ಉರ್ದು ಶಾಲಾ ಮಕ್ಕಳಿಗೆ ಪತ್ರ ಲೇಖನ ಕೌಶಲ್ಯದ ಕುರಿತು ವಿವರ
ಹುಳಿಯಾರು: ಒಂದು ಕಾಲದ ಹೆಚ್ಚು ಮಹತ್ವ ಪಡೆದಿದ್ದ ಪತ್ರಗಳು ಇಂದಿನ ಆಧುನಿಕ ಜಗತ್ತಿನ ಹೊಸ ಹೊಸ ಆವಿಷ್ಕಾರದಿಂದ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪುತ್ತಿದ್ದು, ಪತ್ರ ಬರೆಯುವವರ ಸಂಖ್ಯೆ ಬೆರಳೆಣಿಕೆಯಷ್ಟಾಗಿರುವ ಹಿನ್ನಲೆಯಲ್ಲಿ ಪತ್ರ ಬರೆಯುವ ಕೌಶಲ್ಯ ಹಾಗೂ ಪತ್ರ ಲೇಖನದ ಮಹತ್ವ ಎಂತಹದ್ದು ಎಂಬುದನ್ನು ಮನರಿಕೆ ಮಾಡಿಕೊಡುವ ವಿನೂತನ ಕಾರ್ಯಕ್ಕೆ ಹುಳಿಯಾರಿನ ಕೆಲ ಯುವ ಮುಸ್ಲಿಂ ಯುವಕರು ಮುಂದಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವಂತೆ ಪಟ್ಟಣದ ಉರ್ದು ಶಾಲಾ ಮಕ್ಕಳಿಗೆ ಕನ್ನಡದಲ್ಲಿ ಯಾವರೀತಿ ಪತ್ರ ಬರೆಯಬೇಕು ಎಂಬುದನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಿ ಶಾಲೆಯ ಎಲ್ಲಾ ಮಕ್ಕಳಿಂದ ತಮ್ಮ ತಮ್ಮ ಆಪ್ತರಿಗೆ ಪತ್ರ ಬರೆಯಿಸಿ, ಅಂಚೆ ಮೂಲಕ ಕಳಿಸುವ ಕಾರ್ಯ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯುವ ಮುಖಂಡ ಇಮ್ರಾಜ್ ಮಾತನಾಡಿ, ಆಧುನಿಕತೆಗೆ ಮಾರುಹೋಗಿರುವ ಮಾನವ ತಾನು ಹಿಂದೆ ನಡೆದುಬಂದ ದಾರಿಯನ್ನು ಮರೆಯುತ್ತಿದ್ದಾನೆ.ಇದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾನೆ. ಅಲ್ಲದೆ ಇಂದಿನ ಶಾಲಾ ಮಕ್ಕಳ ಮೇಲಿಯೂ ಆಧುನಿಕತೆ ತನ್ನ ಪ್ರಭಾವ ಬೀರಿದ್ದು, ಮಕ್ಕಳಲ್ಲಿ ಅಡಕವಾಗಿರುವ ಉತ್ತಮ ಕೌಶಲ್ಯವನ್ನು ಮರೆಮಾಚುತ್ತಿದೆ, ಸಮೂಹ ಮಾಧ್ಯಮಗಳಾದ ಟಿ.ವಿ.ಮೊಬೈಲ್, ಅಂತರ್ಜಾಲದ ಹೆಚ್ಚಿನ ಬಳಕೆಯಲ್ಲಿ ಶಾಲಾ ಮಕ್ಕಳು ತೊಡಗಿದ್ದು, ಶಿಕ್ಷಕರು ನೀಡಿದ ಯೋಜನಾ ಕಾರ್ಯಗಳನ್ನು ತಮ್ಮ ಬುದ್ಧಿ ಉಪಯೋಗಿಸಿ ಮಾಡದೇ ಇಂಟರ್ ನೆಟ್ ಮೊರೆ ಹೋಗುತ್ತಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

