ಕನ್ನಡ ಅನುಷ್ಠಾನಕ್ಕೆ ಸರ್ಕಾರದ ಜೊತೆ ಶೀಘ್ರ ಚರ್ಚೆ
ಕ.ಪ್ರ.ವಾರ್ತೆ ಪಾವಗಡ ಜೂ. 22
ತಾಲೂಕಿನ ಜನತೆ ಕೆಲ ಅನಿವಾರ್ಯ ಕಾರಣಗಳಿಂದ ಅನ್ಯ ಭಾಷೆಗಳ ಪ್ರಭಾವಕ್ಕೆ ಒಳಗಾಗಿದ್ದು ಕನ್ನಡ ಅನುಷ್ಠಾನಕ್ಕೆ ಸರ್ಕಾರದ ಜೊತೆ ಶೀಘ್ರ ಚರ್ಚಿಸುವುದಾಗಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರು ತಿಳಿಸಿದರು.
ಅವರು ಶನಿವಾರ ತಾ.ಕಸಾಪ ವತಿಯಿಂದ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವೇದಿಕೆಗಳ ಮೂಲಕ ಅಭಿವೃದ್ಧಿ ಪರ ಚಿಂತನೆ ಹಾಗೂ ಚರ್ಚೆಗಳು ನಡೆಯಬೇಕು. ಕನ್ನಡ ಅನುಷ್ಠಾನ ಸೇರಿದಂತೆ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಜೊತೆ ಹೋರಾಟ ಅನಿವಾರ್ಯವಿದ್ದು ಸಮೇಳನಾಧ್ಯಕ್ಷ ವಿ.ಆರ್.ಚಲುವರಾಜನ್ ಹಾಗೂ ಸ್ವಾಮಿ ಜಪಾನಂದಾಜೀ ಅವರು ವ್ಯಕ್ತಪಡಿಸಿದ ಅಭಿವೃದ್ಧಿ ಪರ ಚಂತನೆಗಳ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡುವ ಭರವಸೆ ನೀಡಿದರು.
ಕಳೆದ ಒಂದು ವಾರದಿಂದ ಕೆಲವರು ತಾಲೂಕಿನಲ್ಲಿ ರಾಜಕೀಯವಾಗಿ ನನ್ನ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿದ್ದು ಪಕ್ಷದ ವತಿಯಿಂದ ಪಟ್ಟಣದಲ್ಲಿ ಜೂನ್ 26ರಂದು ಆಯೋಜಿಸುವ ಕಾರ್ಯಕ್ರಮದಲ್ಲಿ ಅವರಿಗೆ ತಕ್ಕ ಉತ್ತರ ನೀಡುವುದಾಗಿ ತಿಳಿಸಿ ಸಕಾರಾತ್ಮಕಾ ಆಲೋಚನೆಗಳನ್ನು ಬಿಟ್ಟು ನಕಾರಾತ್ಮಕ ಚಿಂತನೆಗಳಲ್ಲಿ ನಿರತರಾದ ಕೆಲವರು ನಿರಂತರ ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿದಾರೆ ಎಂದು ಅಸಮಾಧಾನ
ವ್ಯಕ್ತಪಡಿಸಿದರು.
