ತುಮಕೂರು

ಕರ್ತವ್ಯ ಲೋಪಕ್ಕೆ ಕಡಿವಾಣ ಇಲ್ಲ

Published On :

ಮೈಸೂರು: ಹಣ, ಹೆಂಡ ಮತ್ತಿತರ ಆಮಿಷ ಒಡ್ಡಿ ಮತದಾರರ ಸೆಳೆಯುವುದು ಚುನಾವಣಾ ಭ್ರಷ್ಟಾಚಾರದ ಒಂದು ಮುಖವಾದರೆ, ಎದುರಾಳಿ ಅಭ್ಯರ್ಥಿಗಳಿಗೆ ಮತ ಚಲಾವಣೆಯಾಗದಂತೆ ಮತಪಟ್ಟಿಯ ಕುತಂತ್ರ ನಡೆಸುವುದು ಸಹ ಮತ್ತೊಂದು ರೀತಿಯ ಭ್ರಷ್ಟಾಚಾರ ಎನ್ನಬಹುದು.
 ಈ ಎರಡನೇ ಮಾರ್ಗದ ಅಕ್ರಮಕ್ಕೂ ಕಡಿವಾಣ ಹಾಕದ ಹೊರತು ಚುನಾವಣಾ ವ್ಯವಸ್ಥೆ ಸುಧಾರಣೆಯಾಗದು. ಕಳೆದ ನಗರ ಪಾಲಿಕೆ ಚುನಾವಣೆಯಲ್ಲಿ ಅನೇಕ ವಾರ್ಡ್ಗಳ ವ್ಯಾಪ್ತಿಯಲ್ಲಿ ಸಾವಿರಾರು ಸಂಖ್ಯೆಯ ಮತದಾರರ ಹೆಸರನ್ನು ಮತಪಟ್ಟಿಯಿಂದ ಕೈ ಬಿಡಲಾಗಿತ್ತು. ಈ ಹಿಂದಿನ ಚುನಾವಣೆಯಲ್ಲಿ ಮತ ಚಲಾಯಿಸಿದ್ದರೂ, ಎಲ್ಲಾ ದಾಖಲಾತಿಗಳು ಇದ್ದರೂ ಮತಕೇಂದ್ರಕ್ಕೆ ಬಂದು ನೋಡಿದಾಗ ಆ ವ್ಯಕ್ತಿಯ ಅಥವಾ ಆ ಕುಟುಂಬದ ಇಲ್ಲವೇ ಆ ಕಾಲೋನಿಯ ಮತದಾರರ ಹೆಸರು ನಾಪತ್ತೆಯಾಗಿರುತ್ತದೆ. ಇದಕ್ಕೆ ಕಾರಣವೇನು ಮತ್ತು ಕಾರಣರು ಯಾರು ಎಂಬುದನ್ನು ಚರ್ಚಿಸುವ ಅಗತ್ಯವಿದೆ. ಯಾವುದೇ ಚುನಾವಣೆಯಾಗಲಿ, ಪಾಲಿಕೆಯ ಚುನಾವಣೆಯ ಶಾಖೆಯು ನಗರ ವ್ಯಾಪ್ತಿಗೆ ಸಂಬಂಧಿಸಿದ ಮತಪಟ್ಟಿ ಸಿದ್ಧಪಡಿಸುವ ಜವಾಬ್ದಾರಿ ಹೊಂದಿರುತ್ತದೆ. ಮತಪಟ್ಟಿ ಅಂತಿಮಗೊಳಿಸುವ ಮುನ್ನ ಆಯಾ ಮತ ಕೇಂದ್ರಗಳು, ವಲಯ ಕಚೇರಿಗಳು ಹಾಗೂ ಪ್ರಧಾನ ಕಚೇರಿಯಲ್ಲಿ ಕರಡು ಪ್ರತಿ ಪ್ರದರ್ಶನಕ್ಕಿಟ್ಟು, ಲೋಪದೋಷ ಸರಿಪಡಿಸಲು ಸಾರ್ವಜನಿಕರಿಗೆ ಕರೆ ನೀಡಲಾಗುತ್ತದೆ.
ಈ ಸಂಬಂಧ ವಿದ್ಯಾವಂತ ನಾಗರಿಕರು ಆಯಾ ಕೇಂದ್ರಗಳಿಗೆ ತೆರಳಿ ತಪಾಸಣೆ ನಡೆಸಿ ಮತಪಟ್ಟಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ನಿಗದಿತ ಅರ್ಜಿ ಭರ್ತಿ ಮಾಡಿ ಸರಿಪಡಿಸುವಂತೆ ಕೋರುವುದು ವಾಡಿಕೆ. ಅಲ್ಲದೆ, 18 ವರ್ಷ ತುಂಬಿದವರು ಹೊಸದಾಗಿ ಹೆಸರು ಸೇರ್ಪಡೆಗೊಳಿಸುವಂತೆ ನೋಂದಾಯಿಸಿಕೊಳ್ಳುತ್ತಾರೆ.  ಆದರೆ, ಚುನಾವಣೆಯ ದಿನ ಮತ ಕೇಂದ್ರಕ್ಕೆ ಹೋದಾಗ ಮತಪಟ್ಟಿಯಲ್ಲಿ ಹೆಸರು ಕಾಣದಾದಾಗ ಮಾತ್ರವೇ ತಮಗೆ ಹಕ್ಕಿಲ್ಲ, ನಾವು ಮತದಾನದಿಂದ ವಂಚಿತರಾಗಿದ್ದೇವೆ ಎಂಬುದು ತಿಳಿದು ಬರುತ್ತದೆ. ತಮ್ಮ ಬಳಿ ಎಲ್ಲಾ ದಾಖಲೆಗಳು ಇದ್ದರೂ ಮತಪಟ್ಟಿಯಲ್ಲಿ ಹೆಸರು ತೆಗೆದು ಹಾಕಿರುವುದು ಅಥವಾ ಮತಪಟ್ಟಿಯಲ್ಲಿ ಹೆಸರಿದ್ದರೂ ಭಾವಚಿತ್ರ ಅಥವಾ ವಿಳಾಸ ಬದಲಾಗಿರುವುದು ತಪ್ಪುಗಳಿಂದ ಅವಕಾಶ ವಂಚಿತರಾದಾಗ  ಅಸಹಾಯಕರಾಗಿ ಹಿಂತಿರುಗಬೇಕಾಗುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.