ವಿದ್ಯಾರ್ಥಿನಿ ಆತ್ಮಹತ್ಯೆ: ಸಿಓಡಿ ತನಿಖೆಗೆ ಶ್ರೀನಿವಾಸ್ ಕಲ್ಕೆರೆ ಒತ್ತಾಯ
ಕ.ಪ್ರ.ವಾರ್ತೆ ್ಣ ತುಮಕೂರು ್ಣ ಮಾ.11
ತುರುವೇಕೆರೆ ತಾಲೂಕು ಗುಡ್ಡೇನಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಎಚ್.ಎಸ್. ರಂಜಿತಾ (14) ಸಾವು ಅನುಮಾನಾಸ್ಪದವಾಗಿದ್ದು, ಈ ಪ್ರಕರಣವನ್ನು ಕೂಡಲೇ ಸಿಓಡಿ ತನಿಖೆಗೆ ವಹಿಸಬೇಕೆಂದು ಬಾಬಾ ಅಂಬೇಡ್ಕರ್ ಜಗಜೀವನ್ರಾಂ ಜನಜಾಗೃತಿ ಸಮಿತಿ ಜಿಲ್ಲಾ ಸಂಘಟನೆ ಅಧ್ಯಕ್ಷ ಕೆ.ವಿ. ಶ್ರೀನಿವಾಸ್ ಕಲ್ಕೆರೆ ಒತ್ತಾಯಿಸಿದ್ದಾರೆ.
ಮೇಲ್ನೋಟಕ್ಕೆ ಅಧಿಕಾರಿಗಳು ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಆದರೆ ಸಾವಿನ ಗಂಭೀರತೆ ಬೇರೆಯದೇ ಇದೆ. ವಿದ್ಯಾರ್ಥಿನಿ ರಂಜಿತಾಳ ಸಾವು ವಸತಿ ಶಾಲೆಯಲ್ಲಿ ವ್ಯಾಸಂಗಕ್ಕೆ ಕಳುಹಿಸಿರುವ ಎಲ್ಲ ಪೋಷಕರಲ್ಲಿ ಆಘಾತ ಮತ್ತು ಅನುಮಾನವನ್ನು ಉಂಟು ಮಾಡಿದೆ. ಮೊರಾರ್ಜಿ ವಸತಿ ಶಿಕ್ಷಣ ಶಾಲೆಗಳ ಬಗ್ಗೆ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳ ಬಡಮಕ್ಕಳ ಪೋಷಕರಿಗೆ ಸ್ಪಷ್ಟ ಚಿತ್ರಣ ಸಿಗಲು ಮತ್ತು ನಂಬಿಕೆ ಬರಲು ಆಕೆಯ ಸಾವಿನ ಸತ್ಯವನ್ನು ತಿಳಿಸಬೇಕಾದ್ದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಜಿಲ್ಲಾ ಹಿಂದುಳಿದ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಸಿ.ಟಿ. ಮುದ್ದುಕುಮಾರ್ ತಿಳಿಸಿರುವಂತೆ, ವಿದ್ಯಾರ್ಥಿನಿ ತಾಲೂಕಿನ ಹಿಂಡುಮಾರನಹಳ್ಳಿಯ ತನ್ನ ಮನೆಗೆ ಹೋಗಬೇಕು. ಆದರೆ ತನ್ನ ತಾಯಿ ಬಯ್ಯುತ್ತಾರೆ ಎಂದು ತನ್ನ ಸಹಪಾಠಿಗಳ ಜತೆ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾರೆ. ಹೀಗಾಗಿ ಮೊರಾರ್ಜಿ ವಸತಿ ಶಾಲೆಯ ವಾರ್ಡನ್ ಹಾಗೂ ಪ್ರಿನ್ಸಿಪಾಲರ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಬೇಕು. ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಬೇಕು ಎಂದು ಶ್ರೀನಿವಾಸ್ ಕಲ್ಕೆರೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

