'ಬಸವಣ್ಣನವರ ವ್ಯಕ್ತಿತ್ವವೇ ಒಂದು ಮಹಾನ್ ಕಾವ್ಯ'
ತುಮಕೂರು: ಬಸವಣ್ಣನವರ ವ್ಯಕ್ತಿತ್ವವೇ ಒಂದು ಮಹಾನ್ ಕಾವ್ಯ ಎಂದು ಹಿರಿಯ ಕವಿ ಕಾವ್ಯಸುಧಾ ಪ್ರಿಯ ರಂಗಯ್ಯ ಅಭಿಪ್ರಾಯಪಟ್ಟರು. ಅವರು ನಗರದಲ್ಲಿ ಸಾಹಿತ್ಯ, ಸಂಸ್ಕೃತಿ ಕಲಾ ವೇದಿಕೆಯಿಂದ ಬಸವ ಜಯಂತಿ ಅಂಗವಾಗಿ ನಡೆದ ಬಸವಣ್ಣನವರ ಕುರಿತ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರ ವಿಚಾರಗಳು ಸಾಹಿತ್ಯಿಕವಾಗಿ ಕೂಡ ಪ್ರಸಿದ್ಧಿ ಪಡೆದಿವೆ. ಸಾಹಿತ್ಯಿಕ ಮೌಲ್ಯಗಳಿಂದಾಗಿ ವಚನ ಸಾಹಿತ್ಯ ಮೇರುಮಟ್ಟದಲ್ಲಿದೆ. ಈ ನಿಟ್ಟಿನಲ್ಲಿ ಸಾಹಿತ್ಯ, ಸಂಸ್ಕೃತಿ ಕಲಾವೇದಿಕೆ ವತಿಯಿಂದ ನಡೆಯುತ್ತಿರುವ ಬಸವಣ್ಣನವರ ಕುರಿತಾದ ಕವಿಗೋಷ್ಠಿ ಸ್ತುತ್ಯಾರ್ಹ ಎಂದರು. ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಬಿ.ಸಿ. ಶೈಲಾ ನಾಗರಾಜ್ ಮಾತನಾಡಿ ವಿಶ್ವ ಸಾಹಿತ್ಯವಾಗಿರುವ ವಚನ ಸಾಹಿತ್ಯದಲ್ಲಿ ಬಸವಣ್ಣನವರ ವಚನಗಳಲ್ಲಿ ಅತ್ಯಂತ ಕಾವ್ಯಾತ್ಮಕ ಗುಣವಿದೆ. ಆಡುಮಾತಿನ, ಸರಳ ವಚನಗಳಲ್ಲಿ ಅನುಭಾವಿಕತನ ಮಡುಗಟ್ಟಿದೆ ಎಂದರು. ಸಾರ್ವಕಾಲಿಕವಾದ ವಚನಗಳು ಸಾಮಾನ್ಯರನ್ನು ತಟ್ಟುವ ಪರಿ ಅನನ್ಯವಾದುದು ಶರಣ ಸಾಹಿತ್ಯದ ಮೌಲ್ಯಗಳು ಹೆಚ್ಚೆಚ್ಚು ಪ್ರಸ್ತುತವಾಗಬೇಕಾದ ಈ ಕಾಲಘಟ್ಟದಲ್ಲಿ ಬಸವ ಜಯಂತಿ ಆಚರಣೆ ಈ ಕವಿಗೋಷ್ಠಿ ಮೂಲಕ ಅರ್ಥಪೂರ್ಣವಾಗಿದೆ ಎಂದರು. ಬಾಪುಜ, ಹರಳೂರು ಶಿವಕುಮಾರ್, ಶೆನಂಸಿ, ಸುಶೀಲಾ ಸದಾಶಿವಯ್ಯ, ತು.ರಾ. ಸುಂದರರಾಜ್, ಸುಮ ಶ್ರೀ ಹರ್ಷ ಮುಂತಾದವರು ಕವಿತೆಗಳನ್ನು ವಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

