ತುಮಕೂರು

ಅನಗತ್ಯ ಹೇಳಿಕೆಗಳಿಗೆ ಕಿವಿಗೊಡದೆ ಕೆಜೆಪಿ ಬೆಂಬಲಿಸಿ: ಮತ್ತೀಕೆರೆ ಸಿದ್ದರಾಮಯ್ಯ

Published On :

ಕ.ಪ್ರ. ವಾರ್ತೆ  ಗುಬ್ಬಿ  ಮೇ 2
ಸಾರ್ವಜನಿಕ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು  ಜೊತೆಗೆ ಸಮಾಜದ ಧಾರ್ಮಿಕ ಕಾರ್ಯಗಳಿಗೂ ವಿಶೇಷ ಆದ್ಯತೆ ನೀಡುತ್ತಿದ್ದೇನೆ. ಈ ಭಾಗದ ಜನಸಾಮಾನ್ಯರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ವೀರಶೈವ ಮುಖಂಡ ಮತ್ತೀಕೆರೆ ಸಿದ್ದರಾಮಯ್ಯ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈಗಲೂ ಸಕ್ರೀಯ ರಾಜಕಾರಣದಲ್ಲಿ ತೊಡಗಿದ್ದು ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದದ್ದ ಕುಡಿಯುವ ನೀರು, ಕೃಷಿ ನೀರಾವರಿ, ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬಗೆಹರಿಸಿರುವುದಾಗಿ ತಿಳಿಸಿದರು. ವೀರಶೈವರಾದ ಕೆಲವರು ಇತ್ತೀಚೆಗೆ ತಮ್ಮ ಸ್ವಹಿತಾಸಕ್ತಿಯಿಂದ ವೀರಶೈವ ಸಮಾಜ ಜೆಡಿಎಸ್‌ಗೆ ಬೆಂಬಲ ಸೂಚಿಸುವುದಾಗಿ ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆಯಾಗಿದೆಯೇ ಹೊರೆತು ವೀರಶೈವ ಸಮಾಜದ ಹೇಳಿಕೆಯಲ್ಲ. ವೀರಶೈವ ಸಮಾಜದ ಜಿಲ್ಲಾ ಮುಖಂಡರು ಸಂಸದರಾದ ಜಿ.ಎಸ್.ಬಸವರಾಜು ಅವರು ಈಗಾಗಲೇ ವೀರಶೈವ ಸಮಾಜದವರು ಕೆಜೆಪಿಗೆ ಬೆಂಬಲ ಸೂಚಿಸಲು ಕರೆ ನೀಡಿದ್ದು ವೀರಶೈವ ಬಂಧುಗಳು ಅನಗತ್ಯ ಹೇಳಿಕೆಗಳಿಗೆ ಕಿವಿಗೊಡದೆ ಕೆಜೆಪಿಗೆ ತಮ್ಮ ಬೆಂಬಲ ಸೂಚಿಸುವಂತೆ ತಿಳಿಸಿದರು. ಕಳೆದೆರಡು ಅವಧಿಯಲ್ಲಿ ಶಾಸಕರು ಗುಬ್ಬಿ ತಾಲೂಕು ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಆದ್ದರಿಂದ ಈ ಭಾರಿ ಬದಲಾವಣೆ ಬಯಸಿರುವ ಕ್ಷೇತ್ರದ ಮತದಾರರು ಕೆಜೆಪಿಗೆ ಒಲವು ತೋರಿಸಲಿದ್ದಾರೆಂದರು. ಸುದ್ದಿ ಗೋಷ್ಠಿಯಲ್ಲಿ ವಕೀಲರಾದ ಕ್ಷೀರ ಕುಮಾರಸ್ವಾಮಿ, ಆನಂದ ಕುಮಾರ್, ರಾಜಶೇಖರ್, ಎಂ.ಎಸ್.ಬಸವರಾಜು, ಮಂಜುನಾಥ್ ಉಪಸ್ಧಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.