ತುಮಕೂರು

ಶಾಸಕ ಸಿ.ಬಿ.ಸುರೇಶ್‌ಬಾಬು ಸಹೋದರ ಸಿ.ಬಿ. ತಿಪ್ಪೇಸ್ವಾಮಿ ಸೋಲು, ತೀವ್ರ ಮುಖಭಂಗ

Published On :

ಚಿ.ನಾ.ಹಳ್ಳಿ ಪುರಸಭೆ: ಜೆಡಿಎಸ್ ನಿರೀಕ್ಷಿತ ಜಯ


ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಜಯಭೇರಿ ಬಾರಿಸಿದೆ.
ಮಾ.7ರಂದು ಪುರಸಭೆಯ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳಿಸಿ ನಿಚ್ಚಳ ಬಹುಮತಗಳಿಸಿದೆ.
 ಕಾಂಗ್ರೆಸ್ ಮೂರು ಸ್ಥಾನಗಳಿಸಿ ಹಿಂದಿನ ಬಾರಿ ಪಡೆದಿದ್ದ ಸ್ಥಾನಗಳಲ್ಲಿ ಒಂದು ಸ್ಥಾನ ಕಳೆದುಕೊಂಡಿದೆ. ದಿವಂಗತ ಚಿಕ್ಕರಾಮಯ್ಯನವರ ಕಾಲದಿಂದಲೂ ಅವರ ಕುಟುಂಬದವರು ಸ್ಪರ್ಧಿಸಿದ ಯಾವುದೇ ಚುನಾವಣೆಯಲ್ಲಿ ಪರಾಭವ ಹೊಂದಿದ ನಿದರ್ಶನ ಇದುವರೆಗೆ ಇರಲಿಲ್ಲ. ಆದರೆ  ದಿ. ಚಿಕ್ಕರಾಮಯ್ಯನವರ ಮಗ ಸಿ.ಬಸವರಾಜು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವ ಹೊಂದುವುದರೊಂದಿಗೆ ನಿರಂತರ ಜಯದ ಅವಕಾಶವನ್ನು ಕೈಚೆಲ್ಲಿದ್ದಾರೆ. ಅದೇ ರೀತಿ ಜೆಡಿಎಸ್ 18 ಸ್ಥಾನಗಳನ್ನು ಪಡೆದು ಜಯದ ಬಿರುಗಾಳಿಯೆಬ್ಬಿಸಿದ್ದರೂ ಸಹ ಶಾಸಕ ಸಿ.ಬಿ.ಸುರೇಶ್‌ಬಾಬು ಸಹೋದರ ಸಿ.ಬಿ.ತಿಪ್ಪೇಸ್ವಾಮಿಯವರು ಸೋಲನ್ನಪ್ಪಿದ್ದು, ಶಾಸಕರಿಗೆ ಮುಖಭಂಗವಾದಂತಾಗಿದೆ. ಕೆಜೆಪಿ ಎರಡು ಸ್ಥಾನಗಳಿಸಿದೆ. ಆಡಳಿತಾರೂಢ ಬಿಜೆಪಿ ಖಾತೆ ತೆರೆಯುವಲ್ಲಿ  ವಿಫಲವಾಗಿದೆ.
ಗೆದ್ದಅಭ್ಯರ್ಥಿಗಳು: 1ನೇ ವಾರ್ಡ್ ರೂಪ (ಕೆಜೆಪಿ) 2ನೇ ವಾರ್ಡ್ ಬಿ.ಇಂದಿರಾ(ಜೆಡಿಎಸ್), 3ನೇ ವಾರ್ಡ್ ಸಿ.ಡಿ.ಚಂದ್ರಶೇಖರ್(ಜೆಡಿಎಸ್), 4ನೇವಾರ್ಡ್ ಎಂ.ಡಿ.ನೇತ್ರಾವತಿ (ಕೆಜೆಪಿ), 5 ನೇವಾರ್ಡ್ ಎಂ.ಕೆ.ರವಿಚಂದ್ರ(ಜೆಡಿಎಸ್), 6ನೇವಾರ್ಡ್ ಧರಣಿಲಕ್ಕಪ್ಪ(ಕಾಂಗ್ರೆಸ್), 7ನೇ ವಾರ್ಡ್ ರಾಜಶೇಖರ (ಜೆಡಿಎಸ್,ಅವಿರೋಧ ಆಯ್ಕೆ), 8ನೇ ವಾರ್ಡ್ ಸಿ.ಬಿ.ಮಲ್ಲಿಕಾರ್ಜುನಯ್ಯ(ಜೆಡಿಎಸ್), 10ನೇ ವಾರ್ಡ್ ಸಿ.ಎಸ್.ರಮೇಶ್(ಜೆಡಿಎಸ್), 11 ನೇವಾರ್ಡ್ ಸಿ.ಕೆ.ಕೃಷ್ಣಮೂರ್ತಿ(ಜೆಡಿಎಸ್), 12ನೇ ವಾರ್ಡ್ ಸಿ.ಆರ್.ತಿಮ್ಮಪ್ಪ (ಜೆಡಿಎಸ್), 13ನೇ ವಾರ್ಡ್ ಸಿ.ಎಂ.ರಂಗಸ್ವಾಮಯ್ಯ (ಜೆಡಿಎಸ್), 14ನೇ ವಾರ್ಡ್ ಹೆಚ್.ಬಿ.ಪ್ರಕಾಶ್(ಜೆಡಿಎಸ್), 15ನೇ ವಾರ್ಡ್ ಸಿ.ಮಲ್ಲೇಶ್ (ಜೆಡಿಎಸ್), 16ನೇ ವಾರ್ಡ್  ಮಹಮದ್ ಖಲಂದರ್(ಜೆಡಿಎಸ್) 17ನೇ ವಾರ್ಡ್ ಸಿ.ಪಿ.ಮಹೇಶ್ (ಗಂಡುಗೊಡಲಿ) (ಕಾಂಗ್ರೆಸ್), 18ನೇ ವಾರ್ಡ್ ಎಲ್.ಪ್ರೇಮ (ಜೆಡಿಎಸ್), 19ನೇ ವಾರ್ಡ್ ಸಿ.ಟಿ.ದಯಾನಂದ (ಜೆಡಿಎಸ್), 20ನೇ ವಾರ್ಡ್ ಗೀತಾ ಸಿ.ಆರ್.(ಜೆಡಿಎಸ್), 21ನೇ ವಾರ್ಡ್ ಪುಷ್ಪ (ಜೆಡಿಎಸ್), 22ನೇ ವಾರ್ಡ್  ರೇಣುಕಮ್ಮ (ಜೆಡಿಎಸ್), 23 ನೇ ವಾರ್ಡ್ ಅಶೋಕ(ಜೆಡಿಎಸ್) ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.