ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡಿದ್ದಕ್ಕೆ ಆಕ್ರೋಶ
ಕ.ಪ್ರ. ವಾರ್ತೆ ಟಿ ತುಮಕೂರು ಟಿ ಮಾ.4
ರಾಜ್ಯ ಬಿಜೆಪಿ ಸರ್ಕಾರ 22 ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡಿರುವುದನ್ನು ಖಂಡಿಸಿ ಹಾಗೂ ಇತರೆ ಶೈಕ್ಷಣಿಕ ವಿರೋಧಿ ನೀತಿ ವಿರೋಧಿಸಿ ರಾಜ್ಯಾದ್ಯಂತ ಎಬಿವಿಪಿ ವತಿಯಿಂದ ಕರೆ ನೀಡಲಾಗಿದ್ದ ಪ್ರತಿಭಟನೆ ತುಮಕೂರಿನಲ್ಲೂ ನಡೆದಿದೆ.
ಈ ಕುರಿತು ಪ್ರತಿಭಟನೆ ನಡೆಸಿ, ಹೇಳಿಕೆ ನೀಡಿರುವ ಎಬಿವಿಪಿ, ರಾಜ್ಯದಲ್ಲಿ ಅನುಮೋದನೆ ಪಡೆದ 22 ಖಾಸಗಿ ವಿವಿಗಳಲ್ಲಿ 18 ವಿವಿಗಳು ಬೆಂಗಳೂರನ್ನೇ ಏಕೆ ಆಯ್ಕೆ ಮಾಡಿಕೊಂಡಿವೆ. ವಿಶಾಲ ಕರ್ನಾಟಕದ ಕಡೆ ಏಕೆ ವಿವಿ ಸ್ಥಾಪಿಸುತ್ತಿಲ್ಲ. ಶಿಕ್ಷಣದ ಗುಣಮಟ್ಟದಲ್ಲಿ ಆ ಕಾಲೇಜುಗಳ ಶೈಕ್ಷಣಿಕ ಇತಿಹಾಸವೇನು ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳು ಇರುವಾಗ ದಿಢೀರನೆ ಇಷ್ಟೊಂದು ವಿವಿಗಳಿಗೆ ಅನುಮತಿ ನೀಡಿರುವುದು ಪ್ರಶ್ನಾರ್ಹವಾಗಿದೆ ಎಂದು ಎಬಿವಿಪಿ ತಿಳಿಸಿದೆ.
ರಾಜಸ್ಥಾನ, ಛತ್ತೀಸ್ಗಢ ಮುಚ್ಚಿಹೋದವು: ರಾಜಸ್ಥಾನ, ಛತ್ತೀಸ್ಗಡ, ಮತ್ತಿತರೆ ರಾಜ್ಯಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿ ನಂತರ ಮುಚ್ಚಿ ಹೋದ ಖಾಸಗಿ ವಿವಿಗಳ ಅನುಭವ ಅಧ್ಯಯನ ಮಾಡಲಾಗಿದೆಯಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿರುವ ಎಬಿವಿಪಿ, ಈ ಕಾಲೇಜುಗಳಿಗೆ ಖಾಸಗಿ ವಿವಿಯನ್ನಾಗಿ ಅನುಮತಿ ನೀಡಲು ಅವುಗಳ ಅರ್ಹತೆಯ ಸಮೀಕ್ಷೆ, ಅಧ್ಯಯನ ಸಂಪೂರ್ಣವಾಗಿ ನಡೆಸಲಾಗಿದೆಯಾ, ನಡೆಸಿದ್ದರೆ ಯಾರ ಅಧ್ಯಕ್ಷತೆಯಲ್ಲಿ ಇಷ್ಟೊಂದು ಖಾಸಗಿ ವಿವಿ ನೀಡಲು ಶಿಫಾರಸು ಮಾಡಲಾಗಿದೆ. ರಾಜ್ಯದ ಯಾವ ಕ್ಷೇತ್ರದಲ್ಲಿ ಖಾಸಗಿ ವಿವಿ ಬೇಕು ಅಥವಾ ಬೇಡ ಎಂಬುದರ ಕುರಿತು ಶಿಕ್ಷಣ ತಜ್ಞರ ಅಭಿಪ್ರಾಯ ಏನಾದರೂ ಇದೆಯಾ. ಹಾಗೇನಾದರೂ ಇದ್ದರೆ, ಆ ಸಮೀಕ್ಷಾ ವರದಿಯನ್ನು ರಾಜ್ಯ ಸರ್ಕಾರ ಬಹಿರಂಗಪಡಿಸಬಾರದೇಕೆ ಎಂದು ಎಬಿವಿಪಿ ಪ್ರಶ್ನೆಗಳ ಸುರಿಮಳೆಗರೆದಿದೆ.
ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಹತ್ತಾರು ವರ್ಷಗಳಿಂದ ನಡೆಸಿದ ಒಳ್ಳೆಯ ಇತಿಹಾಸವಿರುವವರು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಖಾಸಗಿ ವಿವಿಗಳನ್ನು ಪ್ರಾರಂಭ ಮಾಡಿರುವುದಕ್ಕೆ ಎಬಿವಿಪಿ ವಿರೋಧವಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

