ತುಮಕೂರು

ರಾಜ್ಯದಲ್ಲಿ ಉತ್ತಮ ಮಳೆ, ಸುಭದ್ರ ಸರ್ಕಾರಕ್ಕಾಗಿ ಚರ್ಚ್‌ನಲ್ಲಿ ಪ್ರಾರ್ಥನೆ

Published On :

ಕ.ಪ್ರ.ವಾರ್ತೆ೤ ಅರಸೀಕೆರೆ೤ ಮೇ 5
ಪಟ್ಟಣದ ಬೆತೇಲ್ ಚರ್ಚ್‌ನಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಉಪವಾಸ ಹಾಗೂ ಪ್ರಾರ್ಥನಾ ಕೂಟದಲ್ಲಿ ತಾಲೂಕಿನ ಎಲ್ಲಾ ಚರ್ಚ್‌ಗಳ ಸದಸ್ಯರು ಭಾಗವಹಿಸಿ ರಾಜ್ಯದಲ್ಲಿ ಸ್ಥಿರ ಹಾಗೂ ಸುಭದ್ರ ಸರ್ಕಾರ ರಚನೆಯಾಗಿ ಚೆನ್ನಾಗಿ ಮಳೆಯಾಗಿ, ಜನತೆ ಸುಖದಿಂದ ಜೀವಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
  ಸಿಎಸ್‌ಐ ನಿವೃತ್ತ ಪಾದ್ರಿ ರೆವೆ ಇ.ಡಬ್ಲ್ಯೂ ಸಾಧು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ನಾಗರಿಕರಿಗೆ ಇರುವ ಶ್ರೇಷ್ಠ ಹಕ್ಕು. ಇದನ್ನು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ಮತದಾನ ಮಾಡುವ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಸಲಹೆ ನೀಡಿದರು.
ತಾ. ಪ್ರೊಟೆಸ್ಟೆಂಟ್ ಅಸೋಸಿಯೇಷನ್ ಅಧ್ಯಕ್ಷ ಪಾಸ್ಟರ್ ಸುಂದರ್‌ರಾಜ್, ಬೇತೆಲ್ ಪಾದ್ರಿ ಪಾಸ್ಟರ್ ಗಾಡ್ವಿ ನಿಕೋಲಸ್ ಮಾತನಾಡಿ, ಸತ್ಯವೇದ ಹೇಳುವಂತೆ ದೇಶದ ಒಳಿತಿಗಾಗಿ ಪ್ರಾರ್ಥಿಸಬೇಕು ಎಂದರು.
ಪಾದ್ರಿ ಜೇಕಬ್‌ಬಾಬು ಮಾತನಾಡಿದರು. ಪಾದ್ರಿಗಳಾದ ವಿನಯ್, ಬಾಬು, ರವಿ, ಅಧ್ಯಕ್ಷ ಚಾರ್ಲ್ಸ್ ರವಿಕುಮಾರ್ ವೇದಿಕೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.