ಪ್ರೆಸಿಡೆನ್ಸಿ ಪ.ಪೂ. ಕಾಲೇಜಿನ ಉತ್ತಮ ಫಲಿತಾಂಶ
ಕ.ಪ್ರ. ವಾರ್ತೆ ಶಿರಾ ಮೇ 7
ಪಟ್ಟಣದ ಪ್ರೆಸಿಡೆನ್ಸಿ ಪ.ಪೂ. ಕಾಲೇಜು ಪಿಯುಸಿಯಲ್ಲಿ ತಾಲೂಕಿನಲ್ಲೇ ಉತ್ತಮ ಫಲಿತಾಂಶ ಪಡೆದಿದೆ.
ಈ ಕಾಲೇಜಿನಲ್ಲಿ ಒಟ್ಟು 160 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ 24 ಮಂದಿ ಡಿಸ್ಟಿಂಕ್ಷನ್, 85 ಮಂದಿ ಪ್ರಥಮ ದರ್ಜೆ, 36 ದ್ವಿತೀಯ ದರ್ಜೆ, 9 ಉತ್ತೀರ್ಣ ಹಾಗೂ 6 ಮಂದಿ ಮಾತ್ರ ಅನುತ್ತೀರ್ಣರಾಗಿದ್ದಾರೆ. ಕಾಲೇಜಿಗೆ ಬಂದ ಉತ್ತಮ ಪಲಿತಾಂಶಕ್ಕೆ ಹರ್ಷ ವ್ಯಕ್ತಪಡಿಸಿರುವ ಕಾಲೇಜು ಸಂಸ್ಥಾಪಕ ಎಂ.ಚಿದಾನಂದ್ ಅವರು ವಿದ್ಯಾರ್ಥಿಗಳಿಗೆ ಮತ್ತು ಕಾಲೇಜು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸರ್ಕಾರಿ ಪ.ಪೂ. ಕಾಲೇಜು: ಪಟ್ಟಣದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 159 ವಿದ್ಯಾರ್ಥಿಗಳು ಪರಿಕ್ಷೆಗೆ ಕುಳಿತಿದ್ದು 128 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ 36 ಪ್ರಥಮ ದರ್ಜೆ, 39 ದ್ವಿತೀಯ ದರ್ಜೆ, 53 ಉತ್ತೀರ್ಣ ಒಟ್ಟು ಶೇ. 80.50 ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗದಲ್ಲಿ 294 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ 271 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 4 ಡಿಸ್ಟಿಂಕ್ಷನ್ 137 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ 68 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ 62 ತೃತೀಯ ದರ್ಜೆಯಲ್ಲಿ ಪಾಸಾಗಿ ಒಟ್ಟು ಶೇ. 92.17 ಪಲಿತಾಂಶ ಬಂದಿದೆ.
ವಿಜ್ಞಾನ ವಿಭಾಗದಲ್ಲಿ 98 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು 59 ವಿದ್ಯಾರ್ಥಿಗಳು ಪಾಸಾಗಿ ಇದರಲ್ಲಿ 20 ಪ್ರಥಮ, 26 ದ್ವೀತಿಯ, 13 ತೃತೀಯ ಒಟ್ಟು ಶೇ. 60.20 ಫಲಿತಾಂಶ ಬಂದಿದೆ.
ಶ್ರೀರಂಗನಾಥ ಕಾಲೇಜು: ಪಟ್ಟಣದ ಶ್ರೀ ಕೆ.ಮಲ್ಲಣ್ಣ ಸ್ಮಾರಕ ರಂಗನಾಥ ಪ.ಪೂ. ಕಾಲೇಜಿನ ಕಲಾ ವಿಭಾಗದಲ್ಲಿ 66 ವಿದ್ಯಾರ್ಥಿಗಳು ಪರೀಕ್ಷೆಗ ಕುಳಿತಿದ್ದು 55 ವಿದ್ಯಾರ್ಥಿಗಳು ಪಾಸಾಗಿ ಇದರಲ್ಲಿ 2 ಡಿಸ್ಟಿಂಕ್ಷನ್, 25 ಪ್ರಥಮ, 11 ದ್ವಿತೀಯ, 13 ತೃತೀಯ ದರ್ಜೆ ಪಡೆದು ಒಟ್ಟು ಶೇ. 75.75 ಫಲಿತಾಂಶ ದೊರಕಿದೆ.
ವಾಣಿಜ್ಯ ವಿಭಾಗದಲ್ಲಿ 45 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು 40 ವಿದ್ಯಾರ್ಥಿಗಳು ಪಾಸಾಗಿ 1 ಡಿಸ್ಟಿಂಕ್ಷನ್, 25 ಪ್ರಥಮ, 10 ದ್ವಿತೀಯ, 4 ತೃತೀಯ ಸ್ಥಾನ ಪಡೆದು ಶೇ. 88.84 ಫಲಿತಾಂಶ ಪಡೆದಿದ್ದಾರೆ.
ತಾವರೆಕೆರೆ ಅಂಬಾ ಭವಾನಿ ಕಾಲೇಜು: ತಾಲೂಕಿನ ತಾವರೆಕೆರೆಯ ಶ್ರೀ ಅಂಬಾ ಭವಾನಿ ಪ.ಪೂ. ಕಾಲೇಜಿನಲ್ಲಿ 138 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು 132 ವಿದ್ಯಾರ್ಥಿಗಳು ಪಾಸಾಗಿ 12 ಡಿಸ್ಟಿಂಕ್ಷನ್, 73 ಪ್ರಥಮ ದರ್ಜೆ, 32 ದ್ವಿತೀಯ, 15 ತೃತೀಯ ಶ್ರೇಣಿ ಪಡೆದು ಶೇ. 95.65 ರಷ್ಟು ಫಲಿತಾಂಶ ಬಂದಿದೆ.
ಬಾಲಕಿಯರ ಪ.ಪೂ. ಕಾಲೇಜು: ಶಿರಾ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 171 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ 90 ಪ್ರಥಮ ದರ್ಜೆ 39 ದ್ವಿತೀಯ ದರ್ಜೆ, 39 ತೃತೀಯ ದರ್ಜೆ ಹಾಗೂ 3 ಡಿಸ್ಟಿಂಕ್ಷನ್ ಪಡೆದು ಉತ್ತಮ ಫಲಿತಾಂಶ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

