ತುಮಕೂರು

ಮಹನೀಯರ ತ್ಯಾಗ, ಬಲಿದಾನ ಫಲವೀ ಕನ್ನಡ ನಾಡು: ಪ್ರೊ.ಮ.ಲ.ನ.ಮೂರ್ತಿ

Published On :

ಕ.ಪ್ರ. ವಾರ್ತೆ   ಮಧುಗಿರಿ   ಜೂ.15
ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಕನ್ನಡ ನಾಡು ಉದಯವಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಬೆಳವಣಿಗೆಗೆ ಪಂಪನಿಂದ ಹಿಡಿದು ಕುವೆಂಪುವರೆವಿಗೆ ಹಲವರು ಜಾತಿ, ಮತ, ಭೇದವಿಲ್ಲದೆ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ನುಡಿದರು.
ಮಧುಗಿರಿ ತಾ.ಕಸಾಪ ಏರ್ಪಡಿಸಿದ್ದ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಧುಗಿರಿಯಲ್ಲಿ ಏರ್ಪಡಿಸಿರುವ ತಾ.ಸಮ್ಮೇಳನ ಹೆಸರಿಗೆ ಮಾತ್ರ ತಾ.ಸಮ್ಮೇನ. ಆದರೆ ಯಾವುದೇ ಜಿಲ್ಲಾ ಸಮ್ಮೇಳನಕ್ಕೂ ಕಡಿಮೆ ಇಲ್ಲದಂತೆ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ನಡೆಯಲಿದೆ ಎಂಬುದಕ್ಕೆ 4ನೇ ತಾ.ಸಾಹಿತ್ಯ ಸಮ್ಮೇಳನಾಧ್ಯಕ್ಷನಾಗಿದ್ದ ನಾನೇ ಸಾಕ್ಷಿ ಎಂದು ಅಭಿಮಾನದ ಮಾತುಗಳನ್ನಾಡಿದರು.
ಅದೇ ರೀತಿ ಇದೇ 20, 21 ರಂದು ನಡೆಯುವ ಸಮ್ಮೇಳನಕ್ಕೆ ಇತಿಹಾಸ ತಜ್ಞ ಹಾಗೂ ಲೇಖಕ ಎಂ.ಡಿ.ಶ್ರೀನಿವಾಸ್ ಅವರು ತಾ.5ನೇ ಕಸಾಪ ಸಮ್ಮೇಳನಾಧ್ಯಕ್ಷರಾಗಿದ್ದು ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಕೋರಿದರು.  
ತಾ.ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಪ.ವಿ.ಸುಬ್ರಹ್ಮಣ್ಯ, ವೆಂಕಟೇಶಬಾಬು, ಪದಾಧಿಕಾರಿ ನರಸಿಂಹಮೂರ್ತಿ, ಎಂ.ಜಿ.ಮಂಜುನಾಥ್, ಎಂ.ಜಿ.ರಘುಯಾದವ್, ರಮೇಶ್, ಜಿ.ಆರ್.ರಂಗರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.