ಅಕ್ಯೂಪಂಚರ್, ಅಕ್ಯೂಪ್ರಷರ್ ಚಿಕಿತ್ಸೆ ಅತ್ಯುತ್ತಮ: ಬಸವರಾಜ್
ತಿಪಟೂರು: ಸರ್ವರೋಗಕ್ಕೂ ಉಪಯುಕ್ತವಾದ ಅಕ್ಯೂಪಂಚರ್ ಮತ್ತು ಅಕ್ಯೂಪ್ರಷರ್ ಚಿಕಿತ್ಸಾ ಪದ್ಧತಿಯಿಂದ ಸಾಕಷ್ಟು ಅನುಕೂಲಗಳಿವೆ ಎಂದು ಸಂಕಲ್ಪ ಶ್ರೀ ಹೆಲ್ತ್ ಎಜುಕೇಷನ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಡಿ.ಆರ್. ಬಸವರಾಜ್ ಅಭಿಪ್ರಾಯಪಟ್ಟರು.
ನಗರದ ನೌಕರರ ಭವನದ ಸಭಾಂಗಣದಲ್ಲಿ ಸಂಕಲ್ಪ ಶ್ರೀ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಏರ್ಪಡಿಸಿದ್ದ ಅಕ್ಯೂಪಂಚರ್ ಮತ್ತು ಅಕ್ಯೂಪ್ರಷರ್ ಚಿಕಿತ್ಸೆ ಕುರಿತಾದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ವೈದ್ಯಪದ್ಧತಿ ಅತ್ಯಂತ ಪ್ರಾಚೀನವಾಗಿದ್ದು, ಸಾವಿರಾರು ವರ್ಷಗಳಿಗಿಂತಲೂ ಹಿಂದಿನಿಂದ ಋಷಿಮುನಿಗಳಿಂದ ಬಳುವಳಿಯಾಗಿ ಬಂದ ವಿದ್ಯೆಯಾಗಿದೆ. ಅಕ್ಯೂಪಂಚರ್ ಮತ್ತು ಅಕ್ಯೂಪ್ರಷರ್ ಚಿಕಿತ್ಸಾ ಪದ್ಧತಿ ಭಾರತೀಯ ವೈದ್ಯ ವಿದ್ಯೆಗಳಲ್ಲಿ ಪ್ರಾಚೀನವಾಗಿದೆ. ಹಲವು ವರ್ಷಗಳ ಹಿಂದೆ ಭಾರತದಿಂದ ಹೋದ ಬೌದ್ಧ ಭಿಕ್ಷುಗಳು ಚೀನಾ ಮತ್ತು ಇತರೆ ದೇಶಗಳಿಗೆ ಕೊಂಡೊಯ್ದರು. ಅಲ್ಲಿ ಹೆಚ್ಚು ಪ್ರಬುದ್ಧವಾದ ವೈದ್ಯಪದ್ಧತಿಗಳಲ್ಲಿ ಒಂದಾಗಿದೆ. ಸಂಕಲ್ಪಶ್ರೀ ಸಂಸ್ಥೆ ವತಿಯಿಂದ ಬಡವರು ಸೇರಿದಂತೆ ಎಲ್ಲಾ ವರ್ಗದ ಆರೋಗ್ಯವಂಚಿತರಿಗೆ ಆರೋಗ್ಯ ದೊರಕುವಂತಾಗಬೇಕೆಂಬ ದೃಷ್ಟಿಯಿಂದ ಕಡಿಮೆ ಖರ್ಚಿನಲ್ಲಿ ತಮ್ಮ ಮನೆಯಲ್ಲಿ ಪರಿಹಾರ ಪಡೆಯುವ ಪದ್ಧತಿಗಳಲ್ಲಿ ಒಂದಾದ ಅಕ್ಯೂಪಂಚರ್ ಮತ್ತು ಅಕ್ಯೂಪ್ರಷರ್ ಪದ್ಧತಿಯ ಬಗ್ಗೆ ಅರಿವು ಕಾರ್ಯಾಗಾರ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಕ್ಯೂಪಂಚರ್ ಮತ್ತು ಅಕ್ಯೂಪ್ರಷರ್ ಪರಿಣಿತ ಸಾಧಿಕ್ ಪಾಷ ಮಾತನಾಡಿ ಕಡಿಮೆ ಖರ್ಚಿನಲ್ಲಿ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡಬಹುದಾಗಿದ್ದು, ಭಾರತದಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಮತ್ತು ವಿದೇಶ ಔಷಧಗಳ ಅತಿಯಾದ ವ್ಯಾವೋಹದಿಂದ ದುಬಾರಿ ವೆಚ್ಚತೆತ್ತು ವಿದೇಶಿ ಔಷಧಗಳ ಮೂಲಕ ಕ್ಷಣಿಕ ಸುಖಕ್ಕಾಗಿ ಆರೋಗ್ಯ ಹಾಳುಮಾಡಿಕೊಳ್ಳುಂತಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

