ತುಮಕೂರು

'ಸಿದ್ದರಾಮಯ್ಯರಿಂದ ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದನೆ'

Published On :

ಶಿರಾ: ರಾಜ್ಯದ ಹಾಲು ಉತ್ಪಾದಕರಿಗೆ ಒಂದು ಲೀಟರ್‌ಗೆ ನಾಲ್ಕು ರು.ಗಳ ಹೆಚ್ಚಳ ಮಾಡುವ ಮೂಲಕ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲು ಉತ್ಪಾಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಕೈಗೊಂಡಿದ್ದಾರೆ ಎಂದು ತುಮಕೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೆಶಕ ಎಚ್.ಎಸ್.ಮೂಡಲಗಿರಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 ರಾಜ್ಯದಲ್ಲಿ ಒಟ್ಟು 13 ಹಾಲು ಒಕ್ಕೂಟಗಳಿದ್ದು ಒಂದು ದಿನಕ್ಕೆ 50 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ. 50 ಲಕ್ಷ ಲೀಟರ್‌ಗೆ 4 ರು.ಗಳಂತೆ ಒಂದು ದಿನಕ್ಕೆ 4 ಕೋಟಿ ರು., ಒಂದು ತಿಂಗಳಿಗೆ 120 ಕೋಟಿ ರು, ಒಂದು ವರ್ಷಕ್ಕೆ 1440 ಕೋಟಿಗಳನ್ನು ಹಾಲು ಉತ್ಪಾದಕರಿಗೆ ನೀಡಿದಂತಾಗಿದ್ದು, ನಿಜಕ್ಕೂ ಇದು ಸಿದ್ದರಾಮಯ್ಯ ಅವರ ಅಭೂತಪೂರ್ವ ಸಾಧನೆಯೆ ಸರಿ. ತುಮಕೂರು ಹಾಲು ಒಕ್ಕೂಟವು ಒಂದು ದಿನಕ್ಕೆ 4 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು ಸಿದ್ದರಾಮಯ್ಯನವರ ಈ ನಿಲುವಿನಿಂದಾಗಿ ಪ್ರತಿ ತಿಂಗಳು ಜಿಲ್ಲೆಯ ಹಾಲು ಉತ್ಪಾದಕರಿಗೆ ಸುಮಾರು 1.50 ಕೋಟಿ ರು.ಗಳ ಲಾಭಾಂಶ ಲಭ್ಯವಾಗಲಿದೆ ಎಂದರು.
ರಾಜ್ಯದ ಎಲ್ಲಾ ಜನಾಂಗದ ದನಗಾಯಿಗಳಿಗೆ ಸ್ಪಂದಿಸುವಂತಹ ತೀರ್ಮಾನ ಕೈಗೊಂಡಿರುವುದು ಇತಿಹಾಸದಲ್ಲಿ ಬರೆದಿಡುವಂತಹ ನಿರ್ಧಾರವಾಗಿದೆ ಎಂದು ಮೂಡಲಗಿರಿಯಪ್ಪ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.