ತುಮಕೂರು

ಕನ್ನಡ ನಾಡಿನಲ್ಲೇ ಮಾತೃ ಭಾಷೆ ಕಣ್ಮರೆ: ಕಿದಿಯೂರು ಸುಬ್ಬರಾವ್

Published On :

ಕ.ಪ್ರ.ವಾರ್ತೆ   ಮಧುಗಿರಿ   ಜೂ. 22
ಕನ್ನಡ ನಾಡಿನಲ್ಲೇ ಮಾತೃ ಭಾಷೆ  ಕಣ್ಮರೆಯಾಗುತ್ತಿದ್ದು ಅಚ್ಚ ಕನ್ನಡದಲ್ಲಿ ಕೂಗುವ ಅಪ್ಪ, ಅಮ್ಮ ಸಂಸ್ಕೃತಿ  ಹೋಗಿ  ಮಮ್ಮಿ, ಡ್ಯಾಡಿ, ಅಂಕಲ್. ಆಂಟಿ ಸಂಸ್ಕೃತಿಗೆ ಅಂಟಿಕೊಂಡಿರುವುದು ವಿಷಾದದ ಸಂಗತಿ ಎಂದು ಹಿರಿಯ ಪತ್ರಕರ್ತ ಕಿದಿಯೂರು ಸುಬ್ಬರಾವ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಮಾಲಿಮರಿಯಪ್ಪ ರಂಗಮಂದಿರದಲ್ಲಿ 5ನೇ ಕನ್ನಡ ಸಾಹಿತ್ಯ ಜಾತ್ರೆಯಲ್ಲಿ ಮಾಧ್ಯಮ ಗೊಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನೆಲದಲ್ಲೇ ಮಾತೃ ಭಾಷೆಗೆ  ಅಪಾಯ ಖಚಿತ.  ಒಂದು ವೇಳೆ ಈ ಬೆಳವಣಿಗೆ ಹೀಗೆ ಮುಂದುವರಿದರೆ ಕನ್ನಡ ಭಾಷೆ ಕ್ಷೀಣಿಸುವ ದಿನ ದೂರವಿಲ್ಲ, ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಅಣ್ಣ, ತಮ್ಮ, ಅಪ್ಪ, ಅಮ್ಮ, ಚಿಕ್ಕಮ್ಮ ಹೀಗೆ ಸಂಬಂಧ ಬೆಸೆಯುವ ನಮ್ಮ ಮಾತೃ ಭಾಷೆಯ ಆಚಾರ-ವಿಚಾರ ಕಲಿಸುವ ನಿಟ್ಟಿನಲ್ಲಿ ಅಂಕಲ್, ಆಂಟಿ ಸಂಸ್ಕೃತಿಗೆ ಗುಡ್ ಬೈ ಹೇಳಬೇಕು ಎಂದು ಕರೆಯಿತ್ತರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಎಸ್.ನಾಗಣ್ಣ ಜಾಗತೀಕರಣ, ಖಾಸಗೀಕರಣ ಹಾಗೂ  ಔದ್ಯೋಗೀಕರಣದ ಸುಳಿಗೆ ಸಿಕ್ಕಿ ಮುದ್ರಣ ಮಾಧ್ಯಮ ಮುಳುಗು ದೋಣಿಯಂತಾಗಿದೆ. ಜನರು ಅತಿ ವೇಗವಾಗಿ ಬೆಳೆಯುತ್ತಿರುವ ದೃಶ್ಯ ಮಾಧ್ಯಮ ಪ್ರಭಾವಕ್ಕೆ ಸಿಕ್ಕಿ ಮುದ್ರಣ ಮಾಧ್ಯಮ ಸೊರಗುತ್ತಿದೆ. ಈ ಎರಡರ ಮಧ್ಯ ಹೊಸ ಪತ್ರಿಕೆಗಳು ಕೂಡ ಹುಟ್ಟಿ ಜನರ ಕೈ ಸೇರುತ್ತಿವೆ. ಇವುಗಳಿಂದ ಸಮಾಜ, ಆಡಳಿತ ಯಂತ್ರ ಚುರುಕು ಗೊಳಿಸುವ ಕೆಲಸ ಆಗಬೇಕಿದೆ. ಆದರೆ ಕೆಲ ಮಾಧ್ಯಮಗಳು ಸರ್ಕಾರದ ಪರಾಮರ್ಶೆ ಮಾಡುವ ಬದಲು ಆಡಳಿತದ ಒಂದು ಭಾಗವಾಗಿ ಕೆಲಸ ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ವಿಷಾದನೀಯ: ನಾಗರಿಕರ ಹೇಳಿಕೆಗಳು ಸತ್ಯವೋ-ಮಿಥ್ಯವೋ ಪತ್ರಿಕೆಗಳಲ್ಲಿ ಬರೆಯಬೇಕಾದುದು ಪತ್ರಕರ್ತನ ಕರ್ತವ್ಯ, ಸಮ್ಮೇಳನ ಮಾರುವ-ಕೊಳ್ಳುವ ಸರಕಾಗಬಾರದು. ಮಾಧ್ಯಮ ಗೋಷ್ಠಿ ಜವಾಬ್ದಾರಿಯುತ ಗೋಷ್ಠಿ ಈ ಕಾರ್ಯಕ್ರಮಕ್ಕೆ ಬೆಳರೆಣಿಕೆ ಜನ ಇರುವುದು ವಿಷಾದನಿಯ. ಇಲಾಖೆಯಿಂದ ಓಓಡಿ ಸೌಲ್ಯ ಇದ್ದಾಗ್ಯೂ ಕೂಡ ಶಿಕ್ಷಕ-ಶಿಕ್ಷಕಿಯರು ಗೈರು ಹಾಜರಿ ಎದ್ದು ಕಾಣುತ್ತಿತು.್ತ ಇದನ್ನು ಮನಗಂಡ ನಾಗಣ್ಣ ತಾ.ಕಸಾಪ ಅಧ್ಯಕ್ಷರು ಸಮ್ಮೇಳನ ನಂತರ ಖರ್ಚು- ವೆಚ್ಚ ಕೊಡುವ ಜತಗೆ ಜನಾಭಿಪ್ರಾಯ ಸಂಗ್ರಹಿಸಿ ಮೌಲ್ಯ ಮಾಪನ ಮಾಡಿ ಮುಂದಿನ ಸಮ್ಮೇಳನಕ್ಕೆ ಸಿದ್ಧರಾಗಿ ಎಂದರು.  
ಜಿಲ್ಲಾ ಪತ್ರಕರ್ತರಾದ  ಜಿ.ಇಂದ್ರಕುಮಾರ್ ತಲಪುರಿಗೆ ಮತ್ತು ಮಾಧ್ಯಮ ಹರೀಶ ಆಚಾರ್ಯ ಅಭಿವೃದ್ಧಿಗೆ ಮಾಧ್ಯಮ ಕೊಡುಗೆ, ಚಿ.ನಿ.ಪುರುಷೋತ್ತಮ ಪ್ರವಾಸಿ ತಾಣಗಳ ಸಂರಕ್ಷಣೆಯಲ್ಲಿ ಮಾಧ್ಯಮ ಹಾಗೂ ಜಯಣ್ಣ ಭಾಷಾಭಿವೃದ್ಧಿಯಲ್ಲಿ ದೃಶ್ಯ ಮಾಧ್ಯಮಗಳ ಪಾತ್ರ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದರು. ತಾ.ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಸಮ್ಮೇಳನಾಧ್ಯಕ್ಷ ಎಂ.ಡಿ.ಶ್ರೀನಿವಾಸ್,ಉಪಸ್ಥಿತರಿದ್ದರು. ಪತ್ರಕರ್ತ ಜಿ.ನಾರಾಯಣರಾಜು ಸ್ವಾಗತಿಸಿ ಬಂಡಿ ಚೌಡಯ್ಯ ನಿರೂಪಿಸಿ ವೈ.ಸೋಮಶೇಖರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.