ಒಕ್ಕಲಿಗರ ಸಂಘ ಪೂರ್ವಭಾವಿ ಸಭೆ
ಹುಳಿಯಾರು: ತಾಲೂಕಿನ ಒಕ್ಕಲಿಗ ಸಂಘದ ಕಾರ್ಯಕಾರಿ ಮಂಡಳಿ ರಚಿಸುವ ನಿಟ್ಟಿನಲ್ಲಿ ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಯಿತು. ರಾಜ್ಯದಲ್ಲಿನ ಒಕ್ಕಲಿಗ ಸಮುದಾಯವು 114 ರಷ್ಟು ಉಪಜಾತಿಗಳನ್ನು ಒಳಗೊಂಡಿದೆ. ಇವರೆಲ್ಲರೂ ಒಂದುಗೂಡಿ ಸಂಘಟಿತರಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಮಗ್ರ ಅಭಿವೃದ್ದಿಯಾಗುವ ಮೂಲಕ ಪ್ರಬಲ ಶಕ್ತಿಯಾಗಿ ಬೆಳೆಯಲು ಸಾಧ್ಯ. ಆದುದರಿಂದ ತಾಲೂಕಿನ ಎಲ್ಲಾ ಭಾಗಗಳ ಒಕ್ಕಲಿಗ ಜನಾಂಗದವರು ಒಗ್ಗೂಡಿ ಸಂಘಟಿತರಾಗುವ ಅನಿವಾರ್ಯತೆಯಿದ್ದು ಜೂನ್ 2ನೇ ತಾರೀಕು ಹುಳಿಯಾರು ಸಂಮಿಪದ ಶ್ರೀರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಒಕ್ಕಲಿಗ ಸಂಘದ ಕಾರ್ಯಕಾರಿ ಮಂಡಳಿಯನ್ನು ರಚಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಂಡರು. ಸಭೆಯಲ್ಲಿ ತಾಲೂಕು ಪುರಸಭಾ ಸದಸ್ಯರಾದ ಪ್ರಕಾಶ್,ಶೇಖರ್, ತಾಲ್ಲೂಕು ಒಕ್ಕಲಿಗ ನೌಕರರ ವೇದಿಕೆಯ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ವಕೀಲ ಮೇಲನಹಳ್ಳಿ ಸದಾಶಿವು, ಬೋರ್ವೆಲ್ ಕಾಂತರಾಜು, ದಬ್ಬಗುಂತೆ ಸತ್ಯನಾರಾಯಣ, ಗುರುವಾಪುರ ಲೋಕೇಶ್ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಭೆ
ಗುಬ್ಬಿ: 2013-14 ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮಗಳು ಅವಲೋಕನ ಹಾಗೂ ಮಾರ್ಗದರ್ಶನ ನೀಡಲು ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರ ಸಭೆಯನ್ನು ಗುಬ್ಬಿಯ ಚಿದಂಬರಾಶ್ರಮದಲ್ಲಿ ಕರೆಯಲಾಗಿದೆ. ಮೇ 20ರಂದು ಬೆಳಿಗ್ಗೆ 10 ಗಂಟೆಗೆ ಕಸಬಾ ಹೋಬಳಿ, ಮದ್ಯಾಹ್ನ 2 ಗಂಟೆಗೆ ಸಿ.ಎಸ್.ಪುರ ಹೋಬಳಿ, 21 ರಂದು ಬೆಳಿಗ್ಗೆ 10 ಗಂಟೆಗೆ ಕಡಬ ಹೋಬಳಿ, ಮಧ್ಯಾಹ್ನ 2 ಗಂಟೆಗೆ ನಿಟ್ಟೂರು ಹೋಬಳಿ, 22ರಂದು ಬೆಳಿಗ್ಗೆ 10 ಗಂಟೆಗೆ ಹಾಗಲವಾಡಿ ಹೋಬಳಿ, ಮದ್ಯಾಹ್ನ 2 ಗಂಟೆಗೆ ಚೇಳೂರು ಹೋಬಳಿಯ ಎಲ್ಲ ಮುಖ್ಯಶಿಕ್ಷಕರು,ಸಹ ಶಿಕ್ಷಕರ, ಸಿಆರ್ಬಿ, ಬಿಆರ್ಬಿ ಹಾಗೂ ಇ ಸಿ ಓ ಗಳು ಕಡ್ಡಾಯವಾಗಿ ಹಾಜರಾಗಲು ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ.ಬಸವರಾಜು ತಿಳಿಸಿದ್ದಾರೆ.
ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಕೋಲಾರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟು ಮತ್ತೊಬ್ಬ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೋಲಾರ-ಶ್ರೀನಿವಾಸಪುರ ರಸ್ತೆಯ ಮೂರಾಂಡಹಳ್ಳಿ ಗೇಟ್ ಬಳಿ ಬುಧವಾರ ನಡೆದಿದೆ. ಹೋಳೂರು ಗ್ರಾಮದ ಗೌತಮ್ (22) ಮೃತಪಟ್ಟ ಯುವಕ. ಗಾಯಾಳು ಚಿನ್ನಿ ಪ್ರಕಾಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಕೋಲಾರದಿಂದ ಚಿಂತಾಮಣಿ ಕಡೆಗೆ ಹೋಗುತ್ತಿದ್ದ ಬಸ್ಸು ಶ್ರೀನಿವಾಸಪುರದಿಂದ ಕೋಲಾರ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

