ತುಮಕೂರು

ಡಾ.ಜಿ. ಪರಮೇಶ್ವರ ಡಿಸಿಎಂ ಮಾಡಿ

Published On :

ಮಧುಗಿರಿ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಮಾಣಿಕವಾಗಿ ಶ್ರಮಿಸಿದ್ದು ಅವರ ಕಾರ್ಯ ವೈಖರಿ ಮೆಚ್ಚಿ ಕಾಂಗ್ರೆಸ್ ಹೈಕಮಾಂಡ್  ಉಪಮುಖ್ಯಮಂತ್ರಿ ಸ್ಥಾನ ನೀಡುವ ಜತೆಗೆ ಮಧುಗಿರಿ ಕ್ಷೆತ್ರದ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಮಂತ್ರಿ ಮಾಡಬೇಕು ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ತಾ.ಅಧ್ಯಕ್ಷ ನೇರಳೇಕೆರೆ ಬಿ.ರಂಗನಾಥ್ ಒತ್ತಾಯಿಸಿದ್ದಾರೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೆಲ ಸ್ವಾರ್ಥ ರಾಜಕಾರಣಿಗಳ ಕುತಂತ್ರದಿಂದ ಪರಮೇಶ್ವರ್ ಸೋಲ  ಬೇಕಾಯಿತೆ  ಹೊರೆತು ಪ್ರಬುದ್ಧ ಮತದಾರರಿಂದಲ್ಲ, ಕೆಲವರು ಮತದಾರರನ್ನು ದಿಕ್ಕು ತಪ್ಪಿಸಿ  ಕುತಂತ್ರ ರಾಜಕಾರಣ ಮಾಡಿದ್ದೇ ಪರಮೇಶ್ವರ ಸೋಲಿಗೆ ಕಾರಣವಾಗಿದೆ ಎಂದು ಹೇಳಿದ  ರಂಗನಾಥ್, ಯಾರ ಮನಸ್ಸಿಗೂ ನೋವಾಗದ ರೀತಿ  ಹಗಲಿರುಳು ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಅಧಿಕಾರಕ್ಕೆ ತಂದ  ಪ್ರಗತಿ ಶೀಲ ರಾಜಕಾರಣಿ ಡಾ.ಜಿ.ಪರಮೇಶ್ವರ ಅವರಿಗೆ ಡಿಸಿಎಂ ಸ್ಥಾನ ನೀಡಿ  ಎಂದಿದ್ದಾರೆ.

ಬಡವರ ಕಷ್ಟಗಳಿಗೆ ಸ್ಪಂದಿಸಿ: ಸ್ವಾಮೀಜಿ
ಶಿರಾ: ಬಡವ ಬಲ್ಲಿದನೆಂಬ ಭೇದ ಭಾವವಿಲ್ಲದೆ ನಿರಂತರ ಸೇವೆಯಿಂದ ಜನಸಾಮಾನ್ಯರ ಮನ ಗೆಲ್ಲಲು ಸಾಧ್ಯ. ಕ್ಷೇತ್ರದ ಜನರ ನಂಬಿಕೆ ಭರವಸೆಗಳು ಹುಸಿಯಾಗದಂತೆ ಕಾರ್ಯ ನಿರ್ವಹಿಸಿ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಆಶ್ರಯ ನೀಡುವುದರ ಜೊತೆಗೆ ಬಡವರ ಕಷ್ಟಗಳಿಗೆ  ಸ್ಪಂದಿಸುವ ಮನೋಭಾವ ರೂಢಿಸಿಕೊಂಡಾಗ ಮಾತ್ರ ಜನನಾಯಕರಾಗಲು ಸಾಧ್ಯ ಎಂದು ಶ್ರೀ ನಂಜಾವಧೂತ ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ. ಅವರು ತಾಲೂಕಿನ ಪಟ್ಟನಾಯಕನಹಳ್ಳಿಯ ಶ್ರೀಮಠಕ್ಕೆ ಆಗಮಿಸಿದ್ದ ಕೊರಟಗೆರೆ ನೂತನ ಶಾಸಕ ಪಿ.ಆರ್. ಸುಧಾಕರ್ಲಾಲ್ ಅವರಿಗೆ ಆರ್ಶೀವಚನ ನೀಡಿ ಮಾತನಾಡಿ ಜನರ ಪ್ರೀತಿ ವಿಶ್ವಾಸದ ಮುಂದೆ ಹಣ ನಗಣ್ಯ ಎಂದರು. ಕೊರಟಗೆರೆ ಕ್ಷೇತ್ರದ ಮತದಾರರ ನಿರೀಕ್ಷೆಗಳಿಗೆ ತಕ್ಕಂತೆ ರಸ್ತೆ, ಶಾಶ್ವತ ನೀರಾವರಿ ಯೋಜನೆ ರೂಪಿಸುವಲ್ಲಿ ಆಡಳಿತಾರೂಢ ಸರ್ಕಾರದೊಂದಿಗೆ ಸ್ನೆಹ ಸೌಹಾರ್ದತೆಯಿಂದ ನಡೆದುಕೊಂಡು ಅಭಿವೃದ್ಧಿ ಕಾಮಗಾರಿ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಶ್ರೀಗಳು ಶಾಸಕರಿಗೆ ಸಲಹೆ ನೀಡಿದರು.

ವಿದ್ಯುತ್ ಶಾಕ್: ಯುವಕ ಸಾವು
ತುಮಕೂರು: ವಿದ್ಯುತ್ ಶಾಕ್ನಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಡಿ.ಎಂ. ಪಾಳ್ಯದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಪಶ್ಚಿಮ ಬಂಗಾಳದ ಎಲ್ ಅಂಡ್ ಟಿ ಕಂಪನಿಯ ಸದ್ದಾಂ (25) ಎಂಬ ಯುವಕನೇ ಸಾವನ್ನಪ್ಪಿದ ದುರ್ದೈವಿ. ಈತ ವಿದ್ಯುತ್ ತಂತಿ ಬದಲು ಮಾಡುತ್ತಿರುವಾಗ ಅನಿರೀಕ್ಷಿತವಾಗಿ ವಿದ್ಯುತ್ ಹರಿದು ಸಾವನ್ನಪ್ಪಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.