ತುಮಕೂರು

ಮೂರು ಲಕ್ಷ ರು. ಮೌಲ್ಯದ ಬೆಳ್ಳಿ, ಪಂಚಲೋಹ ವಿಗ್ರಹ ದೋಚಿ ಪರಾರಿ

Published On :

ಕ.ಪ್ರ. ವಾರ್ತೆ   ಪಾವಗಡ   ಜೂ.15
ತಾಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ತಿರುಮಣಿ ಸುತ್ತಮುತ್ತ ದೇವಸ್ಥಾನಗಳಲ್ಲಿ ವಿಗ್ರಹ ದೋಚುವ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅಕ್ಕಮ್ಮನ ದೇವಸ್ಥಾನದಲ್ಲಿದ್ದ ಸುಮಾರು 3ಲಕ್ಷ ರು. ಮೌಲ್ಯದ ಬೆಳ್ಳಿ ಹಾಗೂ ಪಂಚಲೋಹ ವಿಗ್ರಹಗಳನ್ನು ದೋಚಿ ಪರಾರಿಯಾದ ಘಟನೆ ಇದೇ ವ್ಯಾಪ್ತಿಯ ವಳ್ಳೂರು ಗ್ರಾಮದಲ್ಲಿ ನಡೆದಿದೆ.
ತಿರುಮಣಿ ಗ್ರಾಮದ ಸುತ್ತಮುತ್ತ ದೇವಸ್ಥಾನಗಳಲ್ಲಿನ ಬೆಲೆಬಾಳುವ ವಿಗ್ರಹ ಕದಿಯಲು ಹೊಂಚು ಹಾಕಿದ್ದ ದರೋಡೆಕೋರರು ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಬಳಸಮುದ್ರ ಗ್ರಾಮದ ಪಕ್ಕದಲ್ಲಿರುವ ಅಂಜನೇಯಸ್ವಾಮಿ ದೇವಸ್ಥಾನದ ಮುಂಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ನಂತರ ದೇವಸ್ಥಾನದ ಗರ್ಭಗುಡಿಯ ಬಾಗಿಲು ಮುರಿಯಲು ಪ್ರಯತ್ನಿಸಿದ್ದಾರೆ. ಬಾಗಿಲು ಶಬ್ದ ಜೋರಾಗಿ ಕೇಳಿಸುವ ಕಾರಣದಿಂದ ದೇವಸ್ಥಾನದ ಹಾಲ್ನಲ್ಲಿದ್ದ ಕಂಚಿನ ವಿಗ್ರಹವೊಂದು ಕದ್ದು ಅದನ್ನು ಅಲ್ಲಿಯೇ ಜಜ್ಜುತ್ತಿರುವಾಗ ದೇವಸ್ಥಾನದ ಪಕ್ಕದಲ್ಲಿಯೆ ಮನೆಯೊಂದರಲ್ಲಿ ವಾಸವಾಗಿದ್ದ ಈಶ್ವರಯ್ಯ ಎಂಬುವರು ಶಬ್ದ ಕೇಳಿಸಿಕೊಂಡು ಮೊಬೈಲ್ ಕರೆ ಮೂಲಕ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಗ್ರಾಮಸ್ಥರು ತಮ್ಮ ಬಳಿ ಬರುವುದನ್ನು ಗಮನಿಸಿದ ದರೋಡೆಕೋರರು ಅಲ್ಲಿಂದ ಪರಾರಿಯಾದರು. ನಂತರ ಪಕ್ಕದ ವಳ್ಳೂರು ಗ್ರಾಮದ ಅಕ್ಕಮ್ಮನ ದೇವಸ್ಥಾನಕ್ಕೆ ನುಗ್ಗಿ ದೇವಸ್ಥಾನದಲ್ಲಿದ್ದ ಸುಮಾರು 3 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಪಂಚಲೋಹದ ವಿಗ್ರಹಗಳು ಕದ್ದಿದ್ದಾರೆ. ನಂತರ ದೇವಸ್ಥಾನದ ಹುಂಡಿ ಒಡೆದು ಹುಂಡಿ ಸಮೇತ ಭಕ್ತಾದಿಗಳು ನೀಡಿದ್ದ ಸುಮಾರು 25ಸಾವಿರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದಾರೆ. ಹುಂಡಿಯಲ್ಲಿದ್ದ ಹಣವನ್ನೆಲ್ಲಾ ತೆಗೆದುಕೊಂಡ ಖದಿಮರು ಹುಂಡಿಯನ್ನು ದೇವಸ್ಥಾನದ ಪಕ್ಕದಲ್ಲಿರುವ ಕೆರೆಯೊಂದರಲ್ಲಿ ಎಸೆದು ಪರಾರಿಯಾಗಿದ್ದಾರೆಂದು ಬಳಸಮುದ್ರ ದಲಿತ ಮುಖಂಡ ಮುತ್ತಣ್ಣ ತಿಳಿಸಿದ್ದಾರೆ. ಗ್ರಾಮಸ್ಥರು ನೀಡಿದ ದೂರನ್ನು ಪರಿಶೀಲಿಸಿದ ತಿರುಮಣಿ ಪಿಎಸ್ಐ ಅಮರೇಶ್ಗೌಡ ಪ್ರಕರಣ ದಾಖಲಿಸಿ ಕಳ್ಳರ ಪತ್ತೆಗೆ ಶೋಧ ನಡೆಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.