ಫೋರ್ಜರಿ ಚೆಕ್ ಬಳಸಿ ತಹಸೀಲ್ದಾರ್ ಖಾತೆಯಿಂದ ಲಕ್ಷಾಂತರ ರು. ಬಟವಾಡೆ
ಅರಕಲಗೂಡು: ತಹಸೀಲ್ದಾರ್ ಖಾತೆಯಲ್ಲಿದ್ದ ಸಣ್ಣ ಹಿಡುವಳಿದಾರರ ಬರ ಪರಿಹಾರದ ಲಕ್ಷಾಂತರ ರು.ಗಳನ್ನು ಪೋರ್ಜರಿ ಚೆಕ್ ಮೂಲಕ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಹಸೀಲ್ದಾರ್ ಗಮನಕ್ಕೆ ಬಾರದೆ ಅವರ ನಕಲಿ ಸಹಿ ಬಳಸಿ ಚೆಕ್ಗಳನ್ನು ನೀಡಿರುವುದು ಸ್ಪಷ್ಟವಾಗಿದ್ದು, ಈ ಸಂಬಂಧ ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರೀವಿದ್ಯಾ ಅವರು ಶನಿವಾರವಿಡೀ ತಡ ರಾತ್ರಿಯವರೆಗೂ ದಾಖಲೆಗಳನ್ನು ಪರಿಶೀಲಿಸಿದರು.
ಈ ಸಂಬಂಧ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡು ತೀವ್ರ ಪರಿಶೋಧನೆ ನಡೆಸಿದರು. ಈ ಸಂಬಂಧ ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಶಾಖೆಯಿಂದಲೂ ಹಲವು ದಾಖಲೆಗಳನ್ನು ಅವರು ಪರಿಶೀಲಿಸಿದರು.
ಪ್ರಹಸನ ಏನು? 2011-12ನೇ ಸಾಲಿನಲ್ಲಿ ಬರ ಪರಿಹಾರ ಅನುದಾನದಲ್ಲಿ ತಾಲೂಕಿಗೆ 2 ಕೋಟಿ 22 ಲಕ್ಷ ರು. ತಹಸೀಲ್ದಾರ್ ಖಾತೆಗೆ ಜಮಾ ಆಗಿದ್ದು, ಅದರ ವಿತರಣಾ ಕಾರ್ಯ ನಡೆಯುತ್ತಿದೆ.
ಆದರೆ ಕಳೆದ ಮಾರ್ಚ್, ಏಪ್ರಿಲ್, ಜೂನ್ ತಿಂಗಳುಗಳಲ್ಲಿ ಸುಮಾರು 12ಕ್ಕೂ ಹೆಚ್ಚು ತಹಸೀಲ್ದಾರರ ಹೆಸರಲ್ಲಿ ನಕಲಿ ಚೆಕ್ಕುಗಳ ಮೂಲಕ ಇಲ್ಲಿನ ಎಸ್ಬಿಎಂನಿಂದ ಕೆಲವು ವ್ಯಕ್ತಿಗಳಿಗೆ ಹಣ ಪಾವತಿಯಾಗಿದೆ. ಇದರಲ್ಲಿ 50 ಸಾವಿರ ರು.ಗಳ 6 ಚೆಕ್ ಮತ್ತು 25 ಸಾವಿರ ರು.ಗಳ 6 ಚೆಕ್ಗಳು ತಹಸೀಲ್ದಾರರ ನಕಲಿ ಸಹಿಯೊಂದಿಗೆ ಪಾವತಿಯಾಗಿರುವುದಾಗಿ ತಿಳಿದುಬಂದಿದೆ.
ಯಾರದ್ದೋ ಹಣ ಯಾರದ್ದೋ ಖಾತೆಗೆ: ಸದರಿ ದುರುಪಯೋಗದ ಹಣದಲ್ಲಿ ಚೆಕ್ಕುಗಳು ಯಾರದೋ ಹೆಸರಲ್ಲಿದ್ದು, ಯಾರದ್ದೋ ಹೆಸರಿಗೆ ಜಮಾ ಆಗಿರುವುದಾಗಿಯೂ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಈ ಎಲ್ಲದರ ಕುರಿತು ಉಪ ವಿಭಾಗಾಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.
ಆದರೆ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಈಗ ತಹಸೀಲ್ದಾರರ ಖಾತೆಯಲ್ಲಿ 40 ಲಕ್ಷ ರು.ಗಳು ಮಾತ್ರ ಬಾಕಿ ಉಳಿದಿದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

