ರಾಹುಲ್ ಗಾಂಧಿ ಜನ್ಮ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ
ಪಾವಗಡ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ 43ನೇ ಜನ್ಮ ದಿನಾಚರಣೆ ಅಂಗವಾಗಿ ತಾ. ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಪಟ್ಟಣದ ಕ್ರೀಡಾಂಗಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಂಗ್ರೆಸ್ ಹಿರಿಯ ಮುಖಂಡರಾದ ಪಿ.ಎಚ್.ಸುಬ್ಬರಾಯಪ್ಪ, ಜಿಪಂ ಮಾಜಿ ಅಧ್ಯಕ್ಷ ಜಂಪಯ್ಯ, ತಾ.ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದೇಶ್ಬಾಬು ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮೈಲಾರರೆಡ್ಡಿ ನೇತೃತ್ವದಲ್ಲಿ ಪೂಜೆ ನೆರವೇರಿಸುವ ಮೂಲಕ ರಾಹುಲ್ ಗಾಂಧಿ ಹೆಸರಿನಲ್ಲಿ ಕ್ರೀಡಾಂಗಣ ಸುತ್ತ ಸುಮಾರು 400ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಟ್ಟರು.
ಇದೇ ಸಂದರ್ಭದಲ್ಲಿ ಮುಖಂಡ ಪಿ.ಎಚ್.ಸುಬ್ಬರಾಯಪ್ಪ ಮಾತನಾಡಿ ಸಸಿ ನೆಡುವುದು ಮುಖ್ಯವಲ್ಲ, ರಕ್ಷಣೆ ಸೇರಿದಂತೆ ಗಿಡಗಳು ದೊಡ್ಡ ಮಟ್ಟದ ಬೆಳವಣಿಗೆಯವರೆಗೂ ನೀರು ಹಾಗೂ ಅವುಗಳ ಸುರಕ್ಷಿತ ಪೋಷಣೆ ಮುಖ್ಯವೆಂದರು.
ಮುಖಂಡ ಜಂಪಯ್ಯ ಮಾತನಾಡಿ ಭೂಮಿ ಮೇಲೆ ನಾವು ಬಿಟ್ಟು ಹೋಗುವ ಆಸ್ತಿ ಎಂದರೆ ಪರಿಸರ. ಗಿಡ ಮರಗಳ ಬೆಳವಣಿಗೆಯಿಂದ ಉತ್ತಮ ವಾತಾವರಣ ನಿರ್ಮಾಣ ಸೇರಿದಂತೆ ಮನುಷ್ಯನ ಆರೋಗ್ಯಕ್ಕೆ ಸಹಕಾರಿ ಎಂದ ಅವರು ಸಸಿಗಳ ರಕ್ಷಣೆಗೆ ಕಾಳಜಿಯುಳ್ಳ ವ್ಯಕ್ತಿಯನ್ನು ನಿಯೋಜಿಸಿ ಎಂದರು.
ಮುಖಂಡರಾದ ದವಡಬೆಟ್ಟ ಗೋಪಾಲಪ್ಪ, ಎಲ್ಐಸಿ ಗೋವಿಂದರಾಜ್, ಬೇಕರಿ ಚಂದ್ರಪ್ಪ, ಕೋರ್ಟ್ನರಸಪ್ಪ, ಪುರಸಭೆ ಸದಸ್ಯ ರಾಮಾಂಜಿನಪ್ಪ, ಮಾಜಿ ಸದಸ್ಯ ರಾಜೇಶ್, ಅಲ್ಪಸಂಖ್ಯಾತ ಘಟಕದ ಮಹಮ್ಮದ್ ರಿಜಾವಾನ್ವುಲ್ಲಾ, ಸ್ಟುಡಿಯೋ ಅಮರ್ ಸೇರಿದಂತೆ ಯುವ ಘಟಕದ ಅನೇಕ ಮಂದಿ ಪದಾಧಿಕಾರಿಗಳು ಕಾರ್ಯಕರ್ತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