ಪ್ರತ್ಯೇಕ ಮೀಸಲಾತಿ: ಸರ್ಕಾರದ ಮಟ್ಟದಲ್ಲಿ ಕನ್ನಡ ಭಾಷೆಗೆ ವಿಶೇಷವಾದ ಸ್ಥಾನಮಾನ ಕಲ್ಪಿಸುವ ಮೂಲಕ ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಹೆಚ್ಚು ಆಂಕಗಳು ಸೇರಿದಂತೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು. ಭಾಷೆ ಅನುಷ್ಠಾನಕ್ಕೆ ಉತ್ತೇಜನ ನೀಡವಂತಹ ಕೆಲಸವಾಗಬೇಕಿದೆ ಎಂದರು. ತಾಲೂಕಿನ ಸರ್ವತ್ತೋಭಿವೃದ್ಧಿಗೆ ವಿಶೇಷವಾದ ಯೋಜನೆಗಳನ್ನು ರೂಪಿಸಿದ್ದು ಪಟ್ಟಣದಲ್ಲಿ ಭೂಮಿಯ ಕೊರತೆಯಿಂದ ಈಗಾಗಲೇ ಮುಂಜಾರಾದ ವಾಲ್ಮೀಕಿ ಭವನ ಸೇರಿದಂತೆ ಸಮಾಜ ಕಲ್ಯಾಣ ಹಾಸ್ಟೆಲ್ಗಳ ನಿರ್ಮಾಣಕ್ಕೆ ತೊಂದರೆ ಆಗುತ್ತಿದೆ. ಭೂಮಿ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗೋಪಾಯ ಕಂಡುಹಿಡಿದು ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಬದ್ಧರಾಗುವುದಾಗಿ ಅವರು ತಿಳಿಸಿದರು.ಕನ್ನಡಕ್ಕೆ ಸೇವೆ ಸಲ್ಲಿಸಿ ದಿವಂಗತರಾದ ಕೋ.ಸೂ.ನಾಗಭೂಷಣ್ ಶರ್ಮ, ಎಲ್.ಅಣ್ಣಯ್ಯಪ್ಪ, ಡಿ. ಬಸವರಾಜ್ ಮುಂತಾದವರನ್ನು ಸ್ಮರಿಸಿದರು.
ಪ್ರಶಂಸೆ: ಕನ್ನಡಕ್ಕಾಗಿ ದುಡಿದ ನಿಕಟಪೂರ್ವ ಅಧ್ಯಕ್ಷ ಪ್ರಸನ್ನಮೂರ್ತಿ, ಹ.ರಾಮಚಂದ್ರಪ್ಪ, ಸಣ್ಣನಾಗಪ್ಪ, ಆರ್.ಟಿ. ಖಾನ್ ಅಂತರಗಂಗೆ ಶಂಕರಪ್ಪ, ಈರಣ್ಣ ಮುಂತಾದವರ ಸೇವೆಯನ್ನು ಪ್ರಶಂಸಿಸಿ ಗಡಿನಾಡಿನಲ್ಲಿ ಕನ್ನಡ ಪರ ಕಾರ್ಯಕ್ರಮಗಳಿಗೆ ನಿರಂತರ ಒತ್ತು ನೀಡುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿ.ಆರ್. ಚಲುವರಾಜನ್ ಬರೆದ ನಿಡಗಲ್ ನರಸಿಂಹಸ್ವಾಮಿ, ಸಾಹಿತಿ ಚಿತ್ತಯ್ಯ ಪೂಜಾರ್ ಬರೆದ ವೀರಬೊಮ್ಮನ ಕಥೆಯ ಕೃತಿಗಳನ್ನು ಜಪಾನಂದಾಜೀ ಬಿಡುಗಡೆ ಮಾಡಿದರು. ಶಾಸಕ ಕೆ.ಎಂ.ತಿಮ್ಮರಾಯಪ್ಪ, ಸಮ್ಮೇಳನಾಧ್ಯಕ್ಷ ವಿ.ಆರ್.ಚಲುವರಾಜನ್, ವಿವೇಕಾನಂದ ಆಶ್ರಮದ ಅಧ್ಯಕ್ಷ ಜಪಾನಂದಜೀ, ಜಿಲ್ಲಾಧ್ಯಕ್ಷ ಸೋಮುಭಾಸ್ಕರಾಚಾರ್, ಹ.ರಾಮಚಂದ್ರಪ್ಪ, ಕನ್ನಡ ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯಕರ್ಶಿ ಬೆಳ್ಳಿಬಟ್ಟಲು ರಾಮಚಂದ್ರರಾವ್ ಮುಂತಾದವರನ್ನು ಕಸಾಪ ವತಿಯಿಂದ ಸನ್ಮಾನಿಸಿದರು.
ಗಣ್ಯರು ಸೇರಿದಂತೆ ಹಿರಿಯ ಸಾಹಿತಿಗಳಾದ ಆರ್.ಟಿ.ಖಾನ್ ಈರಣ್ಣ ಸಣ್ಣನಾಗಪ್ಪ, ಶ್ಯಾ.ನಾ ಪ್ರಸನ್ನಮೂರ್ತಿ, ವಿ.ಜಯರಾಮ್ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

