ತುಮಕೂರು

ಸಂಸ್ಕಾರಯುತ ಶಿಕ್ಷಣವೇ ವಿದ್ಯಾರ್ಥಿ ಜೀವನಕ್ಕೆ ಭದ್ರ ಬುನಾದಿ

Published On :

ತುರುವೇಕೆರೆ: ಚಿಕ್ಕ ವಯಸ್ಸಿನಲ್ಲೇ ಸಂಸ್ಕಾರಯುತ ಶಿಕ್ಷಣ ನೀಡಿದಲ್ಲಿ ವಿದ್ಯಾರ್ಥಿಗಳ ಭವಿಷ್ಯತ್ತಿನ ಜೀವನಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂದು ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಹೇಳಿದರು.
ಸಮೀಪದ ಚಿಮ್ಮನಹಳ್ಳಿಯಲ್ಲಿ ಮುನೇಶ್ವರ ಸ್ವಾಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೂರನೇ ವರ್ಷದ 15 ದಿನಗಳ ಸಂಸ್ಕಾರ ಜಾಗೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮಕ್ಕಳಿಗೆ ಪುಸ್ತಕದಲ್ಲಿರುವ ಬೋಧನಾ ಕ್ರಮಗಳನ್ನೇ ಭಟ್ಟಿ ಇಳಿಸುವ ಸರ್ಕಾರಿ ಕಾಯಕ ಸಾಗುತ್ತಿದೆ. ಆದರೆ ಮಕ್ಕಳಲ್ಲಿ ಅಗತ್ಯವಾಗಿ ಬೇಕಿರುವ ಸಂಸ್ಕಾರ ಆ ಪಠ್ಯ ಪುಸ್ತಕಗಳಲ್ಲಿ ಇಲ್ಲ. ಪೋಷಕರಿಗೆ ತಮ್ಮ ಮಕ್ಕಳು ಪುಸ್ತಕದಲ್ಲಿರುವ ಅಂಶಗಳಿಂದ ಹೆಚ್ಚು ಅಂಕಗಳಿಸಬೇಕು ಎಂಬ ಮನೋಭಾವ ಮನೆ ಮಾಡಿದೆ. ಆದರೆ ಮಕ್ಕಳಿಗೆ ಸಂಸ್ಕಾರಯುತವಾದ ನೀತಿ ಪಾಠಗಳು, ದೇಶಭಕ್ತಿ, ನಿಸ್ವಾರ್ಥ ಸಾಧನೆ ಮೊದಲಾದ ಉನ್ನತ ಆಲೋಚನಾ ಮನೋಭಾವವನ್ನು ಮಕ್ಕಳಲ್ಲಿ ಕ್ರೋಢೀಕರಿಸುವ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀನಿವಾಸ್ ಮೂರ್ತಿ ಮಾತನಾಡಿ ಆಧುನಿಕತೆಯ ಸೋಗಿನಲ್ಲಿ ಸಾಂಪ್ರದಾಯ ಪದ್ದತಿಗಳು ದಿಕ್ಕು ತಪ್ಪುತ್ತಿವೆ. ಮಕ್ಕಳಲ್ಲಿ ಸಾಮಾಜಿಕ ಮೌಲ್ಯ ಕಾಣೆಯಾಗುತ್ತಿದೆ. ಗುರುಹಿರಿಯರಲ್ಲಿ ಗೌರವ ಸಮರ್ಪಣಾ ಮನೋಭಾವ ಇಲ್ಲವಾಗುತ್ತಿದೆ. ಮಕ್ಕಳಲ್ಲಿ ಆಚಾರ ವಿಚಾರಗಳು ದೂರವಾಗುತ್ತಿವೆ. ಇವೆಲ್ಲಗಳನ್ನೂ ಪುನರ್ ಮಿಲನ ಮಾಡಿಸುವ ಸಲುವಾಗಿ ಚಾರಿಟಬಲ್ ಟ್ರಸ್ ವತಿಯಿಂದ ಹಮ್ಮಿಕೊಳ್ಳುತ್ತಿರುವ ಸಂಸ್ಕಾರ ಜಾಗೃತಿ ಶಿಬಿರ ಅನುಕೂಲವಾಗಿದೆ ಎಂದರು.
ಚಲನಚಿತ್ರ ನಿರ್ದೇಶಕ ನಾಗರಾಜ್, ಸಮಾಜ ಸೇವಕ ಇಸ್ಮಾಯಿಲ್, ಟ್ರಸ್ಟ್‌ನ ಮುಖಂಡರಾದ ಶಿವಪ್ಪ ನವರು, ಪುಟ್ಟರಾಜು, ಕಾರ್ಯದರ್ಶಿ ಧನಲಕ್ಷ್ಮಿ, ವ್ಯವಸ್ಥಾಪಕ ಸಿ.ಎ. ರಂಗಯ್ಯ ಮೊದಲಾದವರು ಸಮಾರಂಭದಲ್ಲಿ ಇದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಮಲ್ಲಣ್ಣ, ಡಾ.ಪುಟ್ಟಹೊನ್ನಯ್ಯ, ವೇ.ಬ್ರ.ಶ್ರೀಗಳಾದ ಕುಮಾರಸ್ವಾಮಿ, ದಯಾನಂದ್, ಲೋಹಿತ್, ಶೇಷಾದ್ರಿ, ಅಲೋಕ್ ಮೊದಲಾದವರು ತರಬೇತಿ ನೀಡಿದರು. ಸುಮಾರು 250 ಕ್ಕೂ ಶಿಬಿರಾರ್ಥಿಗಳು ರಾಜ್ಯದ ವಿವಿಧ ಸ್ಥಳಗಳಿಂದ ಆಗಮಿಸಿದ್ದರು.
ಬಡ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ: ಶ್ರೀ ಮುನೇಶ್ವರ ಟ್ರಸ್ಟ್‌ನ ವತಿಯಿಂದ ಈ ವರ್ಷದಿಂದ ಸುಮಾರು 30 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಟ್ರಸ್ಟ್ ನ ಮುಖ್ಯಸ್ಥ ಶಿವಪ್ಪ ಹೇಳಿದ್ದಾರೆ. ರಾಜ್ಯದ ಯಾವುದೇ ಸ್ಥಳದವರಾಗಿದ್ದರೂ 4 ನೇ ತರಗತಿಯಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುವುದಲ್ಲದೇ ಅವರಿಗೆ ಊಟ, ವಸತಿಯನ್ನೂ ಉಚಿತವಾಗಿ ನೀಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗೆ ದಾಖಲಾತಿ ಮಾಡಿಕೊಂಡು ಶಾಲೆಯಿಂದ ಮಠಕ್ಕೆ ಓಡಾಡಲು ಸಹ ಅನುಕೂಲ ಕಲ್ಪಿಸಲಾಗುವದು ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ಮುಖ್ಯಸ್ಥರಾದ ಪುಟ್ಟರಾಜು ದೂರವಾಣಿ ಸಂಖ್ಯೆ 7259809506 ಗೆ ಸಂಪರ್ಕಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.