ತುಮಕೂರು

ಮತದಾರರೇ ನಂಗೆ ಬಾಸ್: ಕೃಷ್ಣಪ್ಪ

Published On :

ತುರುವೇಕೆರೆ, ಮೇ 9 ಶಾಸಕರಾಗಿ ಆಯ್ಕೆಯಾದ ಎಂ.ಟಿ.ಕೃಷ್ಣಪ್ಪನವರನ್ನು ವರುಣ ದೇವ ಮಳೆ ಸುರಿಸುವ ಮೂಲಕ ಪಟ್ಟಣಕ್ಕೆ ಸ್ವಾಗತಿಸಿದ.  
ಎಂ.ಟಿ.ಕೃಷ್ಣಪ್ಪ ಆಯ್ಕೆಯಾದ ತರುವಾಯ ಪಟ್ಟಣಕ್ಕೆ ಬಂದು ಮತದಾರರಿಗೆ ಕೃತಜ್ಞತೆ ಅರ್ಪಿಸಿದ ಕೆಲ ಕ್ಷಣಗಳಲ್ಲೇ ಭಾರಿ ಗುಡುಗು, ಮಿಂಚು, ಮಳೆಯ ಆರ್ಭಟವಾಯಿತು. ಪಟ್ಟಣಕ್ಕೆ ಬಂದು ಮತದಾರರಿಗೆ
ಕೃತಜ್ಞತೆ ಅರ್ಪಿಸುತ್ತಿದ್ದಂತೆ ಉತ್ಸಾಹಿ ಕಾರ್ಯಕರ್ತರ ಜಯಕಾರದ ಘೋಷಣೆಯೊಂದಿಗೆ ಮಳೆಯ ಆರ್ಭಟವೂ ಮುಗಿಲು ಮುಟ್ಟಿತು.
 ಪಟ್ಟಣದ ಪ್ರವಾಸಿ ಮಂದಿರದಿಂದ ತೆರದ ವಾಹನದಲ್ಲಿ ಬಂದ ಎಂ.ಟಿ.ಕೃಷ್ಣಪ್ಪ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾನು ನಂಬಿದ ಹಲವಾರು ಮುಖಂಡರು ಕೈ ಕೊಟ್ಟರು. ಆದರೂ ಸಹ ನಾನು ಪಕ್ಷದ ಕಾರ್ಯಕರ್ತರು ಹಾಗೂ ಮತದಾರರನ್ನು ನಂಬಿದ್ದೆ. ಅವರು ನನ್ನ ಕೈಬಿಡಲಿಲ್ಲ. ತಾವು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆ ಮಾಡಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃಧ್ಧಿ ಕೆಲಸ ಮಾಡಿದ್ದರಿಂದ ತಮಗೆ ಗೆಲವು ಸಾಧ್ಯವಾಯಿತು. ತಮಗೆ ಮತದಾರರೇ ಪ್ರಭುಗಳು, ಅವರೆ ನನಗೆ ಬಾಸ್ ಎಂದು ಎಂ.ಟಿ.ಕೃಷ್ಣಪ್ಪ ಹೇಳಿದರು.  ಕೆಲ ಪಕ್ಷದವರು ಹಂಚಿದ ದುಡ್ಡಿನ ಮುಂದೆ ತಮ್ಮ ಪಕ್ಷದ ಕಾರ್ಯಕರ್ತರು ಭ್ರಮನಿರಸವಾಗಲಿಲ್ಲ. ಹಣಕ್ಕಿಂತ ಕಾರ್ಯಕ್ರಮ, ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿಯವರ ನಾಯಕತ್ವದ ಜೆಡಿಎಸ್ ಮುಖ್ಯ ಎಂದು ಹಗಲಿರುಳೂ ಕಷ್ಟಪಟ್ಟು ಪಕ್ಷಕ್ಕಾಗಿ ದುಡಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದಲೇ ತಾವು ಶಾಸಕರಾಗಿ ಆಯ್ಕೆಯಾಗಲು ಸಾಧ್ಯವಾಯಿತು ಎಂದು ಕೃಷ್ಣಪ್ಪ ನುಡಿದರು.
ಜಿಲ್ಲಾ ಕೇಂದ್ರ: ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸುವ ತಮ್ಮ ಕನಸು ನನಸು ಮಾಡುವುದಾಗಿ ಹೇಳಿದ ಶಾಸಕರು ಕ್ಷೇತ್ರದ ಅಭಿವೃಧ್ಧಿ ಮಾಡುವ ಸಲುವಾಗಿ ತಾವು ಎಂದೂ ಕಂಕಣಬದ್ಧರಾಗಿರುವುದಾಗಿ ಹೇಳಿದರು. ಕ್ಷೇತ್ರದಲ್ಲಿ ಅಭಿವೃಧ್ಧಿ ಕಾರ್ಯಗಳು ಆಗಬೇಕಿದೆ. ಎಲ್ಲವನ್ನೂ ಸಂಪೂರ್ಣವಾಗಿ ಮಾಡುವುದಾಗಿ ಭರವಸೆ ನೀಡಿದರು. ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗುವುದು ಈ ಕ್ಷೇತ್ರದಲ್ಲಿ ಸಾಧ್ಯವಿಲ್ಲ ಎಂಬುದು ಸುಳ್ಳು ಎಂಬುದನ್ನು ಕ್ಷೇತ್ರದ ಜನತೆ ಸಾಬೀತು ಮಾಡಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.