ತುಮಕೂರು

ಮಾನವೀಯ ಮೌಲ್ಯ ತುಂಬುವ ಕೆಲಸ ಶಿಕ್ಷಕರ ಮೇಲಿದೆ: ಶಾಸಕ ಶ್ರೀನಿವಾಸ್

Published On :

ಗುಬ್ಬಿ: ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ಶಿಕ್ಷಕರ ಜವಾಬ್ದಾರಿಯಾಗಿದೆ. ಯುವಪೀಳಿಗೆ ಇಂದು ದಾರಿತಪ್ಪುತ್ತಿದ್ದು ಇವರನ್ನು ಸರಿ ದಾರಿಗೆ ತರುವ ಜವಾಬ್ದಾರಿ ಗುರುಗಳು ಮತ್ತು ತಂದೆ ತಾಯಿಗಳ ಮೇಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ನಗರದ ಹೊರವಲದಲ್ಲಿರುವ ಶ್ರೀ ಚಿದಂಬರಾಶ್ರಮದಲ್ಲಿ 2013-14 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯನ್ನು ನಿರ್ಮಿಸುವುದು ಗುರು ಮತ್ತು ಗುರುಪೀಠಗಳಿಂದ ಮಾತ್ರ ಸಾಧ್ಯ ಎಂದರು.
 ನಮ್ಮ ಯುವಜನಾಂಗ  ಸನಾತನ ಧಾರ್ಮಿಕ ಚಿಂತನೆ ಮತ್ತು ಮೌಲ್ಯಗಳನ್ನು ಮರೆಯುತ್ತಿದ್ದು ನಮ್ಮ ಗುರು ಹಿರಿಯರನ್ನು ಭಕ್ತಿಯಿಂದ ಪೂಜಿಸುವುದರ ಜೊತೆಗೆ ಅವರ ಸೇವೆಯನ್ನು ಮಾಡಿದಾಗ ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುತ್ತದೆ ಹಾಗೂ ತನ್ನು ಜೀವಿತಾವಧಿಯಲ್ಲಿ ಸಮಾಜದ ಋಣ ತೀರಿಸಿದಂತಾಗುತ್ತದೆ. ಅಲ್ಲದೆ ಮನುಷ್ಯನು ಎಲ್ಲರ ಭಾವನನೆಗಳೊಂದಿಗೆ ಸ್ಪಂದಿಸಿದಾಗ ಮಾತ್ರ ಸಮಾಜದ ಎಲ್ಲಾ ವರ್ಗಗಳು ನೆಮ್ಮದಿಯಿಂದ ಬಾಳುವಂತಾದಾಗ ಮಾತ್ರ ವಿದ್ಯೆ ಕಲಿಸಿದ ಗುರುವಿಗೂ ಮತ್ತು ಸಮಾಜಕ್ಕೂ ಋಣ ತೀರಿಸಿದಂತಾಗುತ್ತದೆ ಎಂದರು.
ಶ್ಲಾಘನೀಯ:  ಮುಖ್ಯ ಆತಿಥಿಗಳಾಗಿ ನಿವೃತ್ತ  ಐಎಎಸ್ ಅಧಿಕಾರಿ ಸಿ.ಎಸ್.ಕೇದಾರ್ ಮಾತನಾಡಿ ಹಿಂದಿನ ಗುರುಕುಲ ಮಾದರಿಯ ಚಿದಂಬರಾಶ್ರಮದಲ್ಲಿ ಶಿಕ್ಷಣ ನೀಡುತ್ತಿವುದು ಶ್ಲಾಘನೀಯ. ರಾಜ್ಯದ ಬಹುತೇಕ ಎಲ್ಲಾ ಭಾಗಗಳ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇಲ್ಲಿ ಕಲಿತಂತ ವಿದ್ಯಾರ್ಥಿಗಳು ದೇಶದ ನಾನಾ ಭಾಗಗಳಲ್ಲಿ ಉನ್ನತ ಹುದ್ದೆಯಲ್ಲಿರುವುದೇ ಸಾಕ್ಷಿಯಾಗಿದೆ. ಇವರ ಮಾರ್ಗದರ್ಶನವಿಟ್ಟುಕೊಂಡು ಸಮಾಜದ ಒಳಿತಗಾಗಿ ಶ್ರಮಿಸಬೇಕು ಎಂದು  ಕರೆ ನೀಡಿದರು.
ಸಮಾಜಕ್ಕೆ ಮಾದರಿ: ಶಿಕ್ಷಣ ನೀಡುವುದರ ಜೊತೆಗೆ ಧರ್ಮಮತ್ತು ಧಾರ್ಮಿಕ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳನ್ನೊಳಗೊಂಡ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಚಿದಂಬರಾಶ್ರಮ ಶಿಕ್ಷಣ ಸಂಸ್ಧೆ ಸಮಾಜಕ್ಕೆ ಮಾದರಿಯಾಗಿದೆ ಎಂದ ಅವರು ನಮ್ಮ ಸನಾತನ  ಧಾರ್ಮಿಕ ಆಚರಣೆಗಳು ಮರೆಯಾಗುತ್ತಿರುವ ಇಂದಿನಗಳಲ್ಲಿ ಆಶ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದ ಜೊತೆಗೆ ನಮ್ಮ ಪರಂಪರಾಗತ ಆಚರಣೆ ಮತ್ತು ಮೌಲ್ಯಧಾರಿತ ಶಿಕ್ಷಣವನ್ನು ನೀಡುತ್ತಿರುವುದು ಅಭಿನಂದನಾರ್ಹವಾದುದು ಎಂದರು.
ಸಮಾರಂಭದಲ್ಲಿ ಶ್ರೀ ಚಿದಂಬರಾಶ್ರಮದ ಅಧ್ಯಕ್ಷ ಶಿವಚಿದಂಬರ ಶರ್ಮ, ಡಾ. ಸಂಜಯ್, ಬಸವರಾಜ್, ಲಕ್ಷ್ಮೀಕಾಂತ್, ಡಾ. ಎಸ್.ಎಸ್. ಸಚ್ಚಿದಾನಂದ, ಮುಖ್ಯ ಶಿಕ್ಷಕ ಶಂಕರಲಿಂಗಪ್ಪ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಆಶ್ರಮದ ಹಳೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.