ಜನಪ್ರತಿನಿಧಿಗಳು ಪಕ್ಷಭೇದ ಬಿಟ್ಟು ಕಾರ್ಯನಿರ್ವಹಿಸಲಿ
ಕ.ಪ್ರ. ವಾರ್ತೆ , ಮಧುಗಿರಿ , ಮೇ 20
ಜನ ಪ್ರತಿನಿಧಿಯಾಗಿ ಆಯ್ಕೆಯಾಗುವುದೇ ಪೂರ್ವ ಜನ್ಮದ ಪುಣ್ಯ. ಜನರ ಪ್ರೀತಿ, ವಿಶ್ವಾಸಗಳಿಸಿ ಆರಿಸಿ ಬಂದ ಮೇಲೆ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಬಾರದು. ಅದರಂತ ಪಾಪದ ಕೆಲಸ ಮತ್ತೊಂದಿಲ್ಲ. ಜನ ಪ್ರತಿನಿಧಿಗಳು ಪಕ್ಷ ಭೇದ ಬಿಟ್ಟು ಮುತುವರ್ಜಿ ವಹಿಸಿ ಜನರ ಕೆಲಸ ಮಾಡಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ಕರೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಪಿಡಿಓಗಳ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ತಲೆ ದೋರಿರುವ ಕುಡಿವ ನೀರಿನ ಸಮಸ್ಯೆಯನ್ನು ಅಧಿಕಾರಿಗಳು, ಚುನಾಯಿತ ಜನ ಪ್ರತಿನಿಧಿಗಳು ಮುತುವರ್ಜಿ ವಹಿಸಿ ಒಂದು ವಾರದೊಳಗೆ ಬಗೆ ಪರಿಹರಿಸಬೇಕು. ಕುಡಿವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಆಯಾಯ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ಗಳನ್ನು ಹದ್ದು ಬಸ್ಸಿನಲ್ಲಿಟ್ಟು ಸಮರ್ಪಕ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸರ್ಕಾರದ ಆಸ್ತಿ ರಕ್ಷಿಸಲು ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ತಾಕೀತು ಮಾಡಿದರು.
ಸೂಕ್ತ ಕ್ರಮ ಕೈಗೊಳ್ಳಿ: ಅರ್ಹ ಫಲಾನುಭವಿಗಳಿಗೆ ಮನೆ, ಶೌಚಾಲಯ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ನಿವೇಶನ ಬಡವರಿಗೆ ದೊರಕಬೇಕು. ಮುಂದೆ ಜನ ಸಂಪರ್ಕ ಸಭೆ ಮಾಡುವ ಸಂದರ್ಭದಲ್ಲಿ ರೇಷನ್ ಕಾರ್ಡ್, ವೃದ್ಧಾಪ್ಯ ವೇತನ ಕೊಡಿಸಲು ಪ್ರಯತ್ನಿಸೋಣ. ಚುನಾವಣೆ ಆಗುವವರೆಗೆ ಮಾತ್ರ ಪಕ್ಷನಂತರ ಶಾಸಕರು ಎಲ್ಲರಿಗೂ ಸೇರಿದ ಜನಪ್ರತಿನಿಧಿ ಎಂದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ. ತಾರತಮ್ಯ ಮಾಡದೇ ಜನರ ಸೇವೆ ಮಾಡೋಣ ಎಂದರು.
ನಂತರ ಮುದ್ದೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಬಾಬುರೆಡ್ಡಿ ನಮ್ಮ ಭಾಗ ಆಂಧ್ರದ ಗಡಿಗೆ ಹೊಂದಿದ್ದು ಕಸಿನಾಯಕನಹಳ್ಳಿ, ತೆರಿಯೂರು, ಪೋಲೇನಹಳ್ಳಿ ಭಾಗದಲ್ಲಿ ಕುಡಿವ ನೀರಿಗೆ ತುಂಬಾ ತೊಂದರೆ ಎದುರಾಗಿದೆ ಎಂದು ಸಭೆಗೆ ತಿಳಿಸಿದರು.
ನೀರು, ನಿವೇಶನ: ತಾಲೂಕಿನ ಎಲ್ಲ ಪಂಚಾಯಿತಿ ಅಧ್ಯಕ್ಷರು ಕೂಡ ಹೆಚ್ಚು ಕಮ್ಮಿ ನೀರು, ನಿವೇಶನದ ಬಗ್ಗೆ ಗಮನ ಸೆಳೆದರು. ಅಧಿಕಾರಿಗಳು ಒಂದು ವಾರದ ಒಳಗೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಎಇಇ ಲೋಕೇಶ್ ಅವರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿ.ಪಂ ಸದಸ್ಯರಾದ ಶಾಂತಲ ರಾಜಣ್ಣ, ಎಚ್. ಕೆಂಚಮಾರಯ್ಯ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಇಓ ಮಹಾಲಿಂಗಪ್ಪ, ಮುಖಂಡ ತುಂಗೋಟಿ ರಾಮಣ್ಣ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ದ್ವಾರಕನಾಥ್, ಎಂ.ಎಸ್. ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜ್ಗೋಪಾಲ್, ಗುಟ್ಟೆ ಚಿಕ್ಕರಂಗಪ್ಪ, ತಾ.ಪಂ.ಮಾಜಿ ಸದಸ್ಯ ನರಸಿಂಹಯ್ಯ, ಎಇಇ ಲೋಕೇಶ್ ಮತ್ತು ತಾ.ಎಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

