ಕೆಂಕೆರೆ ಸರ್ಕಾರಿ ಪ್ರೌಢಶಾಲೆಗೆ ಶೇ. 80 ಫಲಿತಾಂಶ
ಹುಳಿಯಾರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹುಳಿಯಾರು-ಕೆಂಕೆರೆ ಸರಕಾರಿ ಪ್ರೌಢಶಾಲೆಯಲ್ಲಿ ಒಟ್ಟು 143 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,113 ಮಂದಿ ಉತ್ತೀರ್ಣರಾಗಿರುವ ಮೂಲಕ ಶಾಲೆಗೆ ಶೇ. 80 ಫಲಿತಾಂಶ ಬಂದಿದೆ.
3 ಮಂದಿ ಅತ್ಯುನ್ನತ ಶ್ರೇಣಿ, 41 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ, 29
ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ 40 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ. ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಕೆಂಕೆರೆ ಸೋನಿಯಾ ಕೆ.ಎಂ. 563 ಅಂಕ ಪಡೆದು 90.08 ಗಳಿಸಿದರೆ,
ಮನೋಜ್ ಹೆಚ್.ಜಿ.545 ಅಂಕಗಳಿಸಿ 87.2 ಗಳಿಸಿದ್ದು, ಯಶಸ್ವಿನಿ 540 ಅಂಕಗಳಿಸಿ 86.4 ಪಡೆದಿದ್ದಾರೆ. ಹುಳಿಯಾರಿನ ವಾಸವಿ ವಿದ್ಯಾಸಂಸ್ಥೆಯ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶೇ.91 ರಷ್ತು ಫಲಿತಾಂಶ ಬಂದಿದ್ದು, ಒಟ್ಟು 87 ಮಂದಿಯಲ್ಲಿ 76 ಮಂದಿ ಉತ್ತೀರ್ಣರಾಗಿದ್ದು, 5 ಮಂದಿ ಅತ್ಯುತ್ತಮ ಶ್ರೇಣಿ, 43 ಮಂದಿ ಪ್ರಥಮ ಶ್ರೇಣಿ, 16 ಮಂದಿ ದ್ವಿತೀಯ ಸ್ಥಾನ,12 ಮಂದಿ ತೃತೀಯ ಸ್ಥಾನ ಪಡೆದಿದ್ದಾರೆ.ಎಸ್.ಸಿ.ಸೀಮಾ(584 93.44 ), ಬಿ.ಎಂ.ತನುಶ್ರೀ (580, 92.8), ಪಿ.ಸಚಿನ್(564, 90.24ಣ), ಮಂಜು (553, 88.48), ಆರ್.ಸಚಿನ್ (543, 86.88) ಅಂಕಗಳನ್ನು ಗಳಿಸಿದ್ದು ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದು, ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಇವರ ಸಾಧನೆಯನ್ನು ಮೆಚ್ಚಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ. ಹುಳಿಯಾರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಒಟ್ಟು 60 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 42 ಮಂದಿ ಉತ್ತೀರ್ಣರಾಗಿದ್ದು, 4 ಮಂದಿ ಪ್ರಥಮ, 15 ಮಂದಿ ದ್ವಿತೀಯ, 23 ಮಂದಿ ತೃತೀಯ ಸ್ಥಾನ ಪಡೆದಿದ್ದು ಶೇ.70ರಷ್ಟು ಫಲಿತಾಂಶ ಬಂದಿರುತ್ತದೆ. ಕನಕದಾಸ ಶಾಲೆಯಲ್ಲಿ ಒಟ್ಟು 57 ಮಂದಿ ಪರೀಕ್ಷೆ ಬರೆದಿದ್ದು 42 ಮಂದಿ ಉತ್ತೀರ್ಣರಾಗಿದ್ದು ಇಬ್ಬರು ಅತ್ಯುನ್ನತ್ತ ಶ್ರೇಣಿಯಲ್ಲಿ ತೇರ್ಗಡೆಯಾದರೆ, 7 ಮಂದಿ ಪ್ರಥಮ ಶ್ರೇಣಿ, 7ಮಂದಿ ದ್ವಿತೀಯ ಸ್ಥಾನ, 26 ಮಂದಿ ತೃತಿಯ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಮಸ್ತಾನ್ (566), ವಿವೇಕ್ (561) ಅಂಕ ಪಡೆದ ವಿದ್ಯಾರ್ಥಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

