ತುಮಕೂರು

ಶಾಸಕರ ಮೇಲೆ ಹಲ್ಲೆ ಪ್ರಕರಣ: ಬಿ.ಕೆ.ಸೋಮಣಗೆ ನ್ಯಾಯಾಂಗ ಬಂಧನ

Published On :

ತುರುವೇಕೆರೆ: ಸ್ಥಳೀಯ ಶಾಸಕ ಎಂ.ಟಿ.ಕೃಷಪ್ಪನವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಬಿ.ಕೆ. ಸೋಮಣನವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಮಂಗಳವಾರದಂದು ಮತಿಘಟ್ಟದ ನಾಟಕದಲ್ಲಿ ಬಿ.ಕೆ.ಸೋಮಣನವರನ್ನು ಹಾಗೂ ಅವರ ಬೆಂಬಲಿಗರನ್ನು ಶಾಸಕರ ಬೆಂಬಲಿಗರು ಥಳಿಸಿ ಅವಮಾನ ಮಾಡಿದ್ದರು.  
ಅದಕ್ಕೆ ಪ್ರತೀಕಾರವೆಂಬಂತೆ  ಸೋಮಣನವರ ಗ್ರಾಮವಾದ ಬ್ಯಾಲಹಳ್ಳಿಯಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ಶಾಸಕ ಎಂ.ಟಿ.ಕೃಷಪ್ಪನವರು ಗ್ರಾಮಕ್ಕೆ ಭೇಟಿ ಮಾಡಿದ್ದ ವೇಳೆ ಸೋಮಣ ಹಾಗೂ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಶಾಸಕ ಎಂ.ಟಿ.ಕೃಷಪ್ಪನವರು ಪೊಲೀಸರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಪ್ರಕರಣ ಸೋಮಣನವರ ಮೇಲೆ ದಾಖಲಾಗಿದ್ದು ಸೋಮಣನವರ ಸಹಿತ ಗೌರಿಶಂಕರ್ ಹಾಗೂ ಗೂರಲಮಠದ ಕುಬೇರ ಎಂಬುವವರನ್ನು ಸಹ ಬಂಧಿಸಲಾಗಿತ್ತು.  ಶಾಸಕ ಎಂ.ಟಿ.ಕೃಷಪ್ಪನವರ ವಿರುಧ್ಧವೂ ಸಹ ಸೋಮಣ ದೂರು ನೀಡಿದ್ದು ಅವರ ವಿರುದ್ಧವೂ ಪ್ರಕರಣ ದಾಖಲು ಮಾಡಲಾಗಿದೆ ಎಂದು ಡಿವೈಎಸ್ಪಿ ಉಷಾರಾಣಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.