ತುಮಕೂರು

ಶಾಸಕ ಸುಧಾಕರ್ ಲಾಲ್ ಜಿಪಂ ಸದಸ್ಯ

Published On :

ತುಮಕೂರು: ಜಿಪಂ ಸದಸ್ಯರಾಗಿ ಶಾಸಕರಾಗಿ ಆಯ್ಕೆಯಾಗಿ ಜಿಪಂ ಕೆಡಿಪಿ ಸಭೆಗೆ ಬರುತ್ತಿರುವವರ ಪಟ್ಟಿಯಲ್ಲಿ ಗುಬ್ಬಿ ಎಂಎಲ್ಎ ಎಸ್. ಆರ್.ಶ್ರೀನಿವಾಸ್ ಪಟ್ಟಿಗೆ ಈಗ ಕೊರಟಗೆರೆ ಶಾಸಕ ಸುಧಾಕರ್ಲಾಲ್ ಕೂಡ ಸೇರಿದ್ದಾರೆ. ಗುಬ್ಬಿ ಶಾಸಕರಾಗಿ ಸತತ 3 ನೇ ಬಾರಿಗೆ ಆಯ್ಕೆಯಾಗಿರುವ  ಎಸ್.ಆರ್. ಶ್ರೀನಿವಾಸ್ ಜೆಡಿಎಸ್ ಶಾಸಕ. ಕೊರಟಗೆರೆ ಶಾಸಕರಾಗಿ ಆಯ್ಕೆಯಾಗಿರುವ ಸುಧಾಕರ್ ಲಾಲ್ ಹಾಲಿ ಜೆಡಿಎಸ್ ಜಿಪಂ ಸದಸ್ಯರಾಗಿದ್ದುಕೊಂಡೇ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಸೋಲಿಸಿ ಆಯ್ಕೆಯಾದ ಹೆಗ್ಗಳಿಕೆ ಸುಧಾಕರ್ ಲಾಲ್ ಅವರದ್ದು. ರಾಜ್ಯದ ಗಮನ ಸೆಳೆದ ವಿಧಾನಸಭಾ ಕ್ಷೇತ್ರಗಳಲ್ಲಿ ಕೊರಟಗೆರೆ ಕೂಡ ಒಂದು ಎಂಬುದು ಗಮನಾರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.