ಕಾಂಗ್ರೆಸ್ ಅಭ್ಯರ್ಥಿ ಪರ ಮತಪ್ರಚಾರ
ಪಾವಗಡ: ಕಾಂಗ್ರೆಸ್ ಅಭ್ಯರ್ಥಿಎಚ್.ವಿ.ವೆಂಕಟೇಶ್ ಅವರನ್ನು ಬೆಂಬಲಿಸಿ ಎಂದು ತಾಲೂಕು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಟಿ.ಖಾನ್ ಮನವಿ ಮಾಡಿದ್ದಾರೆ. ಈ ಸಂಬಂಧ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ತಾಲೂಕಿನ ಅಭಿವೃದ್ಧಿ ಚಿಂತಕ ಹಾಗೂ ಉತ್ಸಾಹಿ ಯುವಕರಾಗಿದ್ದು, ಜನಪರ ಸೇವೆಯಲ್ಲಿ ಅವರ ತಂದೆ, ಶಾಸಕ ವೆಂಕಟರಮಣಪ್ಪ ಮಾರ್ಗ ಅನುಸರಿಸಿದ್ದಾರೆ ಎಂದರು. ಶಾಸಕ ವೆಂಕಟರಮಣಪ್ಪ ಆಡಳಿತ ಅವಧಿಯಲ್ಲಿ ಕುಡಿಯುವ ನೀರು ವಸತಿ ಮೂಲಭೂತ ಸಮಸ್ಯೆ ನಿವಾರಣೆ ಸೇರಿದಂತೆ ತಾಲೂಕಿನಲ್ಲಿ 600 ಕೋಟಿ ಅಭಿವೃದ್ಧಿ ಕೈಗೊಂಡಿರುವುದಲ್ಲದೆ ಎಲ್ಲಾ ವರ್ಗದವರನ್ನು ಸಮಾನತೆ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಅದ್ಯತೆ ಕಲ್ಪಿಸಿರುವುದಾಗಿ ಅವರು ತಿಳಿಸಿದರು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಕೆಲವರು ಮಾಡುವ ಇಲ್ಲ ಸಲ್ಲದ ಅಪ ಪ್ರಚಾರಗಳಿಗೆ ಕಿವಿಗೊಡದೆ ಅಲ್ಪಸಂಖ್ಯಾತ ಸೇರಿದಂತೆ ತಾಲೂಕಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವ ಮೂಲಕ ಅಭ್ಯರ್ಥಿ ವೆಂಕಟೇಶ್ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

