ಸಮಸ್ಯೆ ಪರಿಹಾರಕ್ಕೆ ಸಂಘಟಿತ ಒತ್ತಡ ಅಗತ್ಯ: ಶಿವಾಚಾರ್ಯ ಸ್ವಾಮೀಜಿ ಕರೆ
ತುಮಕೂರು: ಸಮಸ್ಯೆಗಳನ್ನು ಪರಿಹಾರಕ್ಕಾಗಿ ನಾಗರಿಕರು ಸಂಘಟಿತರಾಗಬೇಕು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಅವರು ನಗರದ ಸದಾಶಿವನಗರದಲ್ಲಿ ಆಯೋಜಿಸಿದ್ದ ನಾವು ನೀವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಡೀ ಬಡಾವಣೆಯ ಜನರು ಸೇರಿ ವೋಟ್ ಬ್ಯಾಂಕ್ ಮಾಡಿಕೊಂಡು ಬಡಾವಣೆಯ ಸಮಸ್ಯೆಗಳು ಬಗೆಹರಿಸುವಂತೆ ಒತ್ತಡ ಹೇರಬೇಕಾಗುತ್ತದೆ ಎಂದು ನುಡಿದರು.
ಈ ಸಮ್ಮಿಲನ ಕಾರ್ಯಕ್ರಮ ಬಡಾವಣೆಯ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆಯಾಗಿದೆ. ಈ ವೇದಿಕೆಯನ್ನು ಮುನ್ನಡೆಸುತ್ತಿರುವ ಯುವಕ ಡಿ.ಎಲ್. ಶಶಿಕುಮಾರ್ ಅವರ ಪ್ರಯತ್ನ ಅಭೂತಪೂರ್ವವಾಗಿದ್ದು ಇದಕ್ಕೆ ಬಡಾವಣೆಯ ನಾಗರಿಕರ ಬೆಂಬಲ ಉತ್ತಮವಾಗಿದೆ ಎಂದರು.
ಕಾಯಕವೇ ಕೈಲಾಸ ನಾಡಿನಲ್ಲಿ ಜನರಲ್ಲಿ ಆಲಸ್ಯ ಮನೋಭಾವ ಬೆಳೆಸುವುದು ಸೂಕ್ತವಲ್ಲ. ಶ್ರಮವಿಲ್ಲದೆ ಸವಲತ್ತು ನೀಡುವುದರಿಂದ ಅಪರಾಧಗಳು ಹೆಚ್ಚಾಗುತ್ತವೆ. ಭಾರತದಲ್ಲಿ ಭಕ್ತರಿದ್ದಾರೆ, ಉತ್ತಮ ವ್ಯಕ್ತಿಗಳಿದ್ದಾರೆ. ಆದರೆ ಉತ್ತಮ ನಾಗರಿಕರಿಲ್ಲ. ಉತ್ತಮ ನಾಗರಿಕರಿಗಾಗಿ ನಾಗರಿಕ ಪಾಠಶಾಲೆಗಳನ್ನು ತೆರೆಯಬೇಕಾಗುತ್ತದೆ ಎಂದರು.
ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಅಧ್ಯಕ್ಷ ಸಿದ್ಧಲಿಂಗೇಗೌಡ ಮಾತನಾಡಿದರು. 11ನೇ ವಾರ್ಡ್ನ ಸದಸ್ಯ ವೆಂಕಟೇಶ್ ಮಾತನಾಡಿ ಬಡಾವಣೆಯಲ್ಲಿರುವ ನೀರಿನ ಸಮಸ್ಯೆ, ರಸ್ತೆ, ಕಸವಿಲೇವಾರಿ, ಕುಂದುಕೊರತೆಗಳನ್ನು ತುರ್ತಾಗಿ ನಿವಾರಿಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

