ತುಮಕೂರು

ಶಿರಾ: ಕಾಂಗ್ರೆಸ್‌ಗೆ ಅಧಿಕಾರ

Published On :

ಶಿರಾ: ಇಲ್ಲಿನ ನಗರಸಭೆಯ 31 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಜೆಡಿಎಸ್ 10, ಬಿಜೆಪಿ 1, ಪಕ್ಷೇತರರು 5 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ.
ವಾರ್ಡ್ ನಂ. 6 ಬಸವರಾಜು, ವಾರ್ಡ್ ನಂ. 9 ಶುಭಾ ಎಸ್., ವಾರ್ಡ್ ನಂ. 12 ಶೇಖ್ ಅಹಮದಿ, ವಾರ್ಡ್ ನಂ. 16 ಗೌಸ್ ಬೇಗ್, ವಾರ್ಡ್ ನಂ. 17 ಜಿಹಾನ್ ಮೊಹಮದ್, ವಾರ್ಡ್ ನಂ. 18 ಅಖಲಾ ಬಾನು, ವಾರ್ಡ್ ನಂ. 19 ರಜಿಯಾ ಖಾನಂ, ವಾರ್ಡ್ ನಂ. 20, ಅಮಾನುಲ್ಲಾ ಖಾನ್, ವಾರ್ಡ್ ನಂ. 21 ಚಾಂದ್ ಪಾಷಾ, ವಾರ್ಡ್ ನಂ. 22 ಹಬೀಬ್ ಖಾನ್, ವಾರ್ಡ್ ನಂ 24 ಶಾಹಿನಾ ಬಾನು, ವಾರ್ಡ್ ನಂ. 26 ನಟರಾಜು, ವಾರ್ಡ್ ನಂ. 28 ಜ್ಞಾನಪೂರ್ಣ, ವಾರ್ಡ್ ನಂ. 29 ಎಸ್.ಆರ್. ಶ್ರೀನಿವಾಸ ಗುಪ್ತ, ವಾರ್ಡ್ ನಂ. 30 ಎಸ್.ಜೆ.ರಾಜಣ್ಣ, ಇವರು ಕಾಂಗ್ರೆಸ್ ಪಕ್ಷದಿಂದ ವಿಜೇತರಾದ 15 ಅಭ್ಯರ್ಥಿಗಳು.
ಜೆಡಿಎಸ್: ಜೆಡಿಎಸ್ ಪಕ್ಷದಿಂದ ವಿಜೇತರಾದವರೆಂದರೆ ವಾರ್ಡ್ ನಂ. 1 ಪುಟ್ಟರಾಜು (ರಾಜಣ್ಣ), ವಾರ್ಡ್ ನಂ. 2 ಆರ್.ಉಗ್ರೇಶ್, ವಾರ್ಡ್ ನಂ. 3 ಶಾಂತಮ್ಮ ಎಚ್, ವಾರ್ಡ್ ನಂ. 4 ಅನ್ನಪೂರ್ಣ, ವಾರ್ಡ್ ನಂ. 8 ಡಿ.ಮಂಜುನಾಥ್ , ವಾರ್ಡ್ ನಂ. 10 ಅಂಜಿನಪ್ಪ.ಬಿ, ವಾರ್ಡ್ ನಂ. 11 ತಬ್ಸುಮ್ ಬಾನು, ವಾರ್ಡ್ ನಂ. 14 ಸರಿತಾ.ಆರ್., ವಾರ್ಡ್ ನಂ. 27 ಪಿ.ಮೌನೇಶ್, ವಾರ್ಡ್ ನಂ. 31 ರೇಣುಕಮ್ಮ.ಎ, ಇವರು ಜೆಡಿಎಸ್ ಪಕ್ಷದಿಂದ ವಿಜೇತರಾಜ 10 ಮಂದಿ ಅಭ್ಯರ್ಥಿಗಳು.
ಪಕ್ಷೇತರರು: ಪಕ್ಷೇತರರಾಗಿ ಕಣಕ್ಕಿಳಿದಿದ್ದ ವಿಜೇತರು ವಾರ್ಡ್ ನಂ. 5 ವಿ.ನಟರಾಜು, ವಾರ್ಡ್ ನಂ. 13 ಎಸ್.ಕೆ.ಅಬ್ದುಲ್ ಖಾದರ್, ವಾರ್ಡ್ ನಂ. 15 ರೇಹಾನಾ ಬಾನು, ವಾರ್ಡ್ ನಂ. 23 ಇಸ್ಮಾಯಿಲ್ ಬೇಗ್, ವಾರ್ಡ್ ನಂ. 25 ಎಸ್.ಪ್ರಕಾಶ್ ಮುದ್ದುರಾಜ್, ಇವರೆಲ್ಲರೂ ಪಕ್ಷೇತರ ವಿಜೇತ ಅಭ್ಯರ್ಥಿಗಳಾಗಿದ್ದಾರೆ.
ಬಿಜೆಪಿ: ಭಾರತೀಯ ಜನತಾ ಪಕ್ಷದಿಂದ ಸ್ಪರ್ದಿಸಿದ್ದ ವಾರ್ಡ್ ನಂ. 7 ಶಾರದಾ.ಟಿ, ಇವರು ವಿಜೇತರಾಗಿದ್ದಾರೆ.
ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಕಾಂತರಾಜು ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ಪ್ರಹ್ಲಾದ್, ರವಿ ಅವರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.



ಆತ್ಮಾವಲೋಕನ ಬಿಜೆಪಿಗೆ ಅಗತ್ಯ
ಜನರ ತೀರ್ಪನ್ನು ಗೌರವಿಸುತ್ತೇವೆ. ನಮಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿನ್ನೆಡೆಯಾಗಿದೆ.
ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿತ್ತು. ಆದರೆ ಶಿಸ್ತಿನ ಪಕ್ಷ ಎಂದೇ ಹೆಸರುಗಳಿಸಿದ್ದ ಬಿಜೆಪಿಯ ಜಗಳ, ಗಲಾಟೆಯಿಂದ ಜನ ರೋಸತ್ತು ಹೋಗಿದ್ದಾರೆ. ರಾಜ್ಯ ನಾಯಕರು, ಪಕ್ಷದ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಟಿ ಶಿವಪ್ರಸಾದ್, ಜಿಲ್ಲಾ ಬಿಜೆಪಿ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.