ತುಮಕೂರು

ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲವು ಖಚಿತ: ಎಚ್.ವಿ.ವೆಂಕಟೇಶ್

Published On :

ಕನ್ನಡಪ್ರಭ ವಾರ್ತೆ  ಪಾವಗಡ  ಮಾ.7
ಗುರುವಾರ ನಡೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣಾದ್ಯಂತ ಬಹುತೇಕ ಮತದಾರರ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು 23ವಾರ್ಡ್ಗಳ ಪೈಕಿ 18ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆಂದು ತಾಲೂಕು ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ. ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಪಾವಗಡ ತಾಲೂಕು ಕಾಂಗ್ರೆಸ್ ಭದ್ರಕೋಟೆಯಾಗಿದ್ದು ಶಾಸಕ ವೆಂಕಟರಮಣಪ್ಪ ತಾಲೂಕಿನಾದ್ಯಂತ ಕೈಗೊಂಡ ನೂರಾರು ಕೋಟಿ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಪಡೆದು ಪಕ್ಷದ ಹಿರಿಯ ಮುಖಂಡರ ಆಶೀರ್ವಾದದಿಂದ ವಾರ್ಡ್ಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಿದ ಫಲವಾಗಿ ಮತದಾರರು ಅಭ್ಯರ್ಥಿಗಳನ್ನು ಬೆಂಬಲಿಸಿ ಮತ ಹಾಕಿದ್ದಾರೆಂಬ ವಿಶ್ವಾಸ ನಮಗಿದೆ. ಕಾರಣ ಪಟ್ಟಣದ 23ವಾರ್ಡ್ಗಳ ಪೈಕಿ 18 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದು ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬೀಳಲಿದೆ ಎಂದರು.
ಪಟ್ಟಣದ ವಾರ್ಡ್ ನಂಬರ್ 1, ವಾರ್ಡ್ 2, ವಾರ್ಡ್ 3, ವಾರ್ಡ್, 4, ವಾರ್ಡ್ 5, ವಾರ್ಡ್ 8ರ ಅಭ್ಯರ್ಥಿ ಮಲ್ಲಿಕಾಬೀ ಸೇರಿದಂತೆ ಪಟ್ಟಣದ ಸುಮಾರು 18ವಾರ್ಡ್ಗಳಲ್ಲಿ ಶೇ. 85ರಷ್ಟು ಮತದಾನ ವಾಗಿದೆ. ಇಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಶಾಂತಿಯುತ ಮತದಾನ ನಡೆಯಲು ಅವಕಾಶ ಕಲ್ಪಿಸಿದ ಚುನಾವಣಾಧಿಕಾರಿ ಮಹಮ್ಮದ್ ಅಲ್ತಾಪ್ ಪಾಷ, ಸಿಪಿಐ ಶೇಷಾದ್ರಿ ಹಾಗೂ ಪಿಎಸ್ಐ ರಾಮಕೃಷಪ್ಪ ಅವರನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಮುಖಂಡರಾದ ಬೊಮ್ಮತನಹಳ್ಳಿ ತಿಪ್ಪೇಸ್ವಾಮಿ,ಯುವ ಘಟಕದ ಅಧ್ಯಕ್ಷ ಮೈಲಾರರೆಡ್ಡಿ, ಸರವಾಟಪುರ ಪ್ರಭಾಕರರೆಡ್ಡಿ, ಕುರಲಪಲ್ಲಿ ಪ್ರಕಾಶ್ ರೆಡ್ಡಿ ಮುಂತಾದವರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.