ಗ್ರಾಮೀಣ ಸೊಗಡಿನ ಜಾನಪದ ಕಲೆ ಮರೆಯದಿರಿ: ಗೌರಿಶಂಕರ ಸ್ವಾಮೀಜಿ
ಕ.ಪ್ರ. ವಾರ್ತೆ ್ಣ ತುಮಕೂರು ್ಣ ಮಾ.12
ಮಾನವ ಪ್ರತಿಕ್ಷಣವು ಹೊಸತನ ಕಲಿಯುವ ತವಕದಲ್ಲಿ ಗ್ರಾಮೀಣ ಸೊಗಡಿನ ಜಾನಪದ ಕಲಾವಂತಿಕೆ ಮರೆಯುತ್ತಿದ್ದಾನೆ. ಈ ನಿಟ್ಟಿನಲ್ಲಿ ನಾಟಕಗಳಲ್ಲಿನ ಸಮಾಜಮುಖಿ ಅಂಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೌರಿಶಂಕರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಸಮೀಪದ ಮೆಳೇಕಲ್ಲಹಳ್ಳಿ ಕುಸುಮ ಕಲಾ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸುಗ್ಗಿ ರಂಗಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಟಕಗಳು ಮಾನವನ ಬದುಕನ್ನು ಬದಲಿಸುವ ಉತ್ತಮ ಮಾರ್ಗವಾಗಿದೆ. ಅವುಗಳಲ್ಲಿನ ಸಮಾಜಮುಖಿ ಅಂಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಾನವ ಪ್ರತಿಕ್ಷಣವು ಹೊಸತನ ಕಲಿಯುವ ತವಕದಲ್ಲಿ ಗ್ರಾಮೀಣ ಸೊಗಡಿನ ಕಲಾವಂತಿಕೆಯಿಂದ ದೂರಾಗುತ್ತಿದ್ದಾರೆ. ಆದರೆ, ಇಂತಹ ಸಂಘ ಸಂಸ್ಥೆಗಳು ಕಲೆಯ ಮಹತ್ವ ತಿಳಿಸಿ. ಆ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯವಾದದ್ದು ಎಂದರು.
ಗ್ರಾಪಂ ಅಧ್ಯಕ್ಷ ಮುನಿರಾಜು ಮಾತನಾಡಿ, ನಾಟಕ ಕಲೆ ಎಲ್ಲಾ ಜನಾಂಗ, ಧರ್ಮ, ಮನಸ್ಸು ಒಂದುಗೂಡಿಸಿ ಮುನ್ನಡೆಸುವ ಧೀಮಂತ ಕಲೆ, ಇದು ಎಲ್ಲಾ ಮನಸುಗಳ ಒಳ ತುಡಿತಗಳನ್ನು ಜಾಗೃತಗೊಳಿಸಿ ಸುಪ್ತವಾಗಿ ಹುದುಗಿರುವ ತನ್ನೊಳಗಿನ ಕೀಳರಿಮೆ ಹೋಗಲಾಡಿಸಿ ಬೆಳಕಿನಡೆಗೆ ದಾರಿ ತೋರುವ ಮಾರ್ಗವಾಗಿದೆ ಎಂದರು. ಜಾನಪದ ಕಲಾವಿದ ಕೆ.ಉಮೇಶ್ ಅವರನ್ನು ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ವೀರಣ್ಣ, ಚಂದ್ರಯ್ಯ, ಶಿವಣ್ಣ ಭಾಗವಹಿಸಿದ್ದರು. ತೀರ್ಥಪ್ರಸಾದ್ ನಿರೂಪಿಸಿ, ವೆಂಕಟೇಶ್ ಸ್ವಾಗತಿಸಿ, ರಮೇಶ ಮೆಳೇಕಲ್ಲಹಳ್ಳಿ ವಂದಿಸಿದರು. ನಂತರ ನಾಟಕ ಮನೆ ತುಮಕೂರು ಇವರಿಂದ ಗೋವಿಂದಾಯ ನಮಃ, ಬೆಂಗಳೂರಿನ ರಂಗ ಪರಂಪರೆ ಟ್ರಸ್ಟ್ ಇವರಿಂದ ಆ ಕರಾಳ ರಾತ್ರಿಯಲ್ಲಿ. ಕುಸುಮ ಕಲಾ ಸಂಘ ಮೆಳೇಕಲ್ಲಹಳ್ಳಿ ಇವರಿಂದ 'ವ್ಯವಸ್ಥೆ' ನಾಟಕ ಪ್ರದರ್ಶನಗೊಂಡವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

