ಜನಾದೇಶ ಪಡೆದು ಆಯ್ಕೆಯಾದ ಶಾಸಕರಿಗೆ ಸಹಕಾರ ನೀಡಲೇಬೇಕು
ಪಾವಗಡ: ಜನಾದೇಶ ಪಡೆದು ಆಯ್ಕೆಯಾಗಿ ಬಂದ ಶಾಸಕರಿಗೆ ಜನಪರ ಆಡಳಿತದಲ್ಲಿ ಸಹಕಾರ ನೀಡುವುದು ಇಲಾಖೆ ಅಧಿಕಾರಿಗಳ ಜವಾಬ್ದಾರಿ ಎಂದು ತಾಪಂ ಇಒ ರಂಗನಾಥ್ ಹೇಳಿದರು.
ಅವರು ತಾಪಂನಲ್ಲಿ ಏರ್ಪಾಡಿಸಿದ್ದ ಕೆಡಿಪಿ ಸಭೆಯಲ್ಲಿ ತಾ,ಮಟ್ಟದ ಅಧಿಕಾರಿಗಳಿಂದ ನೂತನ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದರು.
ಜನರಿಂದ ಆಯ್ಕೆಯಾದ ಶಾಸಕರಾಗಲಿ ಅಥವಾ ಇಲಾಖಾ ಮಟ್ಟದ ಅಧಿಕಾರಿಗಳಿಗಾಗಲಿ ಇರುವ ಉದ್ದೇಶ ಒಂದೇ. ಅದು ಜನಪರ ಸೇವೆ. ಆ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಜವಾಬ್ದಾರಿಯಾಗಿದ್ದು ಜನಪರ ಆಡಳಿತ ಅನುಷ್ಠಾನದಲ್ಲಿ ಇಲಾಖಾ ವ್ಯಾಪ್ತಿಯಲ್ಲಿ ಶಾಸಕರಿಗೆ ಅನುಗುಣವಾಗಿ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಆಡಳಿತ ವರ್ಗ ಕಾರ್ಯಪ್ರವೃತ್ತರಾಗಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಬದಲಾವಣೆ ಬಯಸಿ ಜನತೆ ನೂತನ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ ಹಿನ್ನಲೆಯಲ್ಲಿ ಜನತೆಯ ನಂಬಿಕೆಗೆ ಅನುಗುಣವಾಗಿ ಕೆಲಸ ಮಾಡಲು ಶಾಸಕರು ಹೊರಟಾಗ ಆಡಳಿತ ವರ್ಗ ಸ್ಪಂದಿಸುವುದು ಕರ್ತವ್ಯವೆಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ತಾಪಂ ಇಒ ರಂಗನಾಥ್ ಹಾಗೂ ಜಿಪಂ ಎಇಇ ಆಶೋಕರೆಡ್ಡಿ ನೇತೃತ್ವದಲ್ಲಿ ನೂತನ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರನ್ನು ಗಂಧದ ಹೂಮಾಲೆಯೊಂದಿಗೆ ಅಭಿನಂದಿಸಿ ಜನತೆಯ ಕಷ್ಟ ಸುಖ ಪರಿಹರಿಸುವಲ್ಲಿ ಆಡಳಿತ ವರ್ಗ ಸದಾ ತಮ್ಮೊಂದಿಗಿದ್ದು ಪ್ರಾಮಾಣಿಕ ಸಹಕಾರ ನೀಡಿ ಆಡಳಿತಕ್ಕೆ ಕಪ್ಪು ಚುಕ್ಕೆ ಬರದ ರೀತಿಯಲ್ಲಿ ನಡೆದುಕೊಳ್ಳುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಜಲಾನಯನ ಅಧಿಕಾರಿ ಪುಟ್ಟರಂಗಪ್ಪ, ವಲಯ ಆರಣ್ಯಾ ಇಲಾಖೆಯ ಸಯ್ಯದ್, ಸಮಾಜ ಕಲ್ಯಾಣಾಧಿಕಾರಿ ವೈ.ಆರ್. ಚೌದರಿ, ತಾಪಂ ಲೆಕ್ಕಾ ಪರೀಶೋಧಕ ಚಂದ್ರಶೇಖರ್, ಎಸ್.ಸಿ. ನಿಗಮ ಅಧಿಕಾರಿ ತಿಮ್ಮರಾಯಪ್ಪ, ಜಿಪಂ ಎಇ ದೇಶಪಾಂಡೆ, ಸಾಕ್ಷರ್ ಭಾರತ್ ಸಂಯೋಜಕ ಭಾಸ್ಕರ್ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

