನ್ನು ಹೆಚ್ಚಳ ಮಾಡುತ್ತಾರೆ.  
 ಇಂದಿನ ಬೆಲೆ ಏರಿಕೆಯಲ್ಲಿ ಕಂಪನಿ ನೀಡುವ ವೇತನದಿಂದ ಸಂಸಾರ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ನೌಕರರ ಮುಖಂಡರಾದ ವಸಂತ ಮತ್ತು ಲಾವಣ್ಯ ತಮ್ಮ ಬೇಡಿಕೆಯ  ಬಗ್ಗೆ ವಿವರಿಸಿದರು.
ಕಂಪನಿಯಲ್ಲಿನ ನೌಕರರಿಗೆ ಅನಾವಶ್ಯಕವಾಗಿ ತೊಂದರೆ ನೀಡುತ್ತಾರೆ. ಹೆಚ್ಚಿನ  ಕೆಲಸಕ್ಕೆ ಒತ್ತಡ ತರುತ್ತಾರೆ. ಆ ಹೆಚ್ಚಿನ ಶ್ರಮಕ್ಕೆ ನೀಡಬೇಕಾದ ಹಣ ಮಾತ್ರ ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿ ಸಂಧಾನ ಮಾಡಲು ಮುಂದಾದರು.  
 ಆದರೆ ಕಂಪನಿ ಮಾಲೀಕ ಶನಿವಾರದವರೆಗೂ ಕಂಪನಿಗೆ ಬರಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರಿಂದ ಸಂಧಾನ ಕಾರ್ಯ ಸದ್ಯಕ್ಕೆ  ಮುರಿದು ಬಿತ್ತು. ಈ ಕಾರಣದಿಂದ ಪ್ರತಿಭಟನೆಯನ್ನು ನಿಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಂಪನಿ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದ ನೌಕರರು ಶನಿವಾರದವರೆಗೂ ರಜೆ ಘೋಷಿಸಿಕೊಂಡು ತಕ್ಷಣಕ್ಕೆ ಪ್ರತಿಭಟನೆ ನಿಲ್ಲಿಸಿ ಕಂಪನಿ ಕೆಲಸದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡರು.
ಕಂಪನಿ ಮುಖ್ಯಸ್ಥರು ಶನಿವಾರ ಆಗಮಿಸಿದ ನಂತರ ನೌಕರರ ಬೇಡಿಕೆ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕ್ಕೆ ಎಲ್ಲಾ ನೌಕರರು ಬದ್ಧರಾಗುವುದಾಗಿ ನೌಕರರ ಮುಖಂಡರಾದ ಲಾವಣ್ಯ ಪತ್ರಿಕೆಗೆ ತಿಳಿಸಿದರು.
ನೌಕರರ ಪ್ರತಿಭಟನೆಯಿಂದ ಕಾರ್ಲೆ ಕಂಪನಿ ಎದುರು  ಕೆಲ ಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿತ್ತು. ನೌಕರರು ಕಂಪನಿ ಮಾಲೀಕರ ವಿರುದ್ಧ ಘೋಷಣೆ ಕೂಗಿತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.