ಉಪ್ಪಾರಹಳ್ಳಿ-ಶೆಟ್ಟಿಹಳ್ಳಿ ರೇಲ್ವೆ ಮೇಲ್ಸೇತುವೆ ಪೂರ್ಣಕ್ಕೆ ಮನವಿ
ಕ.ಪ್ರ. ವಾರ್ತೆ , ತುಮಕೂರು , ಮೇ 14
ಉಪ್ಪಾರಹಳ್ಳಿ-ಶೆಟ್ಟಿಹಳ್ಳಿ ರೇಲ್ವೆ ಮೇಲ್ಸೇತುವೆ ಹೋರಾಟ ಸಮಿತಿಯ ಪದಾಧಿಕಾರಿಗಳು ನೂತನವಾಗಿ ಆಯ್ಕೆಯಾಗಿರುವ ಶಾಸಕ ಡಾ. ರಫಿಕ್ ಅಹಮದ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಅಪೂರ್ಣಗೊಂಡಿರುವ ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಮನವಿ ಮಾಡಲಾಯಿತು.
ರೇಲ್ವೆ ಮೇಲ್ಸೇತುವೆ ಡಾಂಬರು ಕಳಪೆ ಗುಣಮಟ್ಟದಾಗಿದ್ದು, ರಸ್ತೆಯಲ್ಲಿ ಕಬ್ಬಿಣದ ಸಲಾಕೆಗಳು ಮೇಲ್ಭಾಗಕ್ಕೆ ಉಬ್ಬಿರುವುದು ಹೆಚ್ಚು ಅಪಾಯಕಾರಿಯಾಗಿದೆ. ಪಕ್ಕದಲ್ಲಿ ನಿರ್ಮಿಸಿರುವ ತಡೆ ಗೋಡೆಗಳು ಪೂರ್ಣಗೊಂಡಿರುವುದಿಲ್ಲ ಹಾಗೂ ಕಳಪೆ ಮಟ್ಟದಾಗಿರುತ್ತದೆ. ರಾತ್ರಿ ವೇಳೆ ಬೆಳಕು ಇಲ್ಲದಿರುವುದರಿಂದ ತಿರುವು ಇರುವ ಜಾಗದಲ್ಲಿ ಅಪಘಾತಗಳು ಹಾಗೂ ಕಳ್ಳತನಕ್ಕೆ ಎಡವು ಮಾಡಿಕೊಡುತ್ತದೆ. ಮೇಲ್ಸೇತುವೆ ಕೂಡು ರಸ್ತೆಗಳಲ್ಲಿ ಸರಿಯಾಗಿ ರಸ್ತೆ ನಿರ್ಮಿಸದೆ ಹಳ್ಳ ಕೊಳ್ಳಗಳಿದ್ದು ಎದುರು ಬರುವ ವಾಹಗಳು ಎತ್ತ ಚಲಿಸುತ್ತವೆ ಎಂಬುದೇ ಗೊತ್ತಾಗುವುದಿಲ್ಲ. ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿ ನಂತರ ಇದರ ಉದ್ಘಾಟನೆ ಮಾಡಬೇಕೆಂದು ಮನವಿ ಮಾಡಲಾಯಿತು.
ಇದಕ್ಕೆ ಸ್ಪಂದಿಸಿದ ಶಾಸಕರು ಮೊದಲ ಸಭೆಯಲ್ಲೇ ಇದಕ್ಕೆ ಒತ್ತುಕೊಡುವುದಾಗಿ ಭರವಸೆ ಕೊಟ್ಟರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಕಾರ್ಯದರ್ಶಿ ಕೆ.ವಿ. ಪ್ರಕಾಶ್, ಉಪಾಧ್ಯಕ್ಷ ಎಲ್. ನರಸಿಂಹಯ್ಯ, ಜಂಟಿಕಾರ್ಯದರ್ಶಿ ಟಿ. ಪಶುಪತಿ, ಕನ್ನಡ ರಕ್ಷಣಾವೇದಿಕೆಯ ಅಧ್ಯಕ್ಷ ವೀರಪ್ಪ ದೇವರು, ರಾಮ್ ಪ್ರಸಾದ್, ಜಯನಗರ ಬನಶಂಕರಿ ದೇವಸ್ಥಾನದ ಅಧ್ಯಕ್ಷ ಕೃಷ್ಣಸ್ವಾಮಿ, ಪ್ರಾಣೇಶ್ ರಟ್ಟಿಹಳ್ಳಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

