ತುಮಕೂರು: ಕೈಮಗ್ಗ ಮಾರಾಟ ಮೇಳ
ತುಮಕೂರು: ಯುಗಾದಿ ಹಬ್ಬದ ಪ್ರಯುಕ್ತ ಮಾ. 22 ರವರೆಗೆ ವಿಶೇಷ ಕೈಮಗ್ಗ ಮೇಳವನ್ನು ಶೃಂಗೇರಿ ಶಂಕರ ಮಠದಲ್ಲಿ ಏರ್ಪಡಿಸಲಾಗಿದೆ. ಈ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೈಮಗ್ಗ ನೇಕಾರ ಸಹಕಾರ ಸಂಘಗಳ ವತಿಯಿಂದ ಉತ್ಪಾದಿಸಿದ ಹೊಸ ಹೊಸ ವಿನ್ಯಾಸದ ವಸ್ತ್ರಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದು, ಸಾರ್ವಜನಿಕರು ಈ ಮೇಳದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಬಂದೂಕು ತರಬೇತಿ ಶಿಬಿರ
ತುಮಕೂರು: ತುಮಕೂರು ಜಿಲ್ಲಾ ರೈಫಲ್ ಅಸೋಸಿಯೇಷನ್ ವತಿಯಿಂದ ಆಯೋಜಿಸುವ ಸಾರ್ವಜನಿಕ ಬಂದೂಕು ತರಬೇತಿ ಶಿಬಿರದ 37 ನೇ ತಂಡದ ತರಬೇತಿ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕಾರ್ಯದರ್ಶಿ ಬಿ.ಜಿ. ಶ್ರೀನಿವಾಸರಾವ್ ತಿಳಿಸಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿದ್ದು, ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಕವಾಯಿತು ಮೈದಾನದಲ್ಲಿ ಬೆಳಗ್ಗೆ 6 ರಿಂದ 8 ರವರೆಗೆ ತರಬೇತಿ ನಡೆಯಲಿದೆ. ಆಸಕ್ತರು ಅರ್ಜಿಯನ್ನು ಭರ್ತಿ ಮಾಡಿ, 3 ಭಾವಚಿತ್ರಗಳೊಂದಿಗೆ 500 ರು. ಶುಲ್ಕದೊಂದಿಗೆ ಪಾವತಿಸುವಂತೆ ಕೋರಿದ್ದಾರೆ. ಹೆಚ್ಚಿನ ವಿವರಗಳಿಗೆ ಕಾರ್ಯದರ್ಶಿಯವರನ್ನು ಎಂಜಿ ರಸ್ತೆಯಲ್ಲಿರುವ ಶ್ರೀಕೃಷ್ಣ ಚಿತ್ರಮಂದಿರದ ಬಳಿ (ಮೊ. 9845209120) ಸಂಪರ್ಕಿಸುವಂತೆ ಕೋರಲಾಗಿದೆ.
ಕಾಂಗ್ರೆಸ್ ಚಿಂತನ-ಮಂಥನ
ತುಮಕೂರು: ಕಾಂಗ್ರೆಸ್ ಪಕ್ಷದ ಎಲ್ಲ 35 ವಾರ್ಡ್ಗಳ ಮುಖಂಡರ ಚಿಂತನ-ಮಂಥನ ಸಭೆಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ನಗರಸಭೆ ಚುನಾವಣೆಯಲ್ಲಿ ಚುನಾಯಿತರಾದ ಹಾಗೂ ಪರಾಜಿತರಾದ ಎಲ್ಲ 35 ಕಾಂಗ್ರೆಸ್ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮದ್, ಕೆಪಿಸಿಸಿ ವೀಕ್ಷಕರಾದ ಹಾಗೂ ಓಬಿಸಿ ಘಟಕದ ಅಧ್ಯಕ್ಷರಾದ ವೇಣುಗೋಪಾಲ್, ಡಾ. ರಫೀಕ್ ಅಹಮದ್, ಆರ್. ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್. ಮಂಜುನಾಥ್, ವಕ್ತಾರ ಜಕಣಾಚಾರ್, ರಾಮಕೃಷ್ಣಯ್ಯ, ವೇಣುಗೋಪಾಲಕೃಷ್ಣ, ತು.ಬಿ. ಮಲ್ಲೇಶ್, ಚಿತ್ರ ನಿರ್ಮಾಪಕ ಕೆ. ಮಂಜು ಇದ್ದರು.
ಹೊಟ್ಟೆನೋವು ತಾಳದೆ ಆತ್ಮಹತ್ಯೆ
ತಿಪಟೂರು: ಹೊಟ್ಟೆನೋವು ತಾಳಲಾರದೆ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಸಾರ್ಥವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕಲ್ಲೇಶಪ್ಪ ಎಂಬುವವರ ಮಗನಾದ ಚಂದ್ರಶೇಖರ್ (25) ಎಂಬುವವರೆ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಇವರಿಗೆ ಸುಮಾರು 3 ತಿಂಗಳಿದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದೆಂದು ಹೇಳಲಾಗಿದೆ. ಪ್ರಕರಣವನ್ನು ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

