ತುಮಕೂರು

ಕಾಂಗ್ರೆಸ್ ಮುಖಂಡರ ಹುನ್ನಾರ: ಕೈಗೂಡದ ಅಕ್ಕಿ ಯೋಜನೆ

Published On :

ಕ.ಪ್ರ,ವಾರ್ತೆ   ಕುಣಿಗಲ್   ಮೇ 1
ಮಾರ್ಚ್ ತಿಂಗಳಿನಿಂದಲೇ ರಾಜ್ಯದ ಬಡಜನತೆಗೆ ಕೆಜಿಗೆ ಎರಡೂ ರು.ನಂತೆ 25 ಕೆಜಿ ಅಕ್ಕಿಕೊಡಲು, ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದ್ದು, ಕಾಂಗ್ರೆಸ್ ರಾಜ್ಯಾಧ್ಯಕ್ಷರು, ಮುಖಂಡರ ಹುನ್ನಾರದಿಂದ ಯೋಜನೆ ಬಡಜನತೆಗೆ ತಲುಪಲಿಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ತಿಳಿಸಿದರು.
ಮಂಗಳವಾರ ರಾತ್ರಿ, ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಕೃಷ್ಣಕುಮಾರ್ ಪರ ಮತಯಾಚಿಸಿ, ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಿಂದಲೇ ಬಡಜನತೆಗೆ, ಕೆಜಿಗೆ ಎರಡು ರು.ನಂತೆ 25 ಕೆಜಿ ಅಕ್ಕಿಯನ್ನು ನೀಡಲು ಬಿಜೆಪಿ ಸರ್ಕಾರ, ಶೃಂಗೇರಿಯಲ್ಲಿ ಯೋಜನೆಗೆ ಚಾಲನೆ ನೀಡಲು ಸಿದ್ಧತೆ ನಡೆಸಿರುವ ಸಮಯದಲ್ಲಿ ಚುನಾವಣೆ ಘೋಷಣೆಯಾಯಿತು. ಬಡಜನತೆಗೆ ಪೂರಕವಾದ ಯೋಜನೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಜಿ.ಪರಮೇಶ್ವರ್, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಚುನಾವಣಾ ಆಯೋಗಕ್ಕೆ ಪತ್ರ ಬರೆದು ಯೋಜನೆಗೆ ಅಡ್ಡಪಡಿಸಿದರು ಎಂದು ಆರೋಪಿಸಿದರು.
ಕಾಂಗ್ರೆಸ್ ಸಂಸ್ಕೃತಿ: ಬಿಜೆಪಿ ಕೆಜಿಗೆ ಎರಡು ರು.ನಂತೆ 25 ಕೆಜೆ ಅಕ್ಕಿ ಕೊಡಲು ಅಡ್ಡಿ ಮಾಡಿದವರು, ಇನ ್ನು ಕೆಜೆ 1ರು.ನಂತೆ 30 ಕೆಜಿ ಅಕ್ಕಿ ನಿಜವಾಗಿ ಕಾಂಗ್ರೆಸ್ನವರು ನೀಡುತ್ತಾರಾ, ಜನತೆಯನ್ನು ಕೇವಲ ಪೊಳ್ಳು ಭರವಸೆ ಮೂಲಕ ಕತ್ತಲ್ಲಲ್ಲಿಟ್ಟು ಅಧಿಕಾರ ಪಡೆಯುವುದೇ ಕಾಂಗ್ರೆಸ್ ಸಂಸ್ಕೃತಿ ಎಂದು ಕಿಡಿಕಾರಿದರು. ಕಾಂಗ್ರೆಸ್  ನೇತೃತ್ವದ ಯುಪಿಎ ಸರ್ಕಾರ ಕೈಗಾರಿಕೋದ್ಯಮಿಗಳ 3.80 ಲಕ್ಷ ಕೋಟಿ ಸಾಲ ಮನ್ನ ಮಾಡಿದ್ದು, ರಾಜ್ಯ ರೈತರ 79 ಸಾವಿರ ಕೋಟಿ ಸಾಲಮನ್ನ ಮಾಡಲು ಹಿಂದೇಟು ಹಾಕಿದ್ದು, ರೈತಪರ ಬದ್ಧತೆ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಮತ ಕೇಳುವ ಯಾವುದೆ ಹಕ್ಕಿಲ್ಲ ಎಂದರು.
ಹಣ ಎಲ್ಲಿ: ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಬಿಜೆಪಿ ಸರ್ಕಾರವು, ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಒಂದು ಲಕ್ಷದ ಇಪ್ಪತ್ತೇಳು ಸಾವಿರ ಕೋಟಿ ರಾಜಸ್ವ ಸಂಗ್ರಹಸಿದರೆ, ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ಕೇವಲ 36 ಸಾವಿರ ಕೋಟಿ ರಾಜಸ್ವ ಸಂಗ್ರಹಿಸಿವೆ. ರಾಜಸ್ವ ಸಂಗ್ರಹಣೆಯಲ್ಲಿ ಕೊರತೆ ಆಗಿರುವ ಹಣ ಎಲ್ಲಿಗೆ ಹೋಗಿದೆ ಎಂದು ರಾಜ್ಯದ ಜನತೆಗೆ ಕಾಂಗ್ರೆಸ್, ಜೆಡಿಎಸ್ ಉತ್ತರಿಸಬೇಕಿದೆ. ರಾಜ್ಯವನ್ನು ಸಮಗ್ರ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಬಿಜೆಪಿಯಿಂದಲೆ ರಾಜ್ಯಕ್ಕೆ  ಭವಿಷ್ಯವಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಬಿಜೆಪಿ ಬೆಂಬಲಿಸಿ: ಬಿಜೆಪಿ ಅಭ್ಯರ್ಥಿ ಡಿ. ಕೃಷ್ಣಕುಮಾರ್, ತಾಲೂಕಿನಲ್ಲಿ ಬಿಜೆಪಿ ಪಕ್ಷದ ಏಳಿಗೆ ಸಹಿಸದ ಜೆಡಿಎಸ್ ಪಕ್ಷದವರು, ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಯಾವುದೇ ಮೂಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದಲ್ಲಿ, ಅದಕ್ಕೆ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಎಚ್ಚರಿಸಿದ ಅವರು, ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
 ವೈ.ಎ. ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಚಿಕ್ಕರಾಮಯ್ಯ, ವಿಜಯಲಕ್ಷ್ಮೀ ಡಿ.ಕೃಷ್ಣಕುಮಾರ್, ಗೌರಮ್ಮ, ರೂಪಾ, ಶಶಿಕಲಾ, ಕೆ.ಎಂ.ತಿಮ್ಮಯ್ಯ,ನಾರಾಯಣಗೌಡ,ನಟರಾಜ್, ನಡೇಮಾವಿನಪುರ ರಂಗಸ್ವಾಮಿ, ಕೃಷ್ಣ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.