ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿಗೆ ರನ್ನರ್ ಅಪ್ ಪ್ರಶಸ್ತಿ
ಕ.ಪ್ರ.ವಾರ್ತೆ ತುಮಕೂರು ಜೂ. 20
ಕ್ವೆಸ್ಟ್ ಗ್ಲೋಬಲ್ ಕಂಪನಿ ಆಯೋಜಿಸಿದ್ದ ರಾಷ್ಟ್ರೀಯ ಅಂತರಕಾಲೇಜು ಎಂಜಿನಿಯರಿಂಗ್ ವಿನ್ಯಾಸ ಸ್ಪರ್ಧೆಯಲ್ಲಿ ನವದೆಹಲಿ ಜಮೀಯಾ ಮಿಲಿಯಾ ಇಸ್ಲಾಮಿಯಾಗೆ ಅವರ ಹೈಬ್ರಿಡ್ ಹ್ಯೂಮನ್ ಪವರ್ಡ್ ಎಲೆಕ್ಟ್ರಿಕ್ ವಾಹನಕ್ಕೆ ಲಭಿಸಿತು.
ತುಮಕೂರಿನ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಅವರ ಇಂಟಲಿಜೆಂಟ್ ವೀಲ್ ಚೇರ್ಗೆ ರನ್ನರ್ ಅಪ್ ಪ್ರಶಸ್ತಿ ಲಭಿಸಿತು. ಏರ್ಬಸ್ನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ, ಉಪಾಧ್ಯಕ್ಷ ಡಾ. ಮಾಥ್ಯೂ ಆರ್ಕೆಡ್ ಅವರು ಪ್ರಶಸ್ತಿಗಳನ್ನು ವಿತರಿಸಿದರು. ಜಮೀಯಾ ಮಿಲಿಯಾ ಇಸ್ಲಾಮಿಯಾದ ಪ್ರತೀಕ್ ಬನ್ಸಾಲ್ ಮಾತನಾಡಿ, ನಮ್ಮ ಯೋಜನೆ ಹೈಬ್ರಿಡ್ ಹ್ಯೂಮನ್ ಪವರ್ಡ್ ಎಲೆಕ್ಟ್ರಿಕ್ ವಾಹನ ಪರಿಸರ ಸ್ನೇಹಿಯಾಗಿದ್ದು, ಈಗಿನ ಸ್ಥಳೀಯ ಸಾರಿಗೆಗೆ ಪರ್ಯಾಯವಾಗಬಹುದು ಎಂದರು.ಸೈಕಲ್ ರಿಕ್ಷಾಗೆ ಇದು ಪರ್ಯಾಯವಾಗಬಲ್ಲುದು ಎಂದರು. ವಿಜೇತರಆಯ್ಕೆಯು ಉದ್ಯಮ ಅಕಾಡೆಮಿಕ್ವಲಯದ ತಜ್ಞ ಪ್ರೊ.ಆರ್. ನಟರಾಜನ್, ಎ.ಎಸ್. ಮಾರಿಸುಂದರಮ್, ವಿ. ರವಿ ಅವರನ್ನು ಒಳಗೊಂಡಿದ್ದ ಸಮಿತಿ ನಿರ್ಧರಿಸಿತು. ಏರ್ ಬಸ್ನ ವಿಪಿ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಮಾಥ್ಯೂ ಆರ್ಕೆಡ್ ಅವರು ಮಾತನಾಡಿ, ಅದೃಷ್ಟಶಾಲಿ ವಿಜೇತರನ್ನು ಅಭಿನಂದಿಸಿದರು. ಟ್ರೋಫಿ, ನಗದು ಬಹುಮಾನ, ಬ್ರಿಟನ್ನಲ್ಲಿ ಏರ್ ಬಸ್ಗೆ ಭೇಟಿ ನೀಡುವ ಅವಕಾಶದ ಗ್ರಾಂಡ್ ಬಹುಮಾನ ವಿತರಿಸಿದರು. ಅಂತರ ಕಾಲೇಜು ಉತ್ಸವ ಕ್ವೆಸ್ಟ್ ಇಗ್ನಿಯಮ್ 2003 ಬಗ್ಗೆ ಮಾತನಾಡಿದ ಡಾ. ಮಾಥ್ಯೂ ಅರ್ಕೆಡ್ ಮುಂದುವರಿದು ಮಾತನಾಡಿ, ಏರ್ಬಸ್ ಭಾರತದಲ್ಲಿ ಪ್ರತಿಭಾವಂತರ ಪ್ರಗತಿಯ ಸಾಧ್ಯತೆಯನ್ನು ಮನಗಂಡಿದ್ದು, ಮುಖ್ಯವಾಗಿ ಎಂಜಿನಿಯರಿಂಗ್ ವಲಯದಲ್ಲಿ ಗಮನಿಸಬಹುದಾಗಿದೆ. ಭಾರತದ ಇಂಟರ್ ನ್ಯಾಷನಲ್ ಎಂಜಿನಿಯರಿಂಗ್ ವಲಯದಲ್ಲಿ ಇದು ಮುಖ್ಯ ಪಾತ್ರವಹಿಸುತ್ತದೆ. ಏರ್ ಬಸ್ ಈ ಪ್ರತಿಭಾವಂತರ ಅಭ್ಯುದಯಕ್ಕೆ ಸಹಕರಿಸಲಿದೆ. ಇಗ್ನಿಯಮ್ ಕ್ವೆಸ್ಟ್ನಲ್ಲಿ ಭಾಗವಹಿಸಲು ಸಂತಸವಾಗಿದೆ ಎಂದರು. ಇಗ್ನಿಯಮ್ 2003 ರ ವಿಜೇತರನ್ನು ಗ್ರೇ ಆರೆಂಜ್ ರೋಬೊಟಿಕ್ಸ್ನ ಸಿಇಒ ಮತ್ತು ಸಹ ಸಂಸ್ಥಾಪಕ ಸ್ಯಾಮಿ ಕೋಹ್ಲಿ ಅವರು ಪ್ರೋತ್ಸಾಹಿಸಿ ಮಾತನಾಡಿದರು. ನನಗೆ ವಾಣಿಜ್ಯೋದ್ದೇಶದ ತಂತ್ರಜ್ಞಾನದ ಪಯಣವು ಮಾನವರಂತೆ ಕಾರ್ಯನಿರ್ವಹಿಸುವ ರೋಬೋಟ್ ನಿರ್ಮಿಸುವ ಅನುಭವದಿಂದ ಸಾಧ್ಯವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

