ತುಮಕೂರು

ಪೊಲೀಸ್, ನಗರಸಭೆ ನಿರ್ಲಕ್ಷ್ಯದಿಂದ ಸುಗಮ ಸಂಚಾರಕ್ಕೆ ಅಡ್ಡಿ: ಆರೋಪ

Published On :

ತಿಪಟೂರು: ತಿಪಟೂರು ನಗರದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿರುವ ಲಾರಿ, ಬಸ್ಸು, ಆಟೋ, ಲಗೇಜ್ ಆಟೋ, ಟೆಂಪೋ, ಟ್ರ್ಯಾಕ್ಟರ್  ಮತ್ತಿತರೆ ವಾಹನಗಳವರು ಹಾಗೂ ರಸ್ತೆ ಬದಿ ಕೆಲ ವ್ಯಾಪಾರಸ್ಥರು ಮತ್ತು ಬೀದಿ ಬದಿ ಹೋಟೆಲ್ಗಳವರಿಂದ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದು, ಇದನ್ನ ನಿಯಂತ್ರಿಸಬೇಕಾದ ನಗರಸಭೆ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ತಾಲೂಕು ಆಡಳಿತ ನಿರ್ಲಕ್ಷ್ಯ ತಾಳಿವೆ ಎಂದು ಕಲ್ಪತರು ಜನಪರ ವೇದಿಕೆಯು ದೂರಿದೆ.
 ನಗರದ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳ ಸುತ್ತಲಿನ ರಸ್ತೆ ಬದಿ, ನಗರಸಭೆ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ 206 ಹಾಗೂ ದೊಡ್ಡಪೇಟೆ ಮಾರ್ಗವಾಗಿ ನೀಲಕಂಠಸ್ವಾಮಿ ವೃತ್ತದವರೆಗೆ ಮತ್ತು ಸಂತೆಪೇಟೆಯಿಂದ ರೇಲ್ವೆಗೇಟ್, ರೇಲ್ವೆ ನಿಲ್ದಾಣ ರಸ್ತೆ, ಕಾರೋನೇಷನ್ ರಸ್ತೆ, ಗುರುಕುಲ ಕಾಂಪ್ಲೆಕ್ಸ್, ಸರ್ಕಾರಿ ಬಾಲಕರಿಯರ ಜೂನಿಯರ್ ಕಾಲೇಜು ಮುಂಭಾಗ, ಸರ್ಕಾರಿ ಪದವಿ ಕಾಲೇಜು, ಟಿ.ಬಿ.ಸರ್ಕಲ್  ಸುತ್ತಾಮುತ್ತಾ, ಗೋವಿನಪುರ ಸರ್ಕಲ್ ಸೇರಿದಂತೆ ಈ ಎಲ್ಲಾ ರಸ್ತೆಗಳ ಎರಡೂ ಕಡೆ ಇರುವ ಬಸ್ ಸ್ಟಾಪ್ಗಳು, ಅಂಗಡಿಗಳ ಮುಂದೆ ಲಾರಿ, ಕಾರು, ಲಗೇಜ್ ಆಟೋ ಮತ್ತು ಟೆಂಪೋ ಚಾಲಕರು ತಮ್ಮ ವಾಹನಗಳನ್ನ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಪಾದಾಚಾರಿಗಳು ಸೇರಿದಂತೆ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಇದರ ಜೊತೆಗೆ ತರಕಾರಿ ಮಾರುಕಟ್ಟೆ, ಸಂತೆಪೇಟೆ, ದೊಡ್ಡಪೇಟೆ ಆಜುಬಾಜು ಅಂಗಡಿಗಳವರು ತಮ್ಮ ಸರಕುಗಳನ್ನ ರಸ್ತೆ ಬದಿಯಲ್ಲಿಟ್ಟು ಬಿಸಿಲು ಮಳೆಯಿಂದ ರಕ್ಷಿಸಿಕೊಳ್ಳಲು ತಗಡಿನ ಶೀಟ್ ಅಥವಾ ಟಾರ್ಪಾಲ್ಗಳನ್ನ ಕಟ್ಟಿ ಸಾರ್ವಜನಿಕ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯುಂಟು ಮಾಡುತ್ತಿದ್ದರೂ ನಗರಸಭೆಯಾಗಲಿ ಪೊಲೀಸಿನವರಾಗಲಿ ಯಾವುದೆ ಕ್ರಮ ಜರುಗಿಸುತ್ತಿಲ್ಲವೆಂದು ಆರೋಪಿಸಲಾಗಿದೆ.
 ಈ ಬಗ್ಗೆ ಸಾರ್ವಜನಿಕರು ರಸ್ತೆ ಬದಿ ಬಿಟ್ಟು ದೂರ ನಿಲ್ಲಿಸುವಂತೆ ವಾಹನ ಚಾಲಕರಿಗೆ ಮನವಿ ಮಾಡಿದರೆ ಉಡಾಫೆ ಉತ್ತರ ನೀಡುತ್ತಾರೆಯೇ ಹೊರತು ತಮ್ಮ ವಾಹನಗಳನ್ನ ಕದಲಿಸುವುದಿಲ್ಲ ಎಂದು ವೇದಿಕೆ ದೂರಿದೆ.
 ಈ ಎಲ್ಲಾ ದೂರುಗಳು ನಗರಸಭೆ, ಪೊಲೀಸ್ ಮತ್ತು ಎ.ಆರ್.ಟಿ.ಓ ಗೆ ಗೊತ್ತಿದ್ದರೂ ಕ್ರಮ ಜರುಗಿಸಿ ಸಾರ್ವಜನಿಕರಿಗೆ ನೆರವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ಯ ಪಡಿಸಿರುವ ವೇದಿಕೆಯು, ಪೊಲೀ ಸರು ಎಚ್ಚೆತ್ತುಕೊಂಡು ವಾಹನಗಳಿಂದ ಆಗುತ್ತಿರುವ ಅಡೆತಡೆಗಳನ್ನ ತಪ್ಪಿಸದಿದ್ದರೆ ಸಾರ್ವಜನಿಕ ಹೋರಾಟ ಅನಿವಾರ್ಯ ಎಂದು ವೇದಿಕೆ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.